ಮುಂಬಯಿ: ನಟಿ ಸಪ್ನಾ ಗಿಲ್ ಹಾಗೂ ಕ್ರಿಕೆಟರ್ ಪೃಥ್ವಿ ಶಾ (Prithvi Shaw) ನಡುವೆ ಮುಂಬಯಿಯ ಹೋಟೆಲ್ನಲ್ಲಿ ನಡೆದ ಸೆಲ್ಫಿ ಗಲಾಟೆ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ನಟಿ ಸಪ್ನಾ ಗಿಲ್ ಇದೀಗ ಕ್ರಿಕೆಟರ್ ಮೇಲೆ ದೂರು ದಾಖಲಿಸಿದ್ದಾರೆ. ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಅವರು ಏರ್ಪೋರ್ಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೃಥ್ವಿ ಶಾ ಗೆಳೆಯ ಆಶೀಶ್ ಎಂಬುವರು ಗಿಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಸಪ್ನಾ ಇಂಥದ್ದೊಂದು ದೂರು ದಾಖಲು ಮಾಡಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆ 23 ವರ್ವದ ಕ್ರಿಕೆಟಿಗ ಹಾಗೂ ಆತನ ಗೆಳೆಯ ಆಶೀಶ್ ಯಾದವ್ ವಿರುದ್ಧ ನಟಿ ದೂರು ದಾಖಲು ಮಾಡಿದ್ದಾರೆ. ಪೃಥ್ವಿ ಶಾ ಮತ್ತು ಆತನ ಗೆಳೆಯರು ನನ್ನ ಮೊಬೈಲ್ ಕಿತ್ತು ನೆಲಕ್ಕೆ ಬಿಸಾಡಿದ್ದಾರೆ. ಫೋನ್ ಸಂಪೂರ್ಣ ಡ್ಯಾಮೇಜ್ ಆಗಿದೆ. ಅದೇ ರೀತಿ ಅವರು ನನ್ನ ಮೇಲೆ ದೌರ್ಜನ್ಯ ಕೂಡ ನಡೆಸಿದ್ದಾರೆ ಎಂಬುದಾಗಿ ಗಿಲ್ ದೂರು ನೀಡಿದ್ದಾರೆ.
ನಾನು ಮತ್ತು ನನ್ನ ಗೆಳೆಯರು ಪೃಥ್ವಿ ಶಾ ಬಳಿ 50 ಸಾವಿರ ರೂಪಾಯಿ ದುಡ್ಡು ಕೇಳಿದ್ದೇವೆ ಎಂದು ದೂರಿದ್ದಾರೆ. ಇಂದಿನ ದಿನದಲ್ಲಿ 50 ಸಾವಿರ ರೂಪಾಯಿ ದೊಡ್ಡ ಮೊತ್ತವೇ ಅಲ್ಲ. ಆ ಮೊತ್ತ ನನಗೆ ಲೆಕ್ಕಕ್ಕೂ ಇಲ್ಲ. ಎರಡು ರೀಲ್ಸ್ ಮಾಡಿದರೆ ನನಗೆ ಅಷ್ಟು ದುಡ್ಡು ಬರುತ್ತದೆ ಎಂದ ಸಪ್ನಾ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : Prithvi Shaw : ನಟಿ ಸಪ್ನಾ ಗಿಲ್ ವಿರುದ್ಧ ಕೊಲೆ ಕೇಸ್ ಕೂಡ ದಾಖಲು, ಮತ್ತೊಮ್ಮೆ ಜೈಲು ಸೇರುವ ಸಾಧ್ಯತೆ?
ನನಗೆ ಕ್ರಿಕೆಟ್ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಪೃಥ್ವಿ ಶಾ ಯಾರೆಂದೂ ಗೊತ್ತಿಲ್ಲ. ನನ್ನ ಗೆಳೆಯರ ಮೇಲೆ ಪೃಥ್ವಿ ಹಾಗೂ ಆತನ ಜತೆಗಿದ್ದವರು ಹಲ್ಲೆ ಮಾಡುತ್ತಿದ್ದರು. ಈ ವೇಳೆ ನಾನು ಆ ರೀತಿ ಮಾಡದಂತೆ ಮನವಿ ಮಾಡಿದೆ ಎಂಬುದಾಗಿ ಸಪ್ನಾ ಗಿಲ್ ಹೇಳಿದ್ದಾರೆ.