Site icon Vistara News

Asia Cup 2023 : ಲಂಕಾ ತಂಡದ ಸ್ಟಾರ್​ ಸ್ಪಿನ್ನರ್​ಗೆ ಗಾಯ, ಫೈನಲ್​ನಲ್ಲಿ ಭಾರತ ತಂಡಕ್ಕೆ ಲಾಭ

Asia Cup

ಕೊಲೊಂಬೊ: ಭಾನುವಾರ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಷ್ಯಾ ಕಪ್ 2023 ಫೈನಲ್​ಗಿಂತ ಮೊದಲು ಭಾರತ ತಂಡಕ್ಕೆ ಗುಡ್​ ನ್ಯೂಸ್​ ಸಿಕ್ಕಿದೆ. ಲಂಕಾದ ಸ್ಟಾರ್ ಸ್ಪಿನ್ನರ್ ಮಹೀಶ್ ತೀಕ್ಷಣ ಪಾಕಿಸ್ತಾನ ವಿರುದ್ಧದ ಸೂಪರ್​- 4ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಭಾನುವಾರದ ಫೈನಲ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಒಂದು ವೇಳೆ ಅವರು ಆಡಿಲ್ಲವಾದರೆ ಲಂಕಾ ತಂಡದ ಸ್ಪಿನ್​ ವಿಭಾಗ ಬಲ ಕಳೆದುಕೊಳ್ಳಲಿದೆ. ಇದು ಭಾರತದ ಮಟ್ಟಿಗೆ ಗೆಲುವಿಗೆ ಪೂರಕವಾಗಿರುವ ಅಂಶ ಎನಿಸಿಕೊಂಡಿದೆ.

ಶ್ರೀಲಂಕಾ-ಪಾಕಿಸ್ತಾನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಮಹೇಶ್ ತೀಕ್ಷಣ ಗಾಯಗೊಂಡಿದ್ದರು. ಆಟಗಾರನ ಸ್ಥಿತಿಯನ್ನು ಸಂಪೂರ್ಣವಾಗಿ ಪರೀಕ್ಷಿಸಲು, ನಾಳೆ ಸ್ಕ್ಯಾನ್ ನಡೆಸಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಗುರುವಾರ ಪಾಕ್ ವಿರುದ್ಧ ಬೌಲಿಂಗ್ ಮಾಡುತ್ತಿದ್ದ ಮಹೀಶ್ ತೀಕ್ಷಣಾ ಹೊಸ ಚೆಂಡನ್ನು ಸ್ವೀಕರಿಸಿ ಮೊದಲ ಐದು ಓವರ್​ಗಳಲ್ಲಿ ಕೇವಲ 14 ರನ್​ಗಳನ್ನು ಬಿಟ್ಟುಕೊಟ್ಟಿದ್ದರು. 28 ನೇ ಓವರ್​ನಲ್ಲಿ ಅವರು ಬೌಲಿಂಗ್ ಮಾಡಲು ಮರಳಿದರು. ಮಳೆ ಆಟಗಾರರನ್ನು ಪೆವಿಲಿಯನ್​ ಸೇರುವಂತೆ ಮಾಡುವ ಮೊದಲು, ಅವರು ಪಾಕ್​ ಆಲ್​ರೌಂಡರ್​ ಮೊಹಮ್ಮದ್ ನವಾಜ್ ಅವರ ವಿಕೆಟ್​ ಪಡೆದಿದ್ದರು.

35ನೇ ಓವರ್​ನಲ್ಲಿ ಮತ್ತೊಂದು ಸ್ಪೆಲ್​ ಬೌಲಿಂಗ್​ಗೆ ಬಂದಾಗ ನೋವು ಉಂಟಾಗಿರುವುದ ಅವರ ಮುಖದಲ್ಲಿ ಸ್ಪಷ್ಟವಾಗಿತ್ತು. ಅವರ ಸ್ನಾಯುಸೆಳೆತಕ್ಕೆ ಗಾಯವಾದಂತೆ ತೋರಿತು. 39ನೇ ಓವರ್​ನ ಆರಂಭದಲ್ಲಿ ಕ್ರೀಡಾಂಗಣ ಬಿಟ್ಟು ಹೊರ ನಡೆದ ಅವರು ಬಳಿಕ ಆಡಲು ಬರಲಿಲ್ಲ.

ಲಂಕಾ ತಂಡಕ್ಕೆ ಹಿನ್ನಡೆ

ಭಾನುವಾರ ನಡೆಯಲಿರುವ ಭಾರತ ವಿರುದ್ಧದ ಏಷ್ಯಾಕಪ್ ಫೈನಲ್ನಲ್ಲಿ ಮಹೀಶ್​ ಆಡುವ ಸಾಧ್ಯತೆ ತೀರಾ ಕಡಿಮೆ. ತಂಡದಲ್ಲಿ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿರುವ ಶ್ರೀಲಂಕಾಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ. ಏಕದಿನ ವಿಶ್ವಕಪ್ 2023 ಸಮೀಪಿಸುತ್ತಿರುವುದರಿಂದ, ಲಂಕಾ ತಂಡ ತನ್ನ ಎಲ್ಲಾ ಆಟಗಾರರು ಶೀಘ್ರದಲ್ಲೇ ಫಿಟ್ ಆಗಿರಲೆಂದು ಬಯಸುತ್ತಿದೆ.

ಇದನ್ನೂ ಓದಿ: Ravindra Jadeja : ಕಪಿಲ್​ ದೇವ್ ಬಳಿಕ ಈ ದಾಖಲೆ ಮಾಡಿದ್ದು ರವೀಂದ್ರ ಜಡೇಜಾ ಮಾತ್ರ; ಏನದು ಸಾಧನೆ?

ಶ್ರೀಲಂಕಾದ ಏಕದಿನ ಸಾಲಿನಲ್ಲಿ ಸ್ಪಿನ್ನರ್ ನಿರ್ಣಾಯಕ. 15 ಪಂದ್ಯಗಳಲ್ಲಿ 17.45ರ ಸರಾಸರಿಯಲ್ಲಿ 31 ವಿಕೆಟ್ ಕಬಳಿಸಿರುವ ಅವರು 2023ರಲ್ಲಿ ಏಕದಿನ ಕ್ರಿಕೆಟ್​​ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅವರು ಆರೋಗ್ಯವಾಗಿದ್ದರೆ 2023 ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವ ಕಪ್​ನಲ್ಲಿ ಆಡಲಿದ್ದಾರೆ. ಸೆಪ್ಟೆಂಬರ್ 28 ರೊಳಗೆ ತಂಡಗಳು ಏಕ ದಿನ ವಿಶ್ವ ಕಪ್​ಗೆ ಸಂಪೂರ್ಣ ಸಜ್ಜಾಗಬೇಕಾಗಿದೆ.

Exit mobile version