Site icon Vistara News

Pakistan Cricket Team | ಪಾಕಿಸ್ತಾನ ಕ್ರಿಕೆಟ್​ ಮಂಡಳಿಯಲ್ಲಿ ಅಫ್ರಿದಿಗೂ ಒಂದು ಸ್ಥಾನ; ಯಾವ ಹುದ್ದೆ ಅವರಿಗೆ?

engvspak

ಇಸ್ಲಾಮಾಬಾದ್​ : ಅಸ್ಥಿರತೆಯನ್ನೇ ಜೀವಾಳ ಮಾಡಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯಲ್ಲಿ ಮತ್ತೊಮ್ಮೆ ಅಲ್ಲೊಲ ಕಲ್ಲೋಲ ಉಂಟಾಗಿದೆ. ಕಳೆದ ವಾರವಷ್ಟೇ ಅಧ್ಯಕ್ಷ ರಮೀಜ್​ ರಾಜಾ ಅವರನ್ನು ಏಕಾಏಕಿ ಅವರ ಸ್ಥಾನದಿಂದ ಕಿತ್ತೊಗೆದಿದ್ದ ಅಲ್ಲಿನ ಸರಕಾರ, ಇದೀಗ ಹಲವಾರು ಹೊಸ ನೇಮಕಗಳನ್ನೂ ಮಾಡಿಕೊಂಡಿದೆ. ಅಂತೆಯೇ ಪಾಕಿಸ್ತಾನ ತಂಡದ ಮಾಜಿ ಆಲ್​ರೌಂಡರ್​ ಶಾಹಿದ್​ ಅಫ್ರಿದಿಗೆ ರಾಷ್ಟ್ರೀಯ ತಂಡ ಆಯ್ಕೆ ಸಮಿತಿಯ ಹಂಗಾಮಿ ಮುಖ್ಯಸ್ಥರ ಸ್ಥಾನ ಲಭಿಸಿದೆ.

ಶನಿವಾರ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಹೊಸ ನೇಮಕಗಳನ್ನು ಘೋಷಣೆ ಮಾಡಿದೆ. ಅಂತೆಯೇ ಅಫ್ರಿದಿ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡಲಿದ್ದು, ಮಾಜಿ ವೇಗದ ಬೌಲರ್​ ಅಬ್ದುಲ್​ ರಜಾಕ್​ ಹಾಗೂ ರಾವ್ ಇಫ್ತಿಕಾರ್​ ಕೂಡ ಆಯ್ಕೆ ಮಂಡಳಿಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ 20 ವರ್ಷ ಆಡಿದ್ದ ಶಾಹಿದ್ ಅಫ್ರಿದಿ ಅವರು ಆ ತಂಡದ ಅತ್ಯಂತ ಜನಪ್ರಿಯ ಆಟಗಾರ ಎನಿಸಿಕೊಂಡಿದ್ದರು. 27 ಟೆಸ್ಟ್​, 398 ಏಕ ದಿನ ಹಾಗೂ 99 ಟಿ 20 ಪಂದ್ಯಗಳಲ್ಲಿ ಅವರು ಆಡಿದ್ದರು. ನಿವೃತ್ತಿ ಬಳಿಕ ಅವರು ಕ್ರಿಕೆಟ್​ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಪಿಸಿಬಿಯಲ್ಲಿ ದೊಡ್ಡ ಹುದ್ದೆಯನ್ನು ಪಡೆದುಕೊಂಡಿದ್ದಾರೆ.

ಪಾಕಿಸ್ತಾನ ಸರಕಾರಕ್ಕೆ ಅಲ್ಲಿನ ಕ್ರಿಕೆಟ್​ ಮಂಡಳಿಯಲ್ಲಿ ಅಧಿಕಾರವಿದೆ. ಪ್ರಧಾನಿ ಮಂಡಳಿಯ ಪೋಷಕರಾಗಿರುತ್ತಾರೆ. ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ ಅವರು ಪಾಕ್ ಪ್ರಧಾನಿಯಾಗಿದ್ದ ವೇಳೆ ಆತ್ಮೀಯರಾಗಿದ್ದ ರಮೀಜ್​ಗೆ ಪಿಸಿಬಿ ಹುದ್ದೆ ಕಲ್ಪಿಸಿದ್ದರು. ಅವರ ಅಧಿಕಾರ ಕಳೆದುಕೊಂಡ ಬಳಿಕ ಶಹಬಾಜ್​ ಶರೀಫ್​ ಸಿಎಂ ಆದ ಬಳಿಕ ರಮೀಜ್ ಅವರನ್ನು ಹುದ್ದೆಯಿಂದ ಕಿತ್ತೊಗೆದು ನಜಮ್​ ಸೇಥ್​ ಅವರನ್ನು ಅಧ್ಯಕ್ಷ ಹುದ್ದೆಗೇರಿಸಿದ್ದರು.

ಇದನ್ನೂ ಓದಿ | Pakistan Cricket Board | ಭಾರತ ತಂಡವನ್ನು ಟೀಕಿಸುತ್ತಿದ್ದ ಪಿಸಿಬಿ ಅಧ್ಯಕ್ಷ ರಮೀಜ್​ ಸ್ಥಾನಕ್ಕೇ ಕುತ್ತು!

Exit mobile version