ಸಿಡ್ನಿ: ಟಿ20 ವಿಶ್ವ ಕಪ್ (T20 World Cup)ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಮತ್ತೆ ಆಘಾತ ಎದುರಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದ ಪ್ರಮುಖ ಆಟಗಾರ ಆ್ಯಡಂ ಜಂಪಾಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಪಂದ್ಯದಿಂದ ಹೊರಗುಳಿದಿದ್ದಾರೆ.
ಪರ್ತ್ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಮೊದಲೇ ಅನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದ ಜಂಪಾ ಅವರನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಲಾಗಿತ್ತು. ಈ ವೇಳೆ ಸೋಂಕು ದೃಢಪಟ್ಟಿದೆ. ಅವರ ಸ್ಥಾನಕ್ಕೆ ಮತ್ತೋರ್ವ ಸ್ಪಿನ್ನರ್ ಆಸ್ಟನ್ ಅಗರ್ಗೆ ಆಡುವ ಬಳಗದಲ್ಲಿ ಅವಕಾಶ ನೀಡಲಾಗಿದೆ.
ಟಿ20 ವಿಶ್ವ ಕಪ್‌ಗಾಗಿ ಕೊರೊನಾ ನಿಯಮದಲ್ಲಿ ಐಸಿಸಿ ಬದಲಾವಣೆ ತಂದಿದೆ. ಅದರಂತೆ ಆಟಗಾರನಿಗೆ ಕೊರೊನಾ ಸೋಂಕು ದೃಢಪಟ್ಟರೆ, ಅವರು ಕಡ್ಡಾಯ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಅಥವಾ ಪ್ರತ್ಯೇಕವಾಗಿ ಕ್ವಾರಂಟೈನ್ನಲ್ಲಿ ಇರಬೇಕಿಲ್ಲ. ಬದಲಾಗಿ ಪಂದ್ಯವಾಡಲು ವೈದ್ಯರಿಂದ ಫಿಟ್ನೆಸ್ ಟೆಸ್ಟ್ ಮಾಡಿಸಿಕೊಂಡು ಕಣಕ್ಕಿಳಿಯಬಹುದು. ಹೀಗಾಗಿ ಕೊರೋನಾ ಸೋಂಕಿಗೆ ಒಳಗಾದರೆ ತಂಡದ ವೈದ್ಯರ ನಿರ್ಧಾರ ಅಂತಿಮವಾಗಿರಲಿದೆ.
ಇದನ್ನೂ ಓದಿ | IND VS PAK | ಧ್ವಜ ಸರಿಯಾಗಿ ಹಿಡಿಯಲು ಬಾರದ ಪಾಕಿಸ್ತಾನಿಗೆ ಕಾಶ್ಮೀರ ಬೇಕಂತೆ! ಫುಲ್ ಟ್ರೋಲ್