Site icon Vistara News

AFG vs SA: ಅಜೇಯ ದಕ್ಷಿಣ ಆಫ್ರಿಕಾಗೆ ಸವಾಲೊಡ್ಡೀತೇ ಆಫ್ಘನ್?​;

AFG vs SA

AFG vs SA: Will Afghanistan challenge unbeaten South Africa?; Tomorrow is the first semi-final

ಟ್ರಿನಿಡಾಡ್: ಹಾಲಿ ಟಿ20 ವಿಶ್ವಕಪ್‌(T20 World Cup 2024) ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳಿಗೆ ಸೊಕ್ಕಡಗಿಸಿ ಕನಸಿನ ಓಟ ಬೆಳೆಸಿರುವ ಅಫಘಾನಿಸ್ತಾನ(AFG vs SA), ನಾಳೆ ನಡೆಯುವ ಮಹತ್ವದ ಸೆಮಿಫೈನಲ್​ ಪಂದ್ಯದಲ್ಲಿ ಕೂಟದ ಅಜೇಯ ತಂಡವಾದ ದಕ್ಷಿಣ ಆಫ್ರಿಕಾದ ಸವಾಲನ್ನು(South Africa vs Afghanistan Semi Final 1) ಎದುರಿಸಲಿದೆ. ಈ ಪಂದ್ಯ ಭಾರತದಲ್ಲಿ ಬೆಳಗಿನ ಜಾವ 6 ಗಂಟೆಗೆ ಪ್ರಸಾರಗೊಳ್ಳಲಿದೆ.

ಈ ಬಾರಿಯ ಟೂರ್ನಿಯಲ್ಲಿ ಇತ್ತಂಡಗಳಿಗೂ ಕೂಡ ಅದೃಷ್ಠ ಕೈ ಹಿಡಿದಿದೆ. ಲೀಗ್​ ಹಂತದಲ್ಲಿ ಸೋಲುವ ಪಂದ್ಯಗಳನ್ನು ಗೆದ್ದು ಸೂಪರ್​-8 ಹಂತಕ್ಕೇರಿತ್ತು. ಪ್ರತಿ ಐಸಿಸಿ ಟೂರ್ನಿಯಲ್ಲಿ ಗೆಲ್ಲುವ ಪಂದ್ಯಗಳನ್ನು ಸೋಲುವ ಮತ್ತು ಮಳೆಯಿಂದ ಹೊನ್ನಡೆ ಅನುಭವಿಸಿ ಚೋಕರ್ಸ್​ ಎನಿಸಿಕೊಳ್ಳುತ್ತಿದ್ದ ದಕ್ಷಿಣ ಆಫ್ರಿಕಾದ ನಸೀಬು ಈ ಬಾರಿ ಬದಲಾದಂತಿದೆ. ಲೀಗ್​ ಹಂತದಲ್ಲಿ ಬಾಂಗ್ಲಾ ವಿರುದ್ಧ 1 ರನ್​ ಅಂತರದಿಂದ ಗೆದ್ದದ್ದು, ಸೂಪರ್​-8 ಪಂದ್ಯದಲ್ಲಿ ವಿಂಡೀಸ್​ ಎದುರು ಮಳೆ ಪೀಡಿತ ಪಂದ್ಯವನ್ನು ಜಯಿಸಿದ್ದು ನೋಡುವಾಗ ಹರಿಣ ಪಡೆ ಈ ಬಾರಿ ಚೋಕರ್ಸ್​ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಸಾಧ್ಯತೆಯೊಂದು ಕಂಡಿಬಂದಿದೆ.

ದಕ್ಷಿಣ ಆಫ್ರಿಕಾ ಪರ ಡಿ ಕಾಕ್​ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್​ ಇದುವರೆಗೂ ನಿರೀಕ್ಷತ ಬ್ಯಾಟಿಂಗ್​ ಪ್ರದರ್ಶನ ತೋರದಿದ್ದರು. ಕೂಡ ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆದ್ದಿದ್ದಾರೆ. ಆದರೆ, ಸೆಮಿಫೈನಲ್​ನಲ್ಲಿಯೂ ಇದೇ ರೀತಿಯಲ್ಲಿ ಪಂದ್ಯವನ್ನು ಗೆಲ್ಲಬಹುದು ಎಂದು ಯೋಚಿಸಿ ಕುಳಿತರೆ ಸೋಲು ಎದುರಾಗುವುದು ಖಚಿತ ಎನ್ನಲಡ್ಡಿಯಿಲ್ಲ. ಏಕೆಂದರೆ, ಅಫಘಾನಿಸ್ತಾನ 100 ರನ್​ ಬಾರಿಸಿದರೂ ಕೂಡ ಇದನ್ನು ಹಿಡಿದು ನಿಲ್ಲಿಸುವ ತಾಕತ್ತು ಈ ತಂಡದ ಬೌಲರ್​ಗಳಿಗಿದೆ. ಸ್ಪಿನ್​, ಸ್ಪೀಡ್​ ಎರಡೂ ವಿಭಾಗದಲ್ಲಿಯೂ ವೈವಿಧ್ಯಮಯವಾಗಿದೆ. ಬ್ಯಾಟಿಂಗ್​ನಲ್ಲಿ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಪ್ರತಿ ಪಂದ್ಯದಲ್ಲಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಮಧ್ಯಮ ವೇಗಿ ನವೀನ್​ ಉಲ್​ ಹಕ್​ ಕೂಡ ಘಾತಕ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇದನ್ನೂ ಓದಿ AFG vs BAN: ಕಾಬುಲ್​ನಲ್ಲಿ ಆಫ್ಘನ್ನರ ಮುಗಿಲು ಮುಟ್ಟಿದ ಸಂಭ್ರಮಾಚರಣೆ; ಗುಂಪು ಚದುರಿಸಲು ಜಲಫಿರಂಗಿ ಪ್ರಯೋಗ

ಮುಖಾಮುಖಿ


ಅಫಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಟಿ20 ಕ್ರಿಕೆಟ್​ನಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳನ್ನು ಕೂಡ ದಕ್ಷಿಣ ಆಫ್ರಿಕಾವೇ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹರಿಣ ಪಡೆಯೇ ಬಲಿಷ್ಠವಾಗಿ ಗೋಚರಿಸಿದೆ. ಆದರೂ ಕೂಡ ಅಪಾಯಕಾರಿ ಆಫ್ಘನ್​ ಸವಾಲನ್ನು ಹಗುರವಾಗಿ ಕಾಣಬಾರದು. ಏಕೆಂದರೆ ಹೊಡಿ ಬಡಿ ಆಟವಾದ ಟಿ20 ಕ್ರಿಕೆಟ್​ನಲ್ಲಿ ಕೊನೆಯ ಎಸೆತದಲ್ಲಿಯೂ ಪಂದ್ಯದ ಫಲಿತಾಂಶ ಬದಲಾದ ನಿದರ್ಶನವಿದೆ.

ಹವಾಮಾನ ವರದಿ


ಸೂಪರ್​-8 ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದರೂ ಕೂಡ ನಾಳೆ(ಬುಧವಾರ) ನಡೆಯುವ ಸೆಮಿ ಫೈನಲ್​ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ.

ಸಂಭಾವ್ಯ ತಂಡಗಳು


ದಕ್ಷಿಣ ಆಫ್ರಿಕಾ:
ಕ್ವಿಂಟನ್ ಡಿ ಕಾಕ್ (ವಿಕೆಟ್​ ಕೀಪರ್​), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಜೆ, ಒಟ್ನೀಲ್ ಬಾರ್ಟ್‌ಮನ್.

ಅಫಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಕರೀಂ ಜನತ್, ರಶೀದ್ ಖಾನ್ (ನಾಯಕ), ನಂಗೆಯಾಲಿಯಾ ಖರೋಟೆ, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

Exit mobile version