Site icon Vistara News

Abhinav Bindra: ‘ಒಲಿಂಪಿಕ್‌ ಆರ್ಡರ್‌’ ಗೌರವ ಸ್ವೀಕರಿಸಿದ ಅಭಿನವ್‌ ಬಿಂದ್ರಾ

Abhinav Bindra

Abhinav Bindra: Abhinav Bindra bestowed with prestigious 'Olympic Order' honour in Paris

ನವದೆಹಲಿ: 2008ರ ಬೀಜಿಂಗ್‌ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ಭಾರತಕ್ಕೆ ಮೊದಲ ವೈಯಕ್ತಿಕ ಒಲಿಂಪಿಕ್‌ ಪದಕ ಗೆದ್ದ ಅಭಿನವ್‌ ಬಿಂದ್ರಾ ಅವರು ‘ಒಲಿಂಪಿಕ್‌ ಆರ್ಡರ್‌’ (Olympic Order) ಗೌರವ ಸ್ವೀಕರಿಸಿದ್ದಾರೆ. ಶನಿವಾರ ರಾತ್ರಿ ನಡೆದಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ 142 ನೇ ಅಧಿವೇಶನದಲ್ಲಿ ಬಿಂದ್ರಾಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಲಿಂಪಿಕ್ ಆಂದೋಲನಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಅವರಿಗೆ ಈ ಗೌರವ ಸಂದಿದೆ.

41 ವರ್ಷ ವಯಸ್ಸಿನ ಅಭಿನವ್ ಬಿಂದ್ರಾ 2008ರ ಬೀಜಿಂಗ್ ಕ್ರೀಡೆಗಳಲ್ಲಿ ಅವರು ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಅವರು 2010 ರಿಂದ 2020ರವರೆಗೆ ಇಂಟರ್‌ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್‌ ಫೆಡರೇಷನ್‌ನ ಅಥ್ಲೀಟ್ಸ್ ಸಮಿತಿ ಸದಸ್ಯರಾಗಿದ್ದರು. 2014ರಲ್ಲಿ ಅಧ್ಯಕ್ಷರೆ ವಹಿಸಿದ್ದರು. 2018ರಿಂದ ಅವರು ಐಒಸಿ ಅಥ್ಲೀಟ್ಸ್‌ ಕಮಿಷನ್ ಸದಸ್ಯರಾಗಿದ್ದಾರೆ.

ಒಲಿಂಪಿಕ್ಸ್​ಗೆ ಇಂದು ತೆರೆ


ಪ್ಯಾರಿಸ್​ನಲ್ಲಿ ನಡೆದ 33ನೇ ಆವೃತ್ತಿಯ ಬೇಸಗೆ ಒಲಿಂಪಿಕ್ಸ್​ಗೆ ಇಂದು(ಭಾನುವಾರ) ಅಧಿಕೃತವಾಗಿ ತೆರೆ ಬೀಳಲಿದೆ. ಕಳೆದ 17 ದಿನಗಳಿಂದ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದ ಸಮಾರೋಪ ಸಮಾರಂಭ ಪ್ಯಾರಿಸ್‌ನ ಹೃದಯ ಭಾಗವಾದ “ಸ್ಟೇಡ್‌ ಡೆ ಫ್ರಾನ್ಸ್‌ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದಂತೆ ರಾತ್ರಿ 12.30ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ. ಹಾಕಿ ಆಟಗಾರ ಪಿ.ಆರ್ ಶ್ರೀಜೇಶ್(PR Sreejesh)​ ಮತ್ತು ಅವಳಿ ಕಂಚಿನ ಪದಕ ವಿಜೇತೆ ಶೂಟರ್​ ಮನು ಭಾಕರ್​(Manu Bhaker) ಭಾರದ ಧ್ವಜಧಾರಿಗಳಾಗಿ( India’s Co-Flag Bearer) ಪಥಸಂಚಲನದಲ್ಲಿ ಸಾಗಲಿದ್ದಾರೆ. ಭಾರತ ಈ ಬಾರಿ ಒಟ್ಟು 6 ಪದಕಗಳೊಂದಿಗೆ ತನ್ನ ಅಭಿಯಾನ ಮುಗಿಸಿತು. 1 ಬೆಳ್ಳಿ ಮತ್ತು 5 ಕಂಚು ಒಳಗೊಂಡಿದೆ. 

ಇದನ್ನೂ ಓದಿ Paris Olympics: ಒಂದೇ ವಾರಕ್ಕೆ ಬಣ್ಣ ಕಳೆದುಕೊಂಡ ​ಒಲಿಂಪಿಕ್ಸ್​ ಪದಕ!

ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಖ್ಯಾತ ನಟ ಹಾಗೂ ನಿರ್ಮಾಪಕ ಟಾಮ್‌ ಕ್ರುಯಿಸ್‌ ಇದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮುಂದಿನ ಒಲಿಂಪಿಕ್ಸ್‌ ಕ್ರೀಡಾಕೂಟ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯುವುದರಿಂದ ಹಾಲಿವುಡ್‌ ತಂಡವೊಂದು ಪಾಲ್ಗೊಳ್ಳುವುದಾಗಿ ವರದಿಯಾಗಿದೆ. ಫ್ರೆಂಚ್‌ ಮತ್ತು ಅಮೆರಿಕನ್‌ ಕಲಾವಿದರು ಜಂಟಿಯಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮುಂದಿನ ಒಲಿಂಪಿಕ್‌ ಆತಿಥ್ಯ ವಹಿಸಿದ ದೇಶಕ್ಕೆ ಒಲಿಂಪಿಕ್​​ ಧ್ವಜವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ಯಾರಿಸ್‌ ಹಾಗೂ ಲಾಸ್‌ ಏಂಜಲೀಸ್‌ ನಗರಗಳ ಮೇಯರ್‌ಗಳು ಉಪಸ್ಥಿತರಿರುತ್ತಾರೆ. ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಶ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯವನ್ನು ಘೋಷಿಸಲಿದ್ದಾರೆ.

Exit mobile version