ಕಾಬುಲ್: ರಾಷ್ಟ್ರೀಯ ಕರ್ತವ್ಯಕ್ಕಿಂತ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡಲು ಮುಂದಾಗಿದ್ದ ನವೀನ್ ಉಲ್ ಹಕ್(Naveen Ul Haq), ಮುಜೀಬ್ ಉರ್ ರೆಹಮಾನ್(Mujeeb Ur Rahman) ಮತ್ತು ಫಜಲಕ್ ಫರೂಖಿ(Fazal Haq Farooqi) ಅವರಿಗೆ ನಿರಾಕ್ಷೇಪಣಾ ಪತ್ರ(No Objection Certificates) ನೀಡಲು ನಿರಾಕರಿಸಿದ್ದ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಕೊನೆಗೂ ನಿರಾಕ್ಷೇಪಣಾ ಪತ್ರ ನೀಡಿದೆ. ಹೀಗಾಗಿ ಈ ಮೂವರು ಆಟಗಾರರು ನಿಟ್ಟುಸಿರು ಬಿಡುವಂತಾಗಿದೆ.
ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ್ದ ಕಾರಣ ಮೂವರು ಆಟಗಾರರಿಗೆ ಈ ಬಾರಿಯ ಐಪಿಎಲ್ ಟೂರ್ನಿ(IPL 2024) ಕೈತಪ್ಪುವ ಭೀತಿ ಎದುರಾಗಿತ್ತು. ಆದರೆ, ಇದೀಗ ನಿರಾಕ್ಷೇಪಣಾ ಪತ್ರ ಕೈ ಸೇರಿದ್ದರಿಂದ ನಿರಾಳರಾಗಿದ್ದಾರೆ.
ಈ ಆಟಗಾರರು ವಾಣಿಜ್ಯ ಕ್ರಿಕೆಟ್ ಲೀಗ್ಗಳಲ್ಲಿ ಸಕ್ರಿಯರಾದ ಕಾರಣ ರಾಷ್ಟ್ರೀಯ ಒಪ್ಪಂದಗಳಿಂದ ಬಿಡುಗಡೆಗೆ ಬಯಸಿದ್ದರು. ರಾಷ್ಟ್ರೀಯ ಕರ್ತವ್ಯಕ್ಕಿಂತ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡಲು ಮುಂದಾದ ಕಾರಣದಿಂದ ಇವರ ವಿರುದ್ಧ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಕ್ರಮ ಕೈಗೊಂಡಿತ್ತು.
ಇದನ್ನೂ ಓದಿ IPL Betting : ಐಪಿಎಲ್ ಬೆಟ್ಟಿಂಗ್ ಕೇಸ್ ತನಿಖೆ ಕೈಬಿಟ್ಟ ಸಿಬಿಐ!
ಮುಜೀಬ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 2 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ನವೀನ್ ಉಲ್ ಹಕ್ ಅವರು ಕಳೆದ 2 ವರ್ಷಗಳಿಂದ ಲಕ್ನೋ ತಂಡದ ಭಾಗವಾಗಿದ್ದಾರೆ. ಅಲ್ಲದೆ ಅವರು ಈಗಾಗಲೇ ಏಕದಿನ ಕ್ರಿಕೆಟ್ಗೆ ವಿದಾಯ ಕೂಡ ಹೇಳಿದ್ದಾರೆ. ಫಜಲಕ್ ಫರೂಖಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿದ್ದಾರೆ.
ಅನ್ಸೋಲ್ಡ್ ಆದ ಆಟಗಾರರ ಪಟ್ಟಿ
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಕರುಣ್ ನಾಯರ್ (ಭಾರತ), ಫಿಲಿಪ್ ಸಾಲ್ಟ್ (ಇಂಗ್ಲೆಂಡ್), ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ), ಕುಸಾಲ್ ಮೆಂಡಿಸ್ (ಶ್ರೀಲಂಕಾ), ಜೋಶ್ ಹ್ಯಾಝಲ್‌ವುಡ್ (ಆಸ್ಟ್ರೇಲಿಯಾ), ಕಾಲಿನ್ ಮನ್ರೊ (ನ್ಯೂಜಿಲ್ಯಾಂಡ್), ಫಿನ್ ಅಲೆನ್ (ನ್ಯೂಜಿಲ್ಯಾಂಡ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ), ಕೈಸ್ ಅಹ್ಮದ್ (ಅಫಘಾನಿಸ್ತಾನ), ಮೈಕೆಲ್ ಬ್ರೇಸ್‌ವೆಲ್ (ನ್ಯೂಜಿಲ್ಯಾಂಡ್), ಜೇಮ್ಸ್ ನೀಶಮ್ (ನ್ಯೂಜಿಲ್ಯಾಂಡ್), ಕೀಮೋ ಪಾಲ್ (ವೆಸ್ಟ್ ಇಂಡೀಸ್), ಒಡಿಯನ್ ಸ್ಮಿತ್ (ವೆಸ್ಟ್ ಇಂಡೀಸ್), ದುಷ್ಮಂತ ಚಮೀರ (ಶ್ರೀಲಂಕಾ), ಬೆನ್ ದ್ವಾರ್ಶುಯಿಸ್ (ಆಸ್ಟ್ರೇಲಿಯಾ), ಮ್ಯಾಟ್ ಹೆನ್ರಿ (ನ್ಯೂಜಿಲ್ಯಾಂಡ್), ಕೈಲ್ ಜೇಮಿಸನ್ (ನ್ಯೂಜಿಲ್ಯಾಂಡ್), ಆಡಮ್ ಮಿಲ್ನೆ (ನ್ಯೂಜಿಲ್ಯಾಂಡ್), ಲ್ಯಾನ್ಸ್ ಮೋರಿಸ್ (ಆಸ್ಟ್ರೇಲಿಯಾ), ಲ್ಯೂಕ್ ವುಡ್ (ಇಂಗ್ಲೆಂಡ್), ಮೊಹಮ್ಮದ್ ವಕಾರ್ (ಅಫಘಾನಿಸ್ತಾನ), ಮೊಹಮ್ಮದ್ ವಕಾರ್ ಸಲಾಮ್ಖೈಲ್ (ಅಫಘಾನಿಸ್ತಾನ), ಆದಿಲ್ ರಶೀದ್ (ಇಂಗ್ಲೆಂಡ್), ಅಕೇಲ್ ಹೊಸೈನ್ (ವೆಸ್ಟ್ ಇಂಡೀಸ್), ಇಶ್ ಸೋಧಿ (ನ್ಯೂಜಿಲ್ಯಾಂಡ್), ತಬ್ರೇಝ್ ಶಮ್ಸಿ (ಸೌತ್ ಆಫ್ರಿಕಾ), ರೋಹನ್ ಕುನ್ನುಮ್ಮಲ್ (ಭಾರತ), ಪ್ರಿಯಾಂಶ್ ಆರ್ಯ (ಭಾರತ), ಮನನ್ ವೋಹ್ರಾ (ಭಾರತ), ಸರ್ಫರಾಝ್ ಖಾನ್ (ಭಾರತ), ರಾಜ್ ಅಂಗದ್ ಬಾವಾ (ಭಾರತ), ವಿವ್ರಾಂತ್ ಶರ್ಮಾ (ಭಾರತ), ಅತಿತ್ ಶೇತ್ (ಭಾರತ), ಹೃತಿಕ್ ಶೋಕೀನ್ (ಭಾರತ), ಉರ್ವಿಲ್ ಪಟೇಲ್ (ಭಾರತ), ವಿಷ್ಣು ಸೋಲಂಕಿ (ಭಾರತ), ಇಶಾನ್ ಪೊರೆಲ್ (ಭಾರತ), ಮುರುಗನ್ ಅಶ್ವಿನ್ (ಭಾರತ), ಸಂದೀಪ್ ವಾರಿಯರ್ (ಭಾರತ), ರಿತಿಕ್ ಈಶ್ವರನ್ (ಭಾರತ), ಹಿಮ್ಮತ್ ಸಿಂಗ್ (ಭಾರತ), ಶಶಾಂಕ್ ಸಿಂಗ್ (ಭಾರತ), ಸುಮೀತ್ ವರ್ಮಾ (ಭಾರತ), ಹರ್ಷ ದುಬೆ (ಭಾರತ), ಕಮಲೇಶ ನಾಗರಕೋಟಿ (ಭಾರತ), ರೋಹಿತ್ ರಾಯುಡು (ಭಾರತ), ಪ್ರದೋಶ್ ಪಾಲ್ (ಭಾರತ), ಜಿ ಅಜಿತೇಶ್ (ಭಾರತ), ಗೌರವ್ ಚೌಧರಿ (ಭಾರತ), ಬಿಪಿನ್ ಸೌರಭ್ (ಭಾರತ), ಸಾಕಿಬ್ ಹುಸೇನ್ (ಭಾರತ), ಮೊಹಮ್ಮದ್ ಕೈಫ್ (ಭಾರತ), ಕೆ ಎಂ ಆಸಿಫ್ (ಭಾರತ), ಗುರ್ಜಪ್ನೀತ್ ಸಿಂಗ್ (ಭಾರತ), ಪೃಥ್ವಿ ರಾಜ್ ಯರ್ರಾ (ಭಾರತ), ಶುಭಂ ಅಗರ್ವಾಲ್ (ಭಾರತ).
ಅನ್ಸೋಲ್ಡ್ ಆದ ಆಟಗಾರರಿಗೆ ಇನ್ನು ಕೂಡ ಐಪಿಎಲ್ ತಂಡ ಸೇರುವ ಅವಕಾಶವಿದೆ. ಇದು ಹೇಗೆ ಎನ್ನುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಐಪಿಎಲ್ ತಂಡ ಸೇರಿದ ಯಾವುದೇ ಆಟಗಾರ ಗಾಯಗೊಂಡು ಅಥವಾ ಇತರ ಕಾರಣಗಳಿಂದ ಟೂರ್ನಿಗೆ ಅಲಭ್ಯರಾದರೆ ಆಗ ಅನ್ಸೋಲ್ಡ್ ಆದ ಆಟಗಾರರಿಗೆ ಅದೃಷ್ಟ ಖುಲಾಯಿಸಲಿದೆ.