Site icon Vistara News

ಭಾರತ ವಿರುದ್ಧದ ಟಿ20 ಸರಣಿಗೆ ಆಫ್ಘನ್​ ತಂಡ ಪ್ರಕಟ; ತಂಡಕ್ಕೆ ಮರಳಿದ ರಶೀದ್‌ ಖಾನ್‌

Afghanistan Cricket

ಕಾಬೂಲ್: ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಅಫಘಾನಿಸ್ತಾನ ತಂಡ(Afghanistan Cricket) ಪ್ರಕಟಗೊಂಡಿದೆ. ತಂಡವನ್ನು ಇಬ್ರಾಹಿಂ ಝದ್ರಾನ್ ಮುನ್ನಡೆಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಮತ್ತೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಸರಣಿಯ ಮೊದಲ ಪಂದ್ಯ ಜನವರಿ 11ರಿಂದ ಆರಂಭಗೊಳ್ಳಲಿದೆ. ಭಾರತ ತಂಡ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

‘ಮೊದಲ ಬಾರಿಗೆ ಭಾರತದಲ್ಲಿ ಮೂರು ಪಂದ್ಯಗಳ ಸರಣಿ ಆಡಲು ತೆರಳುತ್ತಿರುವುದು ಅಪಾರ ಸಂತಸ ತಂದಿದೆ’ ಎಂದು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮುಖ್ಯಸ್ಥ ಮೀರ್‌ವೈಸ್ ಅಶ್ರಫ್ ಹೇಳಿದ್ದಾರೆ. ಇತ್ತೀಚಿನ ಯುಎಇ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಮುಜೀಬ್‌ ಉರ್‌ ರೆಹಮಾನ್‌, ಯುಎಇ ಸರಣಿ ವೇಳೆ ಮೀಸಲು ಆಟಗಾರನಾಗಿದ್ದ ಇಕ್ರಮ್‌ ಅಲಿಖೀಲ್‌ ಮುಖ್ಯ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ..

ಜ. 11ರಂದು ಮೊಹಾಲಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, 14ರಂದು ಇಂದೋರ್ ಮತ್ತು 17ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ WTC 2023-25 Points Table: ಡಬ್ಲ್ಯುಟಿಸಿ​ ಅಂಕಪಟ್ಟಿಯಲ್ಲೂ ಭಾರತಕ್ಕೆ ಆಘಾತವಿಕ್ಕಿದ ಆಸ್ಟ್ರೇಲಿಯಾ

ತಂಡ

ಇಬ್ರಾಹಿಂ ಝದ್ರಾನ್ (ನಾಯಕ), ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್‌ಕೀಪರ್), ಇಕ್ರಂ ಅಲಿಖಿಲ್ (ವಿಕೆಟ್‌ ಕೀಪರ್), ಹಜರತ್‌ವುಲ್ಲಾ ಝಝೈ, ರೆಹಮತ್ ಶಾ, ನಜೀಬುಲ್ಲಾ ಝದ್ರಾನ್, ರಶೀದ್ ಖಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜಮುಲ್ಲಾ ಒಮರ್‌ಝೈ, ಶರಾಫುದ್ದೀನ್ ಅಶ್ರಫ್‌, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಖಿ, ಫರೀದ್ ಅಹಮದ್, ನವೀನ್ ಉಲ್ ಹಕ್, ನೂರ್‌ ಅಹಮದ್, ಮೊಹಮ್ಮದ್ ಸಲೀಂ, ಖೈಸ್ ಅಹಮದ್, ಗುಲ್ಬದೀನ್‌ ನೈಬ್‌.

ಟೆಸ್ಟ್​ ಶ್ರೇಯಾಂಕದಲ್ಲಿ ಕುಸಿದ ಭಾರತ


ಸರಿ ಸುಮಾರು ಏಳು ತಿಂಗಳಿನಿಂದ ಟೆಸ್ಟ್​ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ತಂಡ ಒಂದು ಸ್ಥಾನದ ಕುಸಿತ ಕಂಡು ದ್ವಿತೀಯ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ 118 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದರೆ, ಭಾರತ ಕೇವಲ ಒಂದು ಅಂಕದ ಹಿನ್ನೆಡೆಯಿಂ ತನ್ನ ಅಗ್ರಸ್ಥಾನ ಕಳೆದುಕೊಂಡಿತು. ಸದ್ಯ ಭಾರತದ ರೇಟಿಂಗ್​ ಅಂಕ 117.

ಅಗ್ರ 5 ಸ್ಥಾನ ಪಡೆದ ತಂಡಗಳು

ಆಸ್ಟ್ರೇಲಿಯಾ- 30 ಪಂದ್ಯ (118 ರೇಟಿಂಗ್​ ಅಂಕ)

ಭಾರತ-32 ಪಂದ್ಯ (117 ರೇಟಿಂಗ್​ ಅಂಕ)

ಇಂಗ್ಲೆಂಡ್​-43 ಪಂದ್ಯ(115 ರೇಟಿಂಗ್​ ಅಂಕ)

ದಕ್ಷಿಣ ಆಫ್ರಿಕಾ-24 ಪಂದ್ಯ(106 ರೇಟಿಂಗ್​ ಅಂಕ)

ನ್ಯೂಜಿಲ್ಯಾಂಡ್​-26 ಪಂದ್ಯ(95 ರೇಟಿಂಗ್​ ಅಂಕ)

Exit mobile version