Site icon Vistara News

IND vs PAK: ಭಾರತ-ಪಾಕ್​ ಪಂದ್ಯಕ್ಕೆ ಮೀಸಲು ದಿನ; ಹಿಡಿ ಶಾಪ ಹಾಕಿದ ವೆಂಕಟೇಶ್​ ಪ್ರಸಾದ್

Former cricketer Venkatesh Prasad

ಕೊಲಂಬೊ: ಭಾನುವಾರ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ(IND vs PAK) ನಡುವಿನ ಮಹತ್ವದ ಸೂಪರ್​-4 ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಕಾರಣ ಈ ಪಂದ್ಯಕ್ಕೆ ಮೀಸಲು ದಿನ(India vs Pakistan reserve day) ನಿಗದಿಪಡಿಸಲಾಗಿದೆ. ಇದೇ ವಿಚಾರವಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿಗಳು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ನ(ACC) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ಮಲತಾಯಿ ಧೋರಣೆ ಎಂದು ಟ್ವಿಟರ್​ನಲ್ಲಿ ವಿರೋಧ ವ್ಯಕಪಡಿಸಿದೆ. ಟೀಮ್​ ಇಂಡಿಯಾದ ಮಾಜಿ ಆಟಗಾರ ವೆಂಕಟೇಶ್​ ಪ್ರಸಾದ್(Venkatesh Prasad)​ ಕೂಡ ಈ ನಿರ್ಧಾರವನ್ನು ಖಂಡಿಸಿದ್ದಾರೆ.

ಹಿಡಿ ಶಾಪ ಹಾಕಿದ ವೆಂಕಟೇಶ್‌ ಪ್ರಸಾದ್‌

ಕೇವಲ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಮೀಸಲು ದಿನ ಇರಿಸಿದಕ್ಕೆ ವೆಂಕಟೇಶ್​ ಪ್ರಸಾದ್​ ಟ್ವಿಟರ್​ನಲ್ಲಿ ಕಿಡಿ ಕಾರಿದ್ದು ‘ಇದೊಂದು ಸಂಪೂರ್ಣ ನಾಚಿಕೆಗೇಡು. ಈ ನಿರ್ಧಾರದಿಂದ ಸಂಘಟಕರು ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಇತರ ಎರಡು ತಂಡಗಳಿಗೆ ಮಾತ್ರ ಏಕೆ ನಿಯಮಗಳು ವಿಭಿನ್ನವಾಗಿದೆ. ಒಟ್ಟಾರೆ ಈ ಪಂದ್ಯಾವಳಿ ಅನೈತಿಕವಾಗಿದೆ. ನ್ಯಾಯದ ಹೆಸರಿನಲ್ಲಿ, ಇದನ್ನು ಕೈಬಿಟ್ಟರೆ ಅಥವಾ ಉಳಿದ ತಂಡಕ್ಕೂ ಈ ನಿಯಮ ಜಾರಿಗೆ ತಂದರೆ ಟೂರ್ನಿ ನ್ಯಾಯಯುತವಾಗಿರುತ್ತದೆ. ಮೀಸಲು ದಿನವೂ ಜೋರಾಗಿ ಮಳೆ ಬೀಳಲಿ ಮತ್ತು ಈ ದುರುದ್ದೇಶಪೂರಿತ ಯೋಜನೆಗಳು ಯಶಸ್ವಿಯಾಗದಿರಲಿ” ಎಂದು ವೆಂಕಟೇಶ್​ ಪ್ರಸಾದ್ ಹಿಡಿ ಶಾಪ ಹಾಕಿದ್ದಾರೆ.

ಕೊಲಂಬೊದಲ್ಲಿ ಹಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಕೂಡಾ ಮಳೆ ಮುನ್ಸೂಚನೆ ಇದೆ. ಈಗಾಗಲೇ ಉಭಯ ತಂಡಗಳ ನಡುವಿನ ಗುಂಪು ಹಂತದ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. 2ನೇ ಪಂದ್ಯವೂ ಮಳೆಗಾಹುತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಸೋಮವಾರ(ಸೆ 11)ವನ್ನು ಮೀಸಲು ದಿನವನ್ನಾಗಿ ಎಸಿಸಿ ಘೋಷಿಸಿದೆ.

ಇದನ್ನೂ ಓದಿ IND vs PAK: ಸೂಪರ್​-4 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ, ಪಿಚ್​ ರಿಪೋರ್ಟ್​

ಪಂದ್ಯ ರದ್ದಾದರೆ ಪಂದ್ಯ ಪ್ರಸಾರಕರಿಗೆ ಭಾರಿ ನಷ್ಟ ಉಂಟಾಗಲಿದೆ. ಇದೇ ಕಾರಣಕ್ಕೆ ಈ ಪಂದ್ಯಕ್ಕೆ ಮೀಸಲು ದಿನ ಇರಿಸಲಾಗಿದೆ. ಅಲ್ಲದೆ ಗುಂಪು ಹಂತದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಈಗ ಮತ್ತೊಂದು ಪಂದ್ಯ ಮಳೆಗಾಹುತಿಯಾದರೆ ಆಯೋಜಕರು ಮುಜುಗರಕ್ಕೀಡಾಗಲಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಸಿಸಿ ಈ ನಿರ್ಧಾರ ಕೈಗೊಂಡಿದೆ.

ಮೀಸಲು ದಿನ ಮಳೆ ಬಂದರೆ

ದೆ. ಮೀಸಲು ದಿನಕ್ಕೂ ಮಳೆ ಬಂದರೆ ಆಗ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಲೀಗ್​ನಲ್ಲಿ ಗೆದ್ದ ರನ್​ ರೇಟ್​ ಆಧಾರದಲ್ಲಿ ತಂಡಗಳು ಮುಂದಿನ ಹಂತಕ್ಕೇರಲಿದೆ. ಫೈನಲ್​ನಲ್ಲಿಯೂ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಜಂಟಿಯಾಗಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Exit mobile version