ಅಹಮದಾಬಾದ್: ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ 168 ರನ್ಗಳ ಜಯ ದಾಖಲಿಸಿ ಸರಣಿ ಗೆಲುವು ಕಂಡಿದೆ. ಪಂದ್ಯದ ಗೆಲುವಿನಲ್ಲಿ ಶುಭ್ಮನ್ ಗಿಲ್ ಮತ್ತು ನಾಯಕ ಹಾರ್ದಿಕ್(Hardik Pandya) ಪಾಂಡ್ಯ ಮಹತ್ವದ ಕೊಡುಗೆ ನೀಡಿ ಗಮನ ಸೆಳೆದರು.
ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ(ms dhoni) ಅವರು ನಿಭಾಯಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ನಾನು ಎಲ್ಲ ರೀತಿಯಲ್ಲಿಯೂ ಸಿದ್ಧನಾಗಿದ್ದೇನೆ. ಅವರು ತಂಡದಿಂದ ಹೋದ ಬಳಿಕ ಇದೀಗ ಜವಾಬ್ದಾರಿ ನನ್ನ ಹೆಗಲೇರಿದೆ ಎಂದು ಹೇಳಿದರು.
ನಾಯಕಾದ ಬಳಿಕ ನಾನು ಒತ್ತಡದ ಪರಿಸ್ಥಿಯನ್ನು ಹೇಗೆ ನಿರ್ವಹಿಸಬೇಕೆಂಬುವುದನ್ನು ಕಲಿತ್ತಿದ್ದೇನೆ. ಮೊದಲಿನ ಹಾಗೆ ನಾನು ಸ್ಫೋಟಕ ಬ್ಯಾಟಿಂಗ್ ನಡೆಸುವುದಿಲ್ಲ. ಕಾರಣ ಧೋನಿಯಂತೆ ನಾನು ತಂಡಕ್ಕೆ ಆಧಾರವಾಗಲು ನಿರ್ಧರಿಸಿದ್ದೇನೆ. ಇದರಿಂದ ಹೊಸತನಕ್ಕೆ ಹೊಂದಿಕೊಳ್ಳಲು ಎದುರು ನೋಡುತ್ತೇನೆ. ಹೀಗಾಗಿ ನನ್ನ ಬ್ಯಾಟಿಂಗ್ ಸ್ಟ್ರೈಕ್ರೇಟ್ ಕಡಿಮೆಯಾಗಬಹುದು ಎಂದು ಪಾಂಡ್ಯ ಬಾವುಕರಾದರು.
ಇದನ್ನೂ ಓದಿ IND VS NZ: ಪಾಕಿಸ್ತಾನದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ಸದ್ಯ ಧೋನಿಯಂತೆ ಎಲ್ಲ ಸರಣಿಯಲ್ಲೂ ಹಾರ್ದಿಕ್ ಪಾಂಡ್ಯ ಕಪ್ ಗೆಲ್ಲುತ್ತಿದ್ದು ಭವಿಷ್ಯದ ಟೀಮ್ ಇಂಡಿಯಾದ(team india) ನಾಯಕ ಎಂದು ಬಣ್ಣಿಸಲಾಗಿದೆ. ಆದರೆ ಪಾಂಡ್ಯ ಕೂಲ್ ವಿಚಾರದಲ್ಲಿ ಇನ್ನೂ ಸ್ವಲ್ಪ ಸುಧಾರಣೆ ಕಾಣಬೇಕಿದೆ.