ನ್ಯೂಯಾರ್ಕ್: ಅಮೆರಿಕದ ಖ್ಯಾತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಬರಹಗಾರ್ತಿ ಅಬ್ಬಿ ಗೋವಿಂದನ್(Abby Govindan) ಅವರು ಭಾರತಕ್ಕೆ ಬಂದಾಗ ನಡೆದ ಸ್ವಾರಸ್ಯಕರ ವಿಚಾರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಬ್ಬಿ ಗೋವಿಂದನ್ ಭಾರತದ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅವರ ಬಳಿ ತೆರಳಿ ತಾನು ಅಪ್ಪಟ ಬ್ಯಾಡ್ಮಿಂಟನ್ ಅಭಿಮಾನಿ. ನಿಮ್ಮ ಜತೆ ಒಂದು ಫೋಟೊ ತೆಗೆಯಬೇಕು ಎಂದು ಕೇಳಿದ್ದಾರೆ. ಇದೇ ವೇಳೆ ಅಬ್ಬಿ ಅವರು ಒಂದು ಕ್ಷಣ ಗಾಬರಿಯಾಗಿದ್ದಾರೆ. ಅಸಲಿಗೆ ಆಗಿದ್ದೇನೆಂದರೆ ಅಬ್ಬಿ ಅವರು ನೋಡಲು ಪಿ.ವಿ ಸಿಂಧು(pv sindhu) ಅವರ ತದ್ರೂಪಿಯಂತೆ ಕಾಣಿಸುತ್ತಾರೆ. ಈ ವ್ಯಕ್ತಿ ಅವಸರದಲ್ಲಿ ಅಬ್ಬಿ ಅವರನ್ನು ಸಿಂಧು ಎಂದು ಭಾವಿಸಿ ಮಾತನಾಡಿಸಿದ್ದಾರೆ. ಈ ವಿಚಾರವನ್ನು ಅಬ್ಬಿ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ PV Sindhu | ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದ ಪಿ. ವಿ ಸಿಂಧೂ, ಮಲೇಷ್ಯಾ ಓಪನ್ಗೆ ಸಜ್ಜು
“ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು ನಾನು ದೊಡ್ಡ ಬ್ಯಾಡ್ಮಿಂಟನ್ ಅಭಿಮಾನಿ. ನಿಮ್ಮ ಜತೆ ಫೋಟೊ ಒಂದನ್ನು ತೆಗೆಯಬಹುದೇ ಎಂದು ಕೇಳಿದರು. ಇದೇ ವೇಳೆ ನಾನು ಸಿಂಧು ಅಲ್ಲ ಎಂದು ಹೇಳಿದೆ. ಈ ವೇಳೆ ಅವರಿಗೆ ನಿರಾಸೆಯಾಯಿತು” ಎಂದು ಅಬ್ಬಿ ಗೋವಿಂದನ್ ಹೇಳಿದ್ದಾರೆ.