ಜೈಪುರ: ರಣಬೀರ್ ಕಪೂರ್(Ranbir Kapoor) ಅಭಿನಯದ ‘ಅನಿಮಲ್’ ಚಿತ್ರ(Animal) ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ. ಮತ್ತೊಂದೆಡೆ ವಿವಾದಕ್ಕೂ ಕಾರಣವಾಗಿದೆ. ಸ್ತ್ರಿದ್ವೇಷ ವೈಭವಿಕರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚಚರ್ಚೆಗಳು ಆರಂಭವಾಗಿದೆ. ಟೀಮ್ ಇಂಡಿಯಾದ ವೇಗಿ ಜಯದೇವ್ ಉನಾದ್ಕತ್(Jaydev Unadkat) ಕೂಡ ಸಿನಿಮಾ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಅನಿಮಲ್ ಚಿತ್ರವನ್ನು ವೀಕ್ಷಿಸಿದ ಜಯದೇವ್ ಉನಾದ್ಕತ್,” ಇದೊಂದು ಸ್ತ್ರೀ ಅವಮಾನಕರ ಸಿನಿಮಾ ಎಂದು ಹೇಳಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಸುದೀರ್ಘ ಬರಹಗಳ ಮೂಲಕ ಪೋಸ್ಟ್ ಮಾಡಿ, ಈ ಚಿತ್ರವನ್ನು ‘ಡಿಸಾಸ್ಟರ್, ಅವಮಾನಕರ’. ಇದೊಂದು ಕರುಣಾಜನಕ ಸಿನಿಮಾ. ಇದನ್ನು ವೀಕ್ಷಿಸಿ ನನ್ನ ಅತ್ಯಮೂಲ್ಯ ಮೂರು ಗಂಟೆಗಳು ವ್ಯರ್ಥವಾಯಿತು. ಇಂದಿನ ಜಗತ್ತಿನಲ್ಲಿ ಸ್ತ್ರಿದ್ವೇಷ ವೈಭವಿಕರ ಮತ್ತು ಪುರುಷರನ್ನು ಪ್ರಬಲರನ್ನಾಗಿ ತೋರಿಸುವುದು ಅವಮಾನಕರ” ಎಂದು ಪೋಸ್ಟ್ ಮಾಡಿದ್ದರು. ಅವರ ಈ ಪೋಸ್ಟ್ ಎಲ್ಲಡೆ ವೈರಲ್ ಮತ್ತು ಟ್ರೋಲ್ ಆಗಿತ್ತು. ಇದೇ ಕಾರಣದಿಂದ ಉನಾದ್ಕತ್ ತಮ್ಮ ಈ ಪೋಸ್ಟನ್ನು ಡಿಲೀಡ್ ಮಾಡಿದ್ದಾರೆ. ಆದರೆ ಕೆಲ ನೆಟ್ಟಿಗರು ಇದರ ಸ್ಕ್ರೀನ್ಶಾಟ್ಗಳನ್ನು ತೆಗೆದಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
I change my mind – Jaydev Unadkat deserved that 11cr Rajasthan Royals paid for him 💯 pic.twitter.com/9yhpoklh3M
— cloudy (@itsnotandeesh) December 3, 2023
ಕೃತ್ಯಗಳನ್ನು ವೈಭವೀಕರಿಸಿ ತೋರಿಸಬಾರದು
“ನಾವು ಕಾಡಿನಲ್ಲಿ, ಅರಮನೆಗಳಲ್ಲಿ ವಾಸಿಸುತ್ತಿಲ್ಲ. ಯುದ್ಧಗಳನ್ನು ಮಾಡುತ್ತಿಲ್ಲ. ನಟನೆ ಎಷ್ಟು ಚೆನ್ನಾಗಿತ್ತು ಎಂಬುದು ಮುಖ್ಯವಲ್ಲ, ಕುಟುಂಬ ಸಮೇತರಾಗಿ ವೀಕ್ಷಿಸುವ ಸಿನಿಮಾದಲ್ಲಿ ಇಂತಹ ಕೃತ್ಯಗಳನ್ನು ವೈಭವೀಕರಿಸಿ ತೋರಿಸಬಾರದು. ಮನರಂಜನಾ ಉದ್ಯಮದಲ್ಲಿಯೂ ಸಾಮಾಜಿಕ ಜವಾಬ್ದಾರಿ ಅತ್ಯಗತ್ಯ. ಇದನ್ನು ಎಂದಿಗೂ ಮರೆಯಬಾರದು” ಎಂದು ಉನಾದ್ಕತ್ ತಮ್ಮ ಆಕ್ರೋಶ ಹೊರಕಾಕಿದ್ದಾರೆ.
ರಣಬೀರ್ ಕಪೂರ್ ಈ ಸಿನಿಮಾಕ್ಕಾಗಿ 30– 35 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಈ ಮೊದಲು ರಣಬೀರ್ ಪ್ರತಿ ಚಿತ್ರಕ್ಕೆ 70 ಕೋಟಿ ರೂ. ಸಂಭಾವನೆಯನ್ನು ಪಡಯುತ್ತಿದ್ದರು ಎನ್ನಲಾಗಿದೆ. ಆದರೆ ಅನಿಮಲ್ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರಿಗೆ ಬೆಂಬಲ ಸೂಚಿಸಿ, ಈ ಬಾರಿ ತಮ್ಮ ಸಂಭಾವನೆಯನ್ನು ಶೇ. 50ರಷ್ಟು ಕಡಿಮೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬಾಬಿ ಡಿಯೋಲ್ 4-5 ಕೋಟಿ ರೂ., ರಶ್ಮಿಕಾ ಮಂದಣ್ಣ ಅವರಂತಹ ಇತರ ಪಾತ್ರವರ್ಗದವರು 4 ರೂ. ಕೋಟಿ, ಮತ್ತು ಅನಿಲ್ ಕಪೂರ್ 2 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ Animal Cast Fees: ‘ಅನಿಮಲ್’ ಚಿತ್ರಕ್ಕೆ ರಣಬೀರ್ ಕಪೂರ್ ಪಡೆದ ಸಂಭಾವನೆ ಎಷ್ಟು?
ಅನಿಮಲ್’ ಉತ್ತರ ಅಮೆರಿಕಾದಲ್ಲಿ 1 ಮಿಲಿಯನ್ ಡಾಲರ್ ದಾಟಿದೆ. ಈ ಸಾಧನೆ ಮಾಡಿದ ಮೊದಲ ಹಿಂದಿ ಚಿತ್ರ ಇದು. ಇನ್ನೂ ಅನೇಕ ದಾಖಲೆಗಳನ್ನು ಮುರಿಯಲಿದೆʼ ಎಂದು ಎಕ್ಸ್‌ನಲ್ಲಿ ಬರೆಯಲಾಗಿತ್ತು.
ತಂದೆ-ಮಗನ ಕಥೆ
ಚಿತ್ರದ ಕಥೆಯನ್ನು ತಂದೆ ಮತ್ತು ಮಗನ ಸಂಕೀರ್ಣ ಸಂಬಂಧದ ಸುತ್ತ ಹೆಣೆಯಲಾಗಿದೆ. ಅನಿಲ್ ಕಪೂರ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್ ಅರ್ಜುನ್ ಎನ್ನುವ ಪಾತ್ರ ನಿರ್ವಹಿಸಿದ್ದು, ತನ್ನ ಗುರಿಗಳನ್ನು ಸಾಧಿಸಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧನಿರುವ ವ್ಯಕ್ತಿ ಎಂದು ಚಿತ್ರದಲ್ಲಿ ವಿವರಿಸಲಾಗಿದೆ. ಜತೆಗೆ ತಂದೆ ಮತ್ತು ಮಗನ ನಡುವಿನ ಪ್ರಕ್ಷುಬ್ಧ ಸಂಬಂಧವನ್ನು ಇದು ತೆರೆದಿಡುತ್ತದೆ.