ಬೆಂಗಳೂರು: ಕೆಳ ದಿನಗಳ ಹಿಂದಷ್ಟೇ ಮುಂಬರುವ ಐಪಿಎಲ್(IPL 2024) ಆವೃತ್ತಿಗೆ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆದಿತ್ತು. ಎಲ್ಲ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಖರೀದಿ ಮಾಡುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿಕೊಂಡಿದೆ. ಆದರೆ ಇದೀಗ ಕೆಲ ಫ್ರಾಂಚೈಸಿಗಳಿಗೆ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ(Afghanistan Cricket Board) ಶಾಕ್ ನೀಡಿದೆ.
ಮೂವರು ಆಟಗಾರರಾದ ನವೀನ್ ಉಲ್ ಹಕ್(Naveen Ul Haq), ಮುಜೀಬ್ ಉರ್ ರೆಹಮಾನ್(Mujeeb Ur Rahman) ಮತ್ತು ಫಜಲಕ್ ಫರೂಖಿ(Fazal Haq Farooqi) ಅವರಿಗೆ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಐಪಿಎಲ್ ಆಡಲು ನಿರಾಕ್ಷೇಪಣಾ ಪತ್ರ(No Objection Certificates) ನೀಡಲು ಮಂಡಳಿ ನಿರಾಕರಿಸಿದೆ. ಇದರಿಂದ ಇವರನ್ನು ಖರೀದಿ ಮಾಡಿದ ಫ್ರಾಂಚೈಸಿಗಳಿಗೆ ದೊಡ್ಡ ಆತಂಕ ಉಂಟಾಗಿದೆ.
“ಈ ಮೂವರು ಆಟಗಾರರು ತಮ್ಮ ವಾರ್ಷಿಕ ಕೇಂದ್ರೀಯ ಒಪ್ಪಂದಗಳಿಂದ ಬಿಡುಗಡೆ ಹೊಂದಲು ಬಯಸಿದ್ದಾರೆ. ರಾಷ್ಟ್ರೀಯ ಕರ್ತವ್ಯಕ್ಕಿಂತ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡಲು ಮುಂದಾಗಿರು ಇವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಈ ಆಟಗಾರರು ವಾಣಿಜ್ಯ ಕ್ರಿಕೆಟ್ ಲೀಗ್ಗಳಲ್ಲಿ ಸಕ್ರಿಯರಾದ ಕಾರಣ ರಾಷ್ಟ್ರೀಯ ಒಪ್ಪಂದಗಳಿಂದ ಬಿಡುಗಡೆಗೆ ಬಯಸಿದ್ದರು.
ಇದನ್ನೂ ಓದಿ IPL 2024: ‘ಆರ್ಸಿಬಿಗೆ ಒಂದು ಕಪ್ ಗೆಲ್ಲಿಸಿ ಕೊಡಿ’; ಧೋನಿಗೆ ಮನವಿ ಮಾಡಿದ ಅಭಿಮಾನಿ
ಮುಂದಿನ ವರ್ಷ ಮಾರ್ಚ್ ಅಂತ್ಯದಲ್ಲಿ ಐಪಿಎಲ್ ಟೂರ್ನಿ ಆರಂಭವಾಗುವ ನಿರೀಕ್ಷೆ ಇದೆ. ಮುಜೀಬ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 2 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ನವೀನ್ ಉಲ್ ಹಕ್ ಅವರು ಕಳೆದ 2 ವರ್ಷಗಳಿಂದ ಲಕ್ನೋ ತಂಡದ ಭಾಗವಾಗಿದ್ದಾರೆ. ಅಲ್ಲದೆ ಅವರು ಈಗಾಗಲೇ ಏಕದಿನ ಕ್ರಿಕೆಟ್ಗೆ ವಿದಾಯ ಕೂಡ ಹೇಳಿದ್ದಾರೆ. ಫಜಲಕ್ ಫರೂಖಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿದ್ದಾರೆ. ಒಂದೊಮ್ಮೆ ಇವರು ನಿರಾಕ್ಷೇಪಣಾ ಪತ್ರ ಪಡೆಯಲು ಸಾಧ್ಯವಾಗದಿದ್ದರೆ ಐಪಿಎಲ್ ಆಡುವುದು ಅನುಮಾನ.
ಈ ಬಾರಿ ಅನ್ಸೋಲ್ಡ್ ಆದ ಆಟಗಾರರ ಪಟ್ಟಿ
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಕರುಣ್ ನಾಯರ್ (ಭಾರತ), ಫಿಲಿಪ್ ಸಾಲ್ಟ್ (ಇಂಗ್ಲೆಂಡ್), ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ), ಕುಸಾಲ್ ಮೆಂಡಿಸ್ (ಶ್ರೀಲಂಕಾ), ಜೋಶ್ ಹ್ಯಾಝಲ್‌ವುಡ್ (ಆಸ್ಟ್ರೇಲಿಯಾ), ಕಾಲಿನ್ ಮನ್ರೊ (ನ್ಯೂಜಿಲ್ಯಾಂಡ್), ಫಿನ್ ಅಲೆನ್ (ನ್ಯೂಜಿಲ್ಯಾಂಡ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ), ಕೈಸ್ ಅಹ್ಮದ್ (ಅಫಘಾನಿಸ್ತಾನ), ಮೈಕೆಲ್ ಬ್ರೇಸ್‌ವೆಲ್ (ನ್ಯೂಜಿಲ್ಯಾಂಡ್), ಜೇಮ್ಸ್ ನೀಶಮ್ (ನ್ಯೂಜಿಲ್ಯಾಂಡ್), ಕೀಮೋ ಪಾಲ್ (ವೆಸ್ಟ್ ಇಂಡೀಸ್), ಒಡಿಯನ್ ಸ್ಮಿತ್ (ವೆಸ್ಟ್ ಇಂಡೀಸ್), ದುಷ್ಮಂತ ಚಮೀರ (ಶ್ರೀಲಂಕಾ), ಬೆನ್ ದ್ವಾರ್ಶುಯಿಸ್ (ಆಸ್ಟ್ರೇಲಿಯಾ), ಮ್ಯಾಟ್ ಹೆನ್ರಿ (ನ್ಯೂಜಿಲ್ಯಾಂಡ್), ಕೈಲ್ ಜೇಮಿಸನ್ (ನ್ಯೂಜಿಲ್ಯಾಂಡ್), ಆಡಮ್ ಮಿಲ್ನೆ (ನ್ಯೂಜಿಲ್ಯಾಂಡ್), ಲ್ಯಾನ್ಸ್ ಮೋರಿಸ್ (ಆಸ್ಟ್ರೇಲಿಯಾ), ಲ್ಯೂಕ್ ವುಡ್ (ಇಂಗ್ಲೆಂಡ್), ಮೊಹಮ್ಮದ್ ವಕಾರ್ (ಅಫಘಾನಿಸ್ತಾನ), ಮೊಹಮ್ಮದ್ ವಕಾರ್ ಸಲಾಮ್ಖೈಲ್ (ಅಫಘಾನಿಸ್ತಾನ), ಆದಿಲ್ ರಶೀದ್ (ಇಂಗ್ಲೆಂಡ್), ಅಕೇಲ್ ಹೊಸೈನ್ (ವೆಸ್ಟ್ ಇಂಡೀಸ್), ಇಶ್ ಸೋಧಿ (ನ್ಯೂಜಿಲ್ಯಾಂಡ್), ತಬ್ರೇಝ್ ಶಮ್ಸಿ (ಸೌತ್ ಆಫ್ರಿಕಾ), ರೋಹನ್ ಕುನ್ನುಮ್ಮಲ್ (ಭಾರತ), ಪ್ರಿಯಾಂಶ್ ಆರ್ಯ (ಭಾರತ), ಮನನ್ ವೋಹ್ರಾ (ಭಾರತ), ಸರ್ಫರಾಝ್ ಖಾನ್ (ಭಾರತ), ರಾಜ್ ಅಂಗದ್ ಬಾವಾ (ಭಾರತ), ವಿವ್ರಾಂತ್ ಶರ್ಮಾ (ಭಾರತ), ಅತಿತ್ ಶೇತ್ (ಭಾರತ), ಹೃತಿಕ್ ಶೋಕೀನ್ (ಭಾರತ), ಉರ್ವಿಲ್ ಪಟೇಲ್ (ಭಾರತ), ವಿಷ್ಣು ಸೋಲಂಕಿ (ಭಾರತ), ಇಶಾನ್ ಪೊರೆಲ್ (ಭಾರತ), ಮುರುಗನ್ ಅಶ್ವಿನ್ (ಭಾರತ), ಸಂದೀಪ್ ವಾರಿಯರ್ (ಭಾರತ), ರಿತಿಕ್ ಈಶ್ವರನ್ (ಭಾರತ), ಹಿಮ್ಮತ್ ಸಿಂಗ್ (ಭಾರತ), ಶಶಾಂಕ್ ಸಿಂಗ್ (ಭಾರತ), ಸುಮೀತ್ ವರ್ಮಾ (ಭಾರತ), ಹರ್ಷ ದುಬೆ (ಭಾರತ), ಕಮಲೇಶ ನಾಗರಕೋಟಿ (ಭಾರತ), ರೋಹಿತ್ ರಾಯುಡು (ಭಾರತ), ಪ್ರದೋಶ್ ಪಾಲ್ (ಭಾರತ), ಜಿ ಅಜಿತೇಶ್ (ಭಾರತ), ಗೌರವ್ ಚೌಧರಿ (ಭಾರತ), ಬಿಪಿನ್ ಸೌರಭ್ (ಭಾರತ), ಸಾಕಿಬ್ ಹುಸೇನ್ (ಭಾರತ), ಮೊಹಮ್ಮದ್ ಕೈಫ್ (ಭಾರತ), ಕೆ ಎಂ ಆಸಿಫ್ (ಭಾರತ), ಗುರ್ಜಪ್ನೀತ್ ಸಿಂಗ್ (ಭಾರತ), ಪೃಥ್ವಿ ರಾಜ್ ಯರ್ರಾ (ಭಾರತ), ಶುಭಂ ಅಗರ್ವಾಲ್ (ಭಾರತ)