Site icon Vistara News

Afro Asia Cup | ವಿರಾಟ್ ಹಾಗೂ ಬಾಬರ್‌ ಒಂದೇ ತಂಡಕ್ಕೆ ಆಡ್ತಾರಾ?

ನವ ದೆಹಲಿ: ಮುಂದಿನ ವರ್ಷ ನಡೆಯಲಿರುವ ಆಫ್ರೊ-ಏಷ್ಯಾ ಕಪ್‌ (Afro Asia Cup) ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಆಟಗಾರರು ಒಂದೇ ತಂಡದಲ್ಲಿ ಆಡುವ ಸಾಧ್ಯತೆಯಿದೆ. ಈ ಟೂರ್ನಿ ಏಷ್ಯಾ ಹಾಗೂ ಆಫ್ರಿಕ ಖಂಡಗಳ ನಡುವೆ ನಡೆಯಲಿದೆ. ಈ ಹಿಂದೆ ನಡೆದ ಆಫ್ರೊ-ಏಷ್ಯಾ ಕಪ್‌ ಬಹಳ ಸಮಯದಿಂದ ನಡೆದಿರಲಿಲ್ಲ. ಈಗ ಅದನ್ನು ಪುನರಾರಂಭಿಸಲು ಉಭಯ ಖಂಡಗಳು ನಿರ್ಧರಿವೆ. ಈ ಸರಣಿ 2023ರಲ್ಲಿ ನಡೆಯಬಹುದಾಗಿದೆ ಎಂದು ತಿಳಿದು ಬಂದಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಈ ರೀತಿಯ ಯಾವುದೇ ಸರಣಿ ನಡೆದಿಲ್ಲ. ಈ ಉಭಯ ದೇಶಗಳು ಕೇವಲ ಐಸಿಸಿ ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ ಹೊರತು ಯಾವುದೇ ಪ್ರಾದೇಶಿಕ ಲೀಗ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಡಿಲ್ಲ. ಪಾಕಿಸ್ತಾನಿ ಆಟಗಾರರಿಗೆ ಐಪಿಎಲ್‌ನಲ್ಲಿ ಅವಕಾಶ ನೀಡುತ್ತಿಲ್ಲ. ಭಾರತ ಆಟಗಾರರು ಪಾಕಿಸ್ತಾನಿ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ, ಈ ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಆಟಗಾರರು ಒಟ್ಟಿಗೇ ಆಡುವುದು ವಿಶೇಷ. ಭಾರತದ ಸ್ಟಾರ್‌ ಆಟಗಾರ ವಿರಾಟ್‌ ಕೋಹ್ಲಿ ಹಾಗೂ ಪಾಕಿಸ್ತಾನದ ಕ್ಯಾಪ್ಟನ್‌ ಬಾಬರ್‌ ಅಜಮ್‌ ಒಟ್ಟಿಗೆ ಆಡುವುದು ಮತ್ತೊಂದು ವಿಶೇಷ.

ಈ ಹಿಂದೆ ನಡೆದ ಆಫ್ರೊ-ಏಷಾ ಕಪ್

2005 ಹಾಗೂ 2007ರಲ್ಲಿ ಆಫ್ರಿಕ ಖಂಡ ಹಾಗೂ ಏಷ್ಯಾ ಖಂಡದ ವಿರುದ್ಧ ಈ ಸರಣಿ ನಡೆದಿತ್ತು. ಆಗ ಈ ಟೂರ್ನಿಯಲ್ಲಿ ಭಾರತದ ರಾಹುಲ್‌ ದ್ರಾವಿಡ್‌, ವಿರೇಂದ್ರ ಸೆಹ್ವಾಗ್‌ ಹಾಗೂ ಪಾಕಿಸ್ತಾನದ ಶೋಯೆಬ್‌ ಮಲ್ಲಿಕ್‌, ಶಾಹಿದ್‌ ಅಫ್ರಿದಿ ಜತೆಯಾಗಿ ಆಡಿದ್ದರು. ಆಫ್ರಿಕ ಖಂಡದ ಪರವಾಗಿ ದಕ್ಷಿಣ ಆಫ್ರಿಕ, ಜಿಂಬಾಬ್ವೆ ತಂಡದ ಆಟಗಾರರು ಜಂಟಿಯಾಗಿ ಆಡಿದ್ದರು. ಆದರೆ, ಅದಾದ ನಂತರ ಈ ರೀತಿಯ ಯಾವುದೇ ಸರಣಿ ನಡೆದಿಲ್ಲ. ಈಗ ನಡೆಯುವುದು ಕ್ರಿಕೆಟ್‌ ಅಭಿಮಾನಿಗಳಿಗೆ ಕುತೂಹಲ ಹಾಗೂ ಸಂತಸ ಎರಡನ್ನೂ ಹೆಚ್ಚಿಸಿದೆ.

ಈ ಸರಣಿಯ ಮಹತ್ವದ ಬಗ್ಗೆ ಮಾತನಾಡಿದ ಬಿಸಿಸಿಐನ ಜಯ್‌ ಶಾ ʼ2023ರ ಜುಲೈ ಹೊತ್ತಿಗೆ ಎರಡೂ ಖಂಡಗಳ ನಡುವೆ ಟಿ 20 ಮಾದರಿಯಲ್ಲಿ ಸರಣಿ ನಡೆಯಬಹುದು. ಈ ಸರಣಿ ಎರಡೂ ಖಂಡಗಳಿಗೆ ಉಪಯೋಗವಾಗಲಿದೆ. ಈ ಸರಣಿಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಹಾಗೂ ಆಫ್ರಿಕನ್‌ ಕ್ರಿಕೆಟ್‌ ಅಸೋಸಿಯೇಷನ್‌ ಸಹಭಾಗಿತ್ವದಲ್ಲಿ ಪರಿಶ್ರಮಿಸಲಿದೆʼ ಎಂದು ಹೇಳಿದರು.

ಇದನ್ನೂ ಓದಿ: Ireland Tour | ಟೀಮ್‌ ಇಂಡಿಯಾಕ್ಕೆ ಹಾರ್ದಿಕ್‌ ಪಾಂಡ್ಯ ಕ್ಯಾಪ್ಟನ್‌

Exit mobile version