ಕೊಲಂಬೊ: ನಾಯಕ ಯಶ್ ಧುಲ್(Yash Dhull) ಅವರ ಅಜೇಯ ಶತಕದ ನೆರವಿನಿಂದ ಎಸಿಸಿ ಎಮರ್ಜಿಂಗ್ ಪುರುಷರ ಏಷ್ಯಾ ಕಪ್ 2023 ಟೂರ್ನಿಯಲ್ಲಿ(ACC Emerging Asia Cup 2023) ಭಾರತ ‘ಎ’ ತಂಡ(India A vs United Arab Emirates A) ಗೆಲುವಿನ ಖಾತೆ ತೆರೆದಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಯುಎಇ ವಿರುದ್ಧ ಎಂಟು ವಿಕೆಟ್ ಅಂತರದ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಯುಎಇ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಜಬಾಬಿತ್ತ ಭಾರತ ಕೇವಲ 26.3 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 179 ರನ್ ಬಾರಿಸಿ ಗೆಲುವು ದಾಖಲಿಸಿತು. ಯುಎಇ ಪರ ಕೇವಲ ಮೂವರು ಬ್ಯಾಟರ್ಗಳಷ್ಟೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕ ಆಟಗಾರ ಆರ್ಯಾನ್ಶ್ ಶರ್ಮಾ 38 ರನ್, ನಾಯಕ ವಲ್ತಪ್ಪಾ ಚಿದಂಬರಂ 46 ರನ್ ಮತ್ತು ಮೊಹಮ್ಮದ್ ಫರಾಜುದ್ದೀನ್ 35 ರನ್ ಬಾರಿಸಿದರು. ಭಾರತದ ಪರ ಹರ್ಷಿತ್ ರಾಣಾ ನಾಲ್ಕು ವಿಕೆಟ್ ಕಿತ್ತರೆ, ನಿತೀಶ್ ರೆಡ್ಡಿ ಮತ್ತು ಮಾನವ್ ಸತ್ತಾರ್ ತಲಾ ಎರಡು ವಿಕೆಟ್ ಪಡೆದರು.
ಚೇಸಿಂಗ್ ವೇಳೆ ಭಾರತ ಸಾಯಿ ಸುದರ್ಶನ್ (8) ಮತ್ತು ಅಭಿಷೇಕ್ ಶರ್ಮಾ(19) ಬೇಗನೆ ವಿಕೆಟ್ ಕಳೆದುಕೊಂಡಿತು. ಆದರೆ ಮೂರನೇ ವಿಕೆಟ್ಗೆ ಜತೆಯಾದ ನಾಯಕ ಯಶ್ ಧುಲ್ ಮತ್ತು ಕನ್ನಡಿಗ ನಿಕಿನ್ ಜೋಸ್ ಅಜೇಯ 138 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಯಶ್ ಧುಲ್ ಲಿಸ್ಟ್ ಎ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಬಾರಿಸಿದ ಸಾಧನೆ ಮಾಡಿದರು. 84 ಎಸೆತ ಎದುರಿಸಿದ ಅವರು 20 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 108 ರನ್ ಗಳಿಸಿದರು. ನಿಕಿನ್ ಜೋಸ್ ಅಜೇಯ 41 ರನ್ ಬಾರಿಸಿದರು. ಭಾರತ ಮುಂದಿನ ಪಂದ್ಯ ಜುಲೈ 17ರಂದು ನೇಪಾಳ ವಿರುದ್ಧ ಆಡಲಿದೆ.
ಇದನ್ನೂ ಓದಿ Team India : ಎಮರ್ಜಿಂಗ್ ಟೀಮ್ ಏಷ್ಯಾ ಕಪ್ಗೆ ಭಾರತ ತಂಡ ಪ್ರಕಟ; ಯಾರಿಗೆಲ್ಲ ಸಿಕ್ಕಿದೆ ಚಾನ್ಸ್?
India 'A' win by 8️⃣ wickets 🙌
— BCCI (@BCCI) July 14, 2023
A clinical chase to secure the first win of the tournament 👏🏻👏🏻
Scorecard ▶️ https://t.co/EOqtpUvxoE#ACCMensEmergingTeamsAsiaCup | #ACC pic.twitter.com/ErwwpIJyBe
ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಪೂರ್ಣ ಸದಸ್ಯರಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸ್ಥಾನಪಡೆದರೆ, ಎಸಿಸಿ ಪುರುಷರ ಪ್ರೀಮಿಯರ್ ಕಪ್‌ನಿಂದ ಯುಎಇ, ಓಮನ್, ಮತ್ತು ನೇಪಾಳ ತಂಡಗಳು ಈ ಟೂರ್ನಿಯಲ್ಲಿ ಆಡುತ್ತಿವೆ.
ಭಾರತ ‘ಎ’ ತಂಡ
ಯಶ್ ಧುಲ್ (ನಾಯಕ), ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಪ್ರದೋಶ್ ರಂಜನ್ ಪೌಲ್, ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಯುವರಾಜ್‌ಸಿನ್ಹ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.