Site icon Vistara News

Sania Mirza: ಅಬುಧಾಬಿ ಓಪನ್‌; ಮೊದಲ ಸುತ್ತಿನಲ್ಲೇ ಸೋಲು ಕಂಡ ಸಾನಿಯಾ ಮಿರ್ಜಾ ಜೋಡಿ

Sania Mirza ends career with first round defeat in Dubai

#image_title

ಅಬುಧಾಬಿ: ಇಲ್ಲಿ ನಡೆಯುತ್ತಿರುವ ಅಬುಧಾಬಿ ಓಪನ್‌(Abu Dhabi Open) ಟೆನಿಸ್​ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲೇ ಸಾನಿಯಾ ಮಿರ್ಜಾ(Sania Mirza) ಸೋಲು ಕಂಡಿದ್ದಾರೆ. ಅಮೆರಿಕದ ಬೆಥನಿ ಮಾಟೆಕ್‌ ಸ್ಯಾಂಡ್ಸ್‌(Bethanie Mattek-Sands) ಜತೆಗೂಡಿ ವನಿತಾ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದರು.

ಮಂಗಳವಾರ ನಡೆದ ವನಿತಾ ಡಬಲ್ಸ್‌ನ ಮೊದಲ ಪಂದ್ಯದಲ್ಲಿ ಸಾನಿಯಾ ಮಿರ್ಜಾ-ಬೆಥನಿ ಮಾಟೆಕ್‌ ಸ್ಯಾಂಡ್ಸ್‌ ಜೋಡಿ ಕರ್ಸ್ಟನ್‌ ಫ್ಲಿಪ್‌ಕೆನ್ಸ್‌ (ಬೆಲ್ಜಿಯಂ)-ಲಾರಾ (ಜರ್ಮನಿ) ವಿರುದ್ಧ 3-6, 4-6 ನೇರ ಸೆಟ್‌ಗಳಿಂದ ಪರಾಭವಗೊಂಡಿತು. ಇಂಡೋ-ಅಮೆರಿಕನ್‌ ಜೋಡಿ ಯಾವ ಹಂತದಲ್ಲಿಯೂ ತಿರುಗಿ ಬೀಳಲು ಸಾಧ್ಯವಾಗಲಿಲ್ಲ. ಎದುರಾಳಿಗಳ ಬಲಿಷ್ಠ ಸರ್ವ್​ಗಳ ಮುಂದೆ ಸಂಪೂರ್ಣವಾಗಿ ಶರಣಾಗಿ ಸೋಲೊಪ್ಪಿಕೊಂಡರು.

ಇದನ್ನೂ ಓದಿ Sania Mirza: ಅಂತಿಮ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಬಳಿಕ ಭಾವುಕರಾದ ಸಾನಿಯಾ ಮಿರ್ಜಾ

ಟೆನಿಸ್‌ ಬಾಳ್ವೆಯ ವಿದಾಯದ ಬಾಗಿಲಲ್ಲಿರುವ ಸಾನಿಯಾ ಮಿರ್ಜಾ ಕಳೆದ ಆಸ್ಟ್ರೇಲಿಯಾ ಓಪನ್​ ಮಿಶ್ರ ಡಬಲ್ಸ್​ನಲ್ಲಿ ರೋಹನ್‌ ಬೋಪಣ್ಣ ಜತೆಗೂಡಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.​​ 6 ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತೆ ಸಾನಿಯಾ ಮಿರ್ಜಾ ವಿದಾಯಕ್ಕೂ ಮುನ್ನ ದುಬಾೖ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಟೂರ್ನಿ ಫೆ. 19ರಂದು ಆರಂಭವಾಗಲಿದೆ.

Exit mobile version