ಲಂಡನ್ : ಭಾರತ ತಂಡ ಕ್ರೀಡಾ ಸ್ಫೂರ್ತಿ ಮರೆತಿದೆ ಎಂದು ಮೈದಾನದಲ್ಲಿ ಕಣ್ಣೀರಿಟ್ಟಿದ್ದ ಇಂಗ್ಲೆಂಡ್ ತಂಡದ ಆಟಗಾರ್ತಿ ೨೪ ಗಂಟೆ ಕಳೆಯುವುದರೊಳಗೆ, ತಾವೇ ಅದೇ ರೀತಿ ಬೇರೊಬ್ಬರನ್ನು ಔಟ್ ಮಾಡಲು ಮುಂದಾದ ಪ್ರಸಂಗ ನಡೆದಿದೆ. ಈ ಬಗ್ಗೆ ಇಂಗ್ಲೆಂಡ್‌ನ ಬರ್ಮಿ ಆರ್ಮಿ ವಿಡಿಯೊ ಶೇರ್ ಮಾಡಿದ್ದು, ಚಾರ್ಲಿ ಡೀನ್ ೨೪ ಗಂಟೆ ಅಂತರದಲ್ಲಿ ಎಂದು ಬರೆದುಕೊಂಡಿದೆ. ಆದರೆ ಅವರ ಪ್ರಯತ್ನಕ್ಕೆ ಸಾಫಲ್ಯ ದೊರಕಿಲ್ಲ. ಎದುರಾಳಿ ತಂಡದ ಆಟಗಾರ್ತಿ ಪಾದ ಮೇಲಕ್ಕೆ ಎತ್ತದೇ ಬಚಾವಾದರು.
ಶನಿವಾಋ ಇಂಗ್ಲೆಂಡ್ ತಂಡ ಪರವಾಗಿ ಆಡಿದ್ದ ಅಲ್‌ರೌಂಡರ್ ಚಾರ್ಲಿ ಭಾನುವಾರ ಸ್ಥಳೀಯ ಪಂದ್ಯವೊಂದರಲ್ಲಿ ಸದರ್ನ್ ವೈಪರ್ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಇನಿಂಗ್ಸ್‌ನ ೧೮ ಓವರ್‌ನಲ್ಲಿ ಬೌಲಿಂಗ್ ಮಾಡಲು ಮುಂದಾದ ಚಾರ್ಲಿ ಓಡಿಕೊಂಡು ಬಂದರು. ಈ ವೇಳೆ ನಾನ್‌ಸ್ಟ್ರೈಕ್‌ನಲ್ಲಿದ್ದ ನಾರ್ತರ್ನ್ ಡೈಮಂಡ್ ತಂಡದ ಎಲ್‌ಸಿಎನ್ ಸ್ಮಿತ್ ಮುಂದಕ್ಕೆ ಚಲಿಸಿದರು. ತಕ್ಷಣ ಚಾರ್ಲಿ ಅವರನ್ನು ರನ್ ಔಟ್ ಮಾಡಲು ಮುಂದಾದರು. ಆದರೆ, ಸ್ಮಿತ್ ಅಲ್ಲಿಂದ ಪಾದ ಮುಂದಕ್ಕೆ ಇಡಲಿಲ್ಲ. ಇದರಿಂದ ಅವರು ನಿರಾಸೆ ಎದುರಿಸಿದರು.
ಶನಿವಾರ ಚಾರ್ಲಿ ಡೀನ್ ಅವರನ್ನು ಭಾರತ ತಂಡದ ದೀಪ್ತಿ ಶರ್ಮ ಅವರು ನಾನ್‌ಸ್ಟ್ರೈಕ್ ಎಂಡ್‌ನಲ್ಲಿ ರನ್‌ಔಟ್ ಮಾಡಿದ್ದರು. ಈ ಬಗ್ಗೆ ಕ್ರಿಕೆಟ್ ಕ್ಷೇತ್ರದಲ್ಲಿ ಚರ್ಚೆ ನಡೆದಿತ್ತು.
ಇದನ್ನೂ ಓದಿ | Deepti Sharma | ದೀಪ್ತಿ ಶರ್ಮ ಬೆಂಬಲಕ್ಕೆ ನಿಂತ ಕ್ರಿಕೆಟ್ ನಿಯಮ ರೂಪಿಸುವ ಎಮ್‌ಸಿಸಿ ಕ್ಲಬ್