ಮುಂಬಯಿ: ಕ್ರೀಡಾ ಉಡುಪು ಮತ್ತು ಪರಿಕರಗಳ ಉತ್ಪಾದನೆಯಲ್ಲಿ ಅಗ್ರಮಾನ್ಯ ಸಂಸ್ಥೆಯಾಗಿರುವ ಅಡಿಡಾಸ್ ಗುರುವಾರ (ಜೂನ್ 1) ಟೆಸ್ಟ್, ಏಕದಿನ ಹಾಗೂ ಟಿ20 ಸೇರಿದಂತೆ ಮೂರು ಮಾದರಿಯ ಕ್ರಿಕೆಟ್ಗೆ ಟೀಮ್ ಇಂಡಿಯಾದ (Team India) ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಅನಾವರಣದ ವಿಡಿಯೊವನ್ನು ಬಿಡುಗಡೆ ಮಾಡಿದೆ. ಕ್ರಿಕೆಟ್ ಸ್ಟೇಡಿಯಮ್ ಒಳಗಿನಿಂದ ಮೂರು ಜೆರ್ಸಿಗಳನ್ನು ಮೂರು ಪ್ರತ್ಯೇಕ ಡ್ರೋನ್ಗಳು ಎತ್ತಿಕೊಂಡು ಬರುವಂತೆ ವಿಡಿಯೊ ಮಾಡಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕ್ರಿಕೆಟ್ ಪ್ರೇಮಿಗಳಿಂದ ಭರ್ಜರಿ ಪ್ರತಿಕ್ರಿಯೆ ದೊರಕಿದೆ.
ಈ ಹಿಂದೆ ಎಂಪಿಎಲ್ ಸಂಸ್ಥೆಯು ಭಾರತ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಆ ಒಪ್ಪಂದ ಅರ್ಧದಲ್ಲಿಯೇ ಮೊಟಕುಗೊಂಡಿತ್ತು. ಬಳಿಕ ಕಿಲ್ಲರ್ ಕೆಲವು ತಿಂಗಳ ಕಾಲ ಪ್ರಾಯೋಜಕತ್ವ ವಹಿಸಿತ್ತು. ಅದು ಮುಗಿದ ಬಳಿಕ ಬಿಸಿಸಿಐ ಅಡಿಡಾಸ್ ಜತೆ ಹೊಸ ಒಪ್ಪಂದ ಮಾಡಿಕೊಂಡಿದೆ. ಕಳೆದ ತಿಂಗಳು ಈ ಒಪ್ಪಂದ ನಡೆದಿದೆ. ಅದರ ಪ್ರಕಾರ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಬಳಿಕ ಭಾರತ ತಂಡದ ಕಿಟ್ಗೆ ಅಡಿಡಾಸ್ ಪ್ರಾಯೋಜಕತ್ವ ಪಡೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜೆರ್ಸಿಗಳನ್ನು ಅನಾವರಣ ಮಾಡಿದೆ ಅಡಿಡಾಸ್.
ಇನ್ಸ್ಟಾಗ್ರಾಮ್ನಲ್ಲಿ ಅಡಿಡಾಸ್ ಹೊಸ ಭಾರತೀಯ ಜರ್ಸಿಯನ್ನು ಸೃಜನಶೀಲ ವೀಡಿಯೊದೊಂದಿಗೆ ಬಿಡುಗಡೆ ಮಾಡಿದೆ. ಅದಕ್ಕೆ ಅಪ್ರತಿಮ ಕ್ಷಣ ಎಂದು ಶೀರ್ಷಿಕೆ ನೀಡಿದೆ. ಅಪ್ರತಿಮ ಕ್ರೀಡಾಂಗಣ. ಹೊಸ ಟೀಮ್ ಇಂಡಿಯಾ ಜರ್ಸಿಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಬರೆಯಲಾಗಿದೆ.
ಇದನ್ನೂ ಓದಿ : IPL 2023: ಟಿ20 ವಿಶ್ವ ಕಪ್ಗೆ ಹಾರ್ದಿಕ್ ಪಾಂಡ್ಯ ಸೂಕ್ತ ನಾಯಕ; ರವಿಶಾಸ್ತ್ರಿ ವಿಶ್ವಾಸ
ಏಕದಿನ ಮತ್ತು ಟಿ 20ಐ ಮಾದರಿಯ ಜೆರ್ಸಿಗಳು ಗಾಢ ನೀಲಿ ಮತ್ತು ಆಕಾಶ ನೀಲಿ ಬಣ್ಣದಲ್ಲಿದೆ. ಜೂನ್ 7ರಿಂದ ಓವಲ್ನಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ನಲ್ಲಿ ಬಿಳಿ ಜೆರ್ಸಿಯನ್ನು ಭಾರತೀಯ ಕ್ರಿಕೆಟ್ ತಂಡ ಧರಿಸಲಿದೆ.
ಕಿಲ್ಲರ್ ಜೀನ್ಸ್ ತಯಾರಕರಾದ ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟೆಡ್ ಸಂಸ್ಥೆಯ ಈ ಹಿಂದೆ ಜೆರ್ಸಿಯನ್ನು ತಯಾರಿಸಿತ್ತು. ಇದು ಕಳೆದ ಡಿಸೆಂಬರ್ನಲ್ಲಿ ಮಧ್ಯಂತರ ಪ್ರಾಯೋಜಕರಾಗಿ ಕಿಲ್ಲರ್ ಬಂದಿತ್ತು. ಅದಕ್ಕಿಂತ ಮೊದಲ ಪ್ರಾಯೋಜಕ ಎಂಪಿಎಲ್ ಸ್ಪೋರ್ಟ್ಸ್ ಒಪ್ಪಂದದಿಂದ ಮಧ್ಯದಲ್ಲೇ ಹೊರಬಂದಿತು. ಅಡಿಡಾಸ್ ಜೊತೆಗಿನ ಬಿಸಿಸಿಐನ ಒಪ್ಪಂದವು ಮಾರ್ಚ್ 2028 ರವರೆಗೆ ಮುಂದುವರಿಯಲಿದಎ. ಕ್ರೀಡಾ ಸರಕುಗಳ ತಯಾರಕರಿಗೆ ಆಟದ ಎಲ್ಲಾ ಸ್ವರೂಪಗಳಲ್ಲಿ ಕಿಟ್ ಪೂರೈಸುವ ವಿಶೇಷ ಹಕ್ಕುಗಳನ್ನು ನೀಡುತ್ತದೆ.