Site icon Vistara News

Legends Cricket League | ಅದಾನಿ, ಜಿಎಂಆರ್ ಗುಂಪಿನಿಂದ ಫ್ರಾಂಚೈಸಿಗಳ ಖರೀದಿ

legends cricket league

ನವ ದೆಹಲಿ : ಹಿರಿಯ ಹಾಗೂ ಮಾಜಿ ಕ್ರಿಕೆಟಿಗರನ್ನು ಒಳಗೊಂಡಿರುವ ಲೆಜೆಂಡ್ಸ್ ಕ್ರಿಕೆಟ್‌ ಲೀಗ್‌ (Legends Cricket League) ಟೂರ್ನಿ ಜತೆ ಅದಾನಿ ಗ್ರೂಪ್ ಹಾಗೂ ಜಿಎಮ್‌ಆರ್‌ ಒಪ್ಪಂದ ಮಾಡಿಕೊಂಡಿದ್ದು, ಲೀಗ್‌ನ ಫ್ರಾಂಚೈಸಿಯನ್ನು ಖರೀದಿ ಮಾಡಲಿದೆ. ಇದರೊಂದಿಗೆ ಜಿಎಮ್‌ಆರ್‌ ಗ್ರೂಪ್‌ ಮೂರು ಕ್ರಿಕೆಟ್‌ ಲೀಗ್‌ಗಳಲ್ಲಿ ಹೂಡಿಕೆ ಮಾಡಿದಂತಾಗಿದ್ದು, ಅದಾನಿ ಗ್ರೂಪ್‌ ಎರಡನೇ ಕ್ರಿಕೆಟ್‌ ಲೀಗ್‌ನಲ್ಲಿ ಹಣ ಹೂಡಿಕೆ ಮಾಡಿದೆ.

ಜಿಎಮ್‌ಅರ್‌ ಗ್ರೂಪ್‌ ಐಪಿಎಲ್‌ನಲ್ಲಿ ಡೆಲ್ಲ ಕ್ಯಾಪಿಟಲ್ಸ್‌ ತಂಡದ ಸಹ ಮಾಲೀಕರಾಗಿದ್ದು, ಇತ್ತೀಚೆಗೆ ಯುಎಇ ಟಿ೨೦ ಲೀಗ್‌ನಲ್ಲಿ ತಂಡವನ್ನು ಖರೀದಿ ಮಾಡಿತ್ತು. ಅಂತೆಯೇ ಅದಾನಿ ಗ್ರೂಪ್ ಮೊದಲ ಯುಎಇ ಕ್ರಿಕೆಟ್‌ ಲೀಗ್‌ ಮೂಲಕ ಮೊದಲ ಬಾರಿ ಕ್ರಿಕೆಟ್ ಕ್ಷೇತ್ರಕ್ಕೆ ಎಂಟ್ರಿ ಪಡೆದುಕೊಂಡಿತು.

ಮುಂಬರುವ ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್‌ ಒಟ್ಟು ನಾಲ್ಕು ತಂಡಗಳ ನಡುವೆ ನಡೆಯಲಿದೆ. ಅದರಲ್ಲಿ ಸೆಪ್ಟೆಂಬರ್‌ ೧೬ರಂದು ನಡೆಯುವ ಪಂದ್ಯವನ್ನು ಭಾರತದ ಸ್ವಾತಂತ್ರ್ಯ ದಿನದ ಅಮೃತಮಹೋತ್ಸವಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ.

ಸದ್ಯದ ಮಾಹಿತಿ ಪ್ರಕಾರ ಲೆಜೆಂಡ್ಸ್ ಕ್ರಿಕೆಟ್‌ ಲೀಗ್‌ನ ಮೊದಲ ಪಂದ್ಯ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ನಂತರ ಲಖನೌ, ನವ ದೆಹಲಿ, ಕಟಕ್‌ ಹಾಗೂ ಜೋಧಪುರದಲ್ಲಿ ನಡೆಯಲಿದೆ. ಡೆಹ್ರಾಡೂನ್‌ನಲ್ಲಿ ಪ್ಲೇಆಫ್ ಹಾಗೂ ಫೈನಲ್‌ ನಡೆಯಲಿದೆ.

ಇದನ್ನೂ ಓದಿ | legends cricket league | ಮತ್ತೊಮ್ಮೆ ಭಾರತ ತಂಡಕ್ಕೆ ನಾಯಕರಾದ ದಾದಾ!

Exit mobile version