Site icon Vistara News

IND vs AUS : ಶ್ರೀಲಂಕಾದ ಮಾಜಿ ಕ್ರಿಕೆಟಿಗ ಜಯವರ್ಧನೆ ಪ್ರಕಾರ ಟೆಸ್ಟ್​ ಸರಣಿಯ ಟ್ರೋಫಿ ಗೆಲ್ಲುವವರು ಯಾರು?

Mahela jayavardhane

#image_title

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ (IND vs AUS) ನಡುವಿನ ಬಾರ್ಡರ್​- ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ನಾಗ್ಪುರದಲ್ಲಿ ಫೆಬ್ರವರಿ 9ರಂದು ಆರಂಭವಾಗಲಿದೆ. ಹೀಗಾಗಿ ಪಂದ್ಯಕ್ಕೆ ಮೊದಲು ನಡೆಯುವ ಎಲ್ಲ ಚರ್ಚೆಗಳು ಈಗ ಆರಂಭಗೊಂಡಿವೆ. ಯಾವ ತಂಡ ಬಲಿಷ್ಠ, ಯಾವ ತಂಡಕ್ಕೆ ಹೆಚ್ಚು ಅನುಕೂಲ ಎಂಬೆಲ್ಲ ಚರ್ಚೆಗಳು ನಡೆಯುತ್ತಿವೆ. ಎರಡೂ ದೇಶಗಳ ಹಿರಿಯ ಕ್ರಿಕೆಟಿಗರು ನಮ್ಮ ದೇಶವೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇವೆಲ್ಲದರ ನಡುವೆ ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು ಯಾರಿಗೆ ಗೆಲುವಿನ ಅವಕಾಶ ಎಂದು ಹೇಳಿದ್ದಾರೆ. ಅವರ ಪ್ರಕಾರ ಈ ಸಲದ ಬಾರ್ಡರ್​- ಗವಾಸ್ಕರ್ ಟ್ರೋಫಿ ಶ್ರೀಲಂಕಾದ ಪಾಲಾಗಲಿದೆ.

ಐಸಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಯವರ್ಧನೆ ಅವರು, ಈ ಬಾರಿಯ ಸರಣಿ ಅತ್ಯಂತ ರೋಚಕವಾಗಿ ನಡೆಯಲಿದೆ. ಭಾರತದ ಪಿಚ್​ ಕಂಡೀಷನ್​ನಲ್ಲಿ ಪ್ರವಾಸಿ ತಂಡದ ಆಟಗಾರರು ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬ ಕುತೂಹಲವೂ ಮೂಡಿದೆ. ಬಲಿಷ್ಠ ಬೌಲಿಂಗ್​ ಬಳಗವನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ಭಾರತದ ಬ್ಯಾಟಿಂಗ್​ ಬಳಗವನ್ನು ಯಾವ ರೀತಿ ಬಗ್ಗು ಬಡಿಯಲಿದೆ ಎಂಬ ಕೌತುಕವೂ ಇದೆ. ಹೀಗಾಗಿ ಸರಣಿ ರೋಚಕವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : IND VS AUS: ಉಸ್ಮಾನ್​ ಖವಾಜಾಗೆ ವೀಸಾ ಸಮಸ್ಯೆ; ಭಾರತ ವಿರುದ್ಧದ ಮೊದಲ ಟೆಸ್ಟ್​ಗೆ ಅನುಮಾನ

ಯಾರು ಸರಣಿ ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಗೆಲ್ಲುತ್ತಾರೆ ಎಂದು ಊಹಿಸುವುದು ಕಷ್ಟ. ಆದರೆ, ಕ್ರಿಕೆಟಿಗನಾಗಿ ನಾನು ಆಸ್ಟ್ರೇಲಿಯಾ ತಂಡವೇ ಫೇವರಿಟ್​ ಎಂದು ಹೇಳುತ್ತೇನೆ ಎಂದು ನುಡಿದಿದ್ದಾರೆ. ಅವರ ಹೇಳಿಕೆಯಿಂದಾಗಿ ಭಾರತ ತಂಡ ಸರಣಿಯಲ್ಲಿ ಇನ್ನಷ್ಟು ಪ್ರಖರವಾಗಿ ಆಡಬೇಕಾಗಿದೆ.

ಟೆಸ್ಟ್​ಗೆ ತಂಡಗಳು

ಭಾರತ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭ್​ಮನ್​ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.

ಆಸ್ಟ್ರೇಲಿಯಾ:

ಪ್ಯಾಟ್ ಕಮಿನ್ಸ್ (ನಾಯಕ), ಆಸ್ಟನ್​ ಅಗರ್​, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯೇರಿ , ಕ್ಯಾಮೆರಾನ್​ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್ , ಜೋಶ್ ಹೇಜಲ್​ವುಡ್​, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ , ಮರ್ನಸ್ ಲಾಬುಶೇನ್, ನೇಥನ್ ಲಯಾನ್ , ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾಮಿ , ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.

Exit mobile version