Site icon Vistara News

Achraf Hakimi: ಮೊರೊಕ್ಕೊ ತಂಡದ ಫುಟ್ಬಾಲ್​ ಆಟಗಾರ ಹಕಿಮಿ ವಿರುದ್ಧ ಅತ್ಯಾಚಾರ ಆರೋಪ

Achraf Hakimi: Morocco football player Hakimi accused of rape

Achraf Hakimi: Morocco football player Hakimi accused of rape

ಪ್ಯಾರಿಸ್: ಮೊರೊಕ್ಕೊ ತಂಡದ ಸ್ಟಾರ್​ ಫುಟ್ಬಾಲ್ ಆಟಗಾರ ಅಶ್ರಫ್ ಹಕಿಮಿ (Achraf Hakimi) ವಿರುದ್ಧ ಅತ್ಯಾಚಾರದ ಆರೋಪವೊಂದು ಕೇಳಿಬಂದಿದೆ. ಈ ವಿಚಾರವನ್ನು ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

23 ವರ್ಷದ ಯುವತಿ ಅಶ್ರಫ್ ಹಕಿಮಿ ಮೇಲೆ ಅತ್ಯಾಚಾರದ ಆರೋಪದ ಕೇಸು ದಾಖಲಿಸಿದ್ದಳು. ಆರೋಪಕ್ಕೆ ಸಂಬಂಧಿಸಿ ಹಕಿಮಿ ಅವರನ್ನು ಪ್ರಾಸಿಕ್ಯೂಟರ್‌ಗಳು ಗುರುವಾರ ವಿಚಾರಣೆ ನಡೆಸಿದ್ದಾರೆ. ಇದಾದ ಬಳಿಕ ಹಕಿಮಿ ವಿರುದ್ಧ ಪ್ರಾಥಮಿಕ ಹಂತದ ಕೇಸು ದಾಖಲಿಸಿಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ Lionel Messi: ‘ನಿಮಗಾಗಿ ಕಾಯುತ್ತಿದ್ದೇವೆ’; ಲಿಯೋನೆಲ್​ ಮೆಸ್ಸಿಗೆ ಬೆದರಿಕೆ ಹಾಕಿದ ಅಪರಿಚಿತ ಬಂದೂಕುಧಾರಿಗಳು

ಕಳೆದ ವರ್ಷ ಕತಾರ್​ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಮೊರೊಕ್ಕೊ ತಂಡ ಶ್ರೇಷ್ಠ ಪ್ರದರ್ಶನ ತೋರಿ ಸೆಮಿ ಫೈನಲ್‌ ತಲುಪುವಲ್ಲಿ ಹಕಿಮಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಅತ್ಯಾಚಾರದ ಆರೋಪದ ಬಗ್ಗೆ ಹಕಿಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Exit mobile version