ನವ ದೆಹಲಿ: ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕ ಅಡಿಡಾಸ್ ಬುಧವಾರ (ಸೆಪ್ಟೆಂಬರ್ 20) ಮುಂಬರುವ ವಿಶ್ವ ಕಪ್ಗೆ (World Cup 2023) ಭಾರತದ ಕ್ರಿಕೆಟ್ ವಿಶ್ವಕಪ್ ಜೆರ್ಸಿಯನ್ನು ಅನಾವರಣಗೊಳಿಸಿದೆ. ಪ್ರಾಯೋಜಕರು ತಮ್ಮ ಸಾಮಾಜಿಕ ಮಾಧ್ಯಮಗಳ ಹ್ಯಾಂಡಲ್ಗಳಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದೆ. ಇದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಭಾರತದಲ್ಲಿ ನಡೆಯಲಿರುವ ಈವೆಂಟ್ ಅನ್ನು ಸಂಭ್ರಮಿಸಲು ಜೆರ್ಸಿಯಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಭುಜಗಳ ಮೇಲಿನ ಮೂರು ಬಿಳಿ ಪಟ್ಟೆಗಳನ್ನು ರೋಮಾಂಚಕ ತ್ರಿವರ್ಣ ಧ್ವಜದ ಬಣ್ಣಕ್ಕೆ ಬದಲಾಯಿಸಿದ್ದಾರೆ. ಎದೆಯ ಎಡಭಾಗದಲ್ಲಿರುವ ಬಿಸಿಸಿಐ ಲೋಗೋ ಈಗ ಎರಡು ನಕ್ಷತ್ರಗಳನ್ನು ಮಾತ್ರ ಹೊಂದಿದೆ. ಇದು ಭಾರತ ತಂಡದ ಏಕದಿನ ವಿಶ್ವಕಪ್ ಟ್ರೋಫಿಯಗಳನ್ನು ಸೂಚಿಸುತ್ತದೆ.
1983 ignited the spark.
— adidas (@adidas) September 20, 2023
2011 brought in glory.
2023 marks the beginning of #3KaDream. pic.twitter.com/1eA0mRiosV
2023ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುವ ಸಲುವಾಗಿ ಅಡಿಡಾಸ್ ಏಕದಿನ ಜರ್ಸಿಯನ್ನು ಪರಿಷ್ಕರಿಸಿದೆ. ಭುಜದ ಮೇಲಿನ ಮೂರು ಬಿಳಿ ಪಟ್ಟೆಗಳನ್ನು ರೋಮಾಂಚಕ ತ್ರಿವರ್ಣ ಧ್ವಜದಿಂದ ಬದಲಾಯಿಸಿ ಹೊಸ ಲುಕ್ ನೀಡುವ ಜತೆಗೆ ಅಭಿಮಾನಿಗಳಿಗೆ ಖುಷಿ ನೀಡಲಾಗಿದೆ. 1983 ಮತ್ತು 2011 ರಲ್ಲಿ ಭಾರತದ ಐತಿಹಾಸಿಕ ಏಕದಿನ ವಿಶ್ವಕಪ್ ವಿಜಯಗಳನ್ನು ಸಂಕೇತಿಸುವ ಎರಡು ನಕ್ಷತ್ರಗಳನ್ನು ಬಿಸಿಸಿಐ ಲಾಂಛನದ ಜತೆಗೆ ಅಚ್ಚೊತ್ತಲಾಗಿದೆ.
ಅಡಿಡಾಸ್ ತನ್ನ ವಿಶ್ವಕಪ್ ಅಭಿಯಾನವನ್ನು ‘3 ಕಾ ಡ್ರೀಮ್’ ಎಂದು ಹೆಸರಿಸಿದೆ. ಅಧಿಕೃತ ಪ್ರಾಯೋಜಕರು ಈ ಅಭಿಯಾನವನ್ನು “ಟೀಮ್ ಇಂಡಿಯಾಕ್ಕೆ ದೇಶದ ಅಚಲ ಬೆಂಬಲಕ್ಕೆ ಸಾಕ್ಷಿ” ಎಂದು ಕರೆದಿದೆ. “3 ಕಾ ಡ್ರೀಮ್’ ತಮ್ಮ ತಂಡವು ಮೂರನೇ ಏಕದಿನ ವಿಶ್ವಕಪ್ ಗೆಲ್ಲುವುದರ ಸಂಕೇತವಾಗಿದೆ. ಕ್ರಿಕೆಟ್ ವೀಕ್ಷಿಸುವ ಶತಕೋಟಿ ಭಾರತೀಯ ಅಭಿಮಾನಿಗಳ ಕನಸನ್ನು ಜೆರ್ಸಿಯಲ್ಲಿ ಪದಗಳ ಮೂಲಕ ಪೋಣಿಸಲಾಗಿದೆ ಎಂದು ಅಡಿಡಾಸ್ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಡಿಡಾಸ್ ನ ವಿಶೇಷ ವಿಶ್ವಕಪ್ ಹಾಡನ್ನು ಭಾರತೀಯ ರ್ಯಾಪರ್ ರಾಫ್ತಾರ್ ಹಾಡಿದ್ದಾರೆ. ಈ ವಿಡಿಯೊದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಸೇರಿದಂತೆ ಭಾರತೀಯ ಕ್ರಿಕೆಟ್ ತಾರೆಗಳು ಕಾಣಿಸಿಕೊಳ್ಳಲಿದ್ದಾರೆ.
ಜರ್ಸಿ ಕುರಿತ ವಿವರಣೆ ಇಲ್ಲಿದೆ
ಟೀಂ ಇಂಡಿಯಾ ವಿಶ್ವಕಪ್ ಜರ್ಸಿ ಬಿಡುಗಡೆ ಯಾವಾಗ?
ಸೆಪ್ಟೆಂಬರ್ 20ರಂದು ವಿಶ್ವಕಪ್ ಜರ್ಸಿ ಬಿಡುಗಡೆ ನಡೆದಿದೆ..
ಅಡಿಡಾಸ್ ವಿಶ್ವಕಪ್ ಅಭಿಯಾನದ ಶೀರ್ಷಿಕೆ ಏನು?
ಅಡಿಡಾಸ್ ತನ್ನ ವಿಶ್ವಕಪ್ ಅಭಿಯಾನವನ್ನು ‘3 ಕಾ ಡ್ರೀಮ್’ ಎಂದು ಹೆಸರಿಸಿದೆ.
ಬಿಡುಗಡೆ ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಭಾರತೀಯ ಕ್ರಿಕೆಟ್ ವಿಶ್ವಕಪ್ ಜರ್ಸಿ ಬಿಡುಗಡೆ ಪ್ರಾರಂಭವಾಗಲಿದೆ.
ಲೈವ್ ಸ್ಟ್ರೀಮಿಂಗ್ ಎಲ್ಲಿ ನಡೆಯಲಿದೆ?
ಟೀಮ್ ಇಂಡಿಯಾದ ವಿಶ್ವಕಪ್ ಜರ್ಸಿ ಬಿಡುಗಡೆ ಕಾರ್ಯಕ್ರಮ ಅಡಿಡಾಸ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
2023ರ ವಿಶ್ವಕಪ್ಗೆ ಭಾರತ ತಂಡ ಈ ರೀತಿ ಇದೆ
ಪ್ರಮುಖ ಬ್ಯಾಟರ್ಗಳು: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್
ವಿಕೆಟ್ ಕೀಪರ್ಗಳು: ಇಶಾನ್ ಕಿಶನ್, ಕೆಎಲ್ ರಾಹುಲ್
ವೇಗದ ಆಲ್ರೌಂಡರ್ಗಳು: ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್
ಸ್ಪಿನ್ ಆಲ್ರೌಂಡರ್ಗಳು: ರವೀಂದ್ರ ಜಡೇಜಾ, ಅಕ್ಷರ್ ಪಟೇಲ್
ವೇಗದ ಬೌಲರ್ಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಸ್ಪಿನ್ನರ್: ಕುಲದೀಪ್ ಯಾದವ್