Site icon Vistara News

INDvsBAN | ಏಳು ವರ್ಷದ ಬಳಿಕ ಬಾಂಗ್ಲಾದೇಶ ತಂಡಕ್ಕೆ ಮಂಡಿಯೂರಿದ ಭಾರತ ತಂಡ

INDvsBAN

ಮೀರ್‌ಪುರ್‌ : ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ೧ ವಿಕೆಟ್‌ ಸೋಲಿಗೆ ಒಳಗಾಗಿರುವ ಭಾರತ ತಂಡ ಹಲವು ಕಳಪೆ ದಾಖಲೆಗಳನ್ನು ತನ್ನೆಸರಿಗೆ ಬರೆದುಕೊಂಡಿತು. ಮೊದಲಾಗಿ ಭಾರತ ತಂಡ ಏಕ ದಿನ ಪಂದ್ಯದಲ್ಲಿ ಏಳು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಸೋಲು ಕಂಡಿತು. ಈ ಮೂಲಕ ಬಲಿಷ್ಠ ಭಾರತ ತಂಡವನ್ನು ಸೋಲಿಸಿದ ಲಿಟನ್‌ ದಾಸ್ ಪಡೆದ ವಿಜಯೋತ್ಸವ ಆಚರಿಸಿತು.

ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಬ್ಯಾಟಿಂಗ್‌ಗೆ ಆಹ್ವಾನ ಪಡೆದು ೪೧.೨ ಓವರ್‌ಗಳಲ್ಲಿ ೧೮೬ ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದು ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಪೇರಿಸಿದ ಎರಡನೇ ಕನಿಷ್ಠ ಮೊತ್ತವಾಗಿದೆ. ೨೦೧೪ರಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ೧೦೫ ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

ಭಾರತ ನೀಡಿದ್ದ ಗುರಿಯನ್ನು ಬಾಂಗ್ಲಾದೇಶ ತಂಡ ೪೬ ಓವರ್‌ಗಳಲ್ಲಿ ಚೇಸ್ ಮಾಡಿತು. ಈ ಮೂಲಕ ಭಾರತ ತಂಡದ ವಿರುದ್ಧ ಆರನೇ ಒಡಿಐ ವಿಜಯ ಸಾಧಿಸಿತು. ಬಾಂಗ್ಲಾದೇಶ ತಂಡಕ್ಕೆ ೩೭ ಪಂದ್ಯಗಳಲ್ಲಿ ಲಭಿಸಿದ ಆರನೇ ಜಯವಾಗಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಕೆ. ಎಲ್‌ ರಾಹುಲ್‌ (೭೩) ಅವರ ಏಕಾಂಗಿ ಹೋರಾಟದ ಮೂಲಕ ಸಾಧಾರಣ ಮೊತ್ತ ಪೇರಿಸಿತು. ಆದರೆ, ಕೊನೇ ವಿಕೆಟ್‌ಗೆ ೫೧ ರನ್‌ ಬಿಟ್ಟುಕೊಡುವ ಮೂಲಕ ಸೋಲಿಗೆ ಒಳಗಾಯಿತು.

ಇದನ್ನೂ ಓದಿ ವ| INDvsBAN | ಗೆಲುವಿನ ಹೊಸ್ತಿಲಲ್ಲಿ ಎಡವಿದ ಭಾರತ, ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 1 ವಿಕೆಟ್‌ ವೀರೋಚಿತ ಸೋಲು

Exit mobile version