ನವ ದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸತತ ಮೂರು ವರ್ಷ ಪ್ರದರ್ಶನ ವೈಫಲ್ಯ ಎದುರಿಸಿದ್ದರು. ಕಂಡಕಂಡವರೆಲ್ಲರೂ ಅವರ ಮೇಲೆ ಮುಗಿ ಬಿದ್ದು ಟೀಕೆ ಮಾಡಿದ್ದರು. ಇದರಿಂದ ಸಹಜವಾಗಿಯೇ ಅವರು ಕುದ್ದು ಹೋಗಿದ್ದರು. ಟೀಕಾಕಾರರ ನಡುವೆಯೂ ಹಲವರು ಕೊಹ್ಲಿ ಮತ್ತೆ ಫಾರ್ಮ್ಗೆ ಮರಳಿಯೇ ಮರಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರಲ್ಲೊಬ್ಬರು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್. ಟ್ವೀಟ್ ಮಾಡಿದ ಸಮಾಧಾನವನ್ನೂ ಹೇಳಿದ್ದ ಅವರು ಇಂಥದ್ದೆಲ್ಲ ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತದೆ ಎಂಬುದಾಗಿಯೂ ಹೇಳಿದ್ದರು. ಇಂಥದ್ದೊಂದು ಟ್ವೀಟ್ ಯಾಕೆ ಮಾಡಿರುವುದು ಯಾಕೆ ಎಂಬುದಾಗಿ ಅಜಮ್ ಇದೀಗ ಕಾರಣ ಕೊಟ್ಟಿದ್ದಾರೆ.
ಐಸಿಸಿಯ ಡಿಜಿಟಲ್ ಇನ್ಸೈಡರ್ ಎಂಬ ಕಾರ್ಯಕ್ರಮದಲ್ಲಿ ಜೈನಾಬ್ ಅಬ್ಬಾಸ್ ಅವರ ಜತೆ ಮಾತನಾಡಿರುವ ಬಾಬರ್, ಒಬ್ಬ ಕ್ರೀಡಾಪಟುವಾಗಿ ಇನ್ನೊಬ್ಬ ಕ್ರೀಡಾಪಟು ಕಷ್ಟದಲ್ಲಿರುವಾಗ ಸ್ಪಂದನೆ ನೀಡಲೇಬೇಕು. ನಾವು ಮಾಡುವ ಒಂದು ಟ್ವೀಟ್ನಿಂದ ಮತ್ತೊಬ್ಬರಿಗೆ ಅದು ಸಮಾಧಾನ ತಂದುಕೊಡಬಹುದು. ಯಾವುದೇ ಕ್ರೀಡಾಪಟು ಇನ್ನೊಬ್ಬ ಕ್ರೀಡಾಪಟುವಿಗೆ ನೆರವಾಗುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ಕಾಕತಾಳಿಯವೆಂಬಂತೆ ಬಾಬರ್ ಅಜಮ್ ಟ್ವೀಟ್ ಮಾಡಿದ ಕೆಲವೇ ದಿನಗಳಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿದ್ದರು. ಏಷ್ಯಾ ಕಪ್ನಲ್ಲಿ ಅಫಘಾನಿಸ್ತಾನ ತಂಡದ ವಿರುದ್ಧ ಶತಕವನ್ನೇ ಬಾರಿಸಿದ್ದರು. ಒಟ್ಟಾರೆ 272 ರನ್ಗಳನ್ನು ಬಾರಿಸಿ ಮಿಂಚಿದ್ದರು.
ಇದನ್ನೂ ಓದಿ : IND VS AUS: ಆಸೀಸ್ ವಿರುದ್ಧದ ದ್ವಿತೀಯ ಟೆಸ್ಟ್ಗೆ ಲಾಂಗ್ ಡ್ರೈವ್ ಮೂಲಕ ಬಂದ ವಿರಾಟ್ ಕೊಹ್ಲಿ
ಟಿ20 ವಿಶ್ವ ಕಪ್ನಲ್ಲೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು. ಪಾಕಿಸ್ತಾನ ವಿರುದ್ಧ ಅಜೇಯ 82 ರನ್ ಬಾರಿಸುವ ಮೂಲಕ ಸ್ಮರಣೀಯ ಇನಿಂಗ್ಸ್ ಕಟ್ಟಿದ್ದರು.