Site icon Vistara News

AFG vs NED: ಡಚ್ಚರ ಸವಾಲು ಗೆದ್ದು ಸೆಮಿ ರೇಸ್​ನಲ್ಲಿ ಉಳಿದೀತೇ ಆಫ್ಘನ್​?

Netherlands vs Afghanistan

ಲಕ್ನೋ: ಬಲಿಷ್ಠ ತಂಡಗಳಿಗೆ ಸೋಲುಣಿಸಿದ ಅಫಘಾನಿಸ್ತಾನ(Netherlands vs Afghanistan) ತಂಡ ಶುಕ್ರವಾರ ನಡೆಯುವ ವಿಶ್ವಕಪ್​ನ 34ನೇ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಸೆಮಿಫೈನಲ್​ ಪ್ರವೇಶದ ಆಸೆ ಇನ್ನೂ ಜೀವಂತವಿರುವ ಕಾರಣ ಅಫಘಾನಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಅತ್ತ ನೆದರ್ಲೆಂಡ್ಸ್​ಗೂ ಇದೇ ಸ್ಥಿತಿ. ಹೀಗಾಗಿ ಇತ್ತಂಡಗಳ ಈ ಕಾದಾಟ ರೋಚಕವಾಗಿ ಸಾಗುವ ನಿರೀಕ್ಷೆಯಿದೆ.

ಅಫಘಾನಿಸ್ತಾನ ತಂಡ ಸದ್ಯ ಆಡಿರುವ 6 ಪಂದ್ಯಗಳಲ್ಲಿ ತಲಾ 3 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲು ಕಂಡು 6 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ. ಅತ್ತ ನೆದರ್ಲೆಂಡ್ಸ್​ ತಂಡ 6 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು 4 ಅಂಕದೊಂದಿಗೆ 8ನೇ ಸ್ಥಾನದಲ್ಲಿದೆ. ಸೆಮಿ ರೇಸ್​ನಲ್ಲಿ ಇರಬೇಕೆಂದರೆ ಉಭಯ ತಂಡಗಳಿಗೂ ಗೆಲುವು ಅತ್ಯಗತ್ಯ. ಆಟಗಾರರ ಸಾಮರ್ಥ್ಯವನ್ನು ನೋಡುವಾಗ ಅಘಫಾನಿಸ್ತಾನ ಬಲಿಷ್ಠವಾಗಿದೆ. ಆದರೆ ನೆದರ್ಲೆಂಡ್ಸ್​ ಕೂಡ ತಿರುಗಿ ಬೀಳುವ ಸಾಮರ್ಥ್ಯವಿದೆ.

ಪಿಚ್​ ರಿಪೋರ್ಟ್​

ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನ(Ekana Cricket Stadium, Lucknow) ಪಿಚ್​ ಆರಂಭದಲ್ಲಿ ಬ್ಯಾಟಿಂಗ್​ ನಡೆಸಲು ಸೂಕ್ತವಾಗಿದ್ದರೂ ಆ ಬಳಿಕ ಸಂಪೂರ್ಣ ಬೌಲಿಂಗ್​ ಸ್ನೇಹಿಯಾಗಲಿದೆ. ಬಡಬಡನೆ ವಿಕೆಟ್​ ಉದುರಿ ಹೋಗುತ್ತದೆ. ಇದಕ್ಕೆ ಇಲ್ಲಿ ನಡೆದ ಈ ಹಿಂದಿನ ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ. ಆರಂಭದಲ್ಲಿ ಬ್ಯಾಟಿಂಗ್​ ನಡೆಸುವ ತಂಡ ಸುಮಾರು 15 ಓವರ್​ಗೆ 80 ರಿಂದ 90 ರನ್​ ಗಳಿಸಿ ಉತ್ತಮ ಸ್ಥಿತಿಯಲ್ಲಿರುತ್ತದೆ. ಆ ಬಳಿಕ ಬೌಲರ್​ಗಳು ಅದರಲ್ಲೂ ಸ್ಪಿನ್ನರ್​ಗಳು ಸಂಪೂರ್ಣ ಹಿಡಿತ ಸಾಧಿಸಿ ವಿಕೆಟ್​ ಕೀಳುತ್ತಾರೆ. ಹೀಗಾಗಿ ಉಭಯ ತಂಡಗಳು ಸ್ಪಿನ್ನ್​ ಬೌಲಿಂಗ್​ಗೆ ಹೆಚ್ಚಿನ ಮಹತ್ವದ ನೀಡಬಹುದು.

ಇದನ್ನೂ ಓದಿ Ind vs Sl : ಟಾಸ್​ ಗೆದ್ದ ಲಂಕಾ; ಭಾರತ ತಂಡದಿಂದ ಮೊದಲು ಬ್ಯಾಟಿಂಗ್​

ಹವಾಮಾನ ವರದಿ

ಲಕ್ನೋದಲ್ಲಿ ಪಂದ್ಯ ನಡೆಯುವ ವೇಳೆ 32 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶೇ 40 ರಷ್ಟು ಮಳೆಯ ಸಾಧ್ಯತೆ ಇಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಆದ್ದರಿಂದ ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ. ಹೀಗಾಗಿ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.

ಸಂಭಾವ್ಯ ತಂಡಗಳು

ಅಫಘಾನಿಸ್ತಾನ: ರೆಹಮಾನುಲ್ಲ ಗುರ್ಬಜ್‌, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

ನೆದರ್ಲೆಂಡ್ಸ್​: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓ ಡೌಡ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್, ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.

ನೇರ ಪ್ರಸಾರದ ವಿವರ

Exit mobile version