Site icon Vistara News

IPL 2024 : ಸಿಎಸ್​ಕೆ ತಂಡದ ಇನ್ನೊಬ್ಬ ಆಲ್​ರೌಂಡರ್​ ಗೆ ಗಾಯ; ಟೂರ್ನಿಗೆ ಮೊದಲೇ ಆಘಾತ

Rachin Ravindra

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಪ್ರಾರಂಭವಾಗುವ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್​​ ಗಾಯದ ಪಟ್ಟಿ ಬೆಳೆಯುತ್ತಿದೆ. ಶಿವಂ ದುಬೆ ನಂತರ, ಅವರ ಸ್ಟಾರ್ ಆಲ್​ರೌಂಡರ್​​ ರಚಿನ್ ರವೀಂದ್ರ ಮೊಣಕಾಲಿಗೆ ಗಾಯವಾಗಿದ್ದು, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ 20 ಪಂದ್ಯದಿಂದ ಹೊರಗುಳಿದಿದ್ದಾರೆ. ಬ್ಲ್ಯಾಕ್ ಕ್ಯಾಪ್ಸ್​​ನ ಅಧಿಕೃತ ಪೇಜ್​​ನಲ್ಲಿ ಆಟಗಾರನ ಆರೋಗ್ಯ ಸ್ಥಿತಿಯ ಬಗ್ಗೆ ಅಪ್​ಡೇಟ್​ ಮಾಡಲಾಗಿದೆ. ಐಪಿಎಲ್​ ವೇಳಾಪಟ್ಟಿ ಘೋಷಣೆಯಾಗಿದ್ದು ಅವರ ಲಭ್ಯತೆ ಬಗ್ಗೆ ಖಾತರಿ ಇಲ್ಲದಂತಾಗಿದೆ.

“ವೆಲ್ಲಿಂಗ್ಟನ್​ನಲ್ಲಿ ನಡೆದ ಮೊದಲ ಪಂದ್ಯದ ನಂತರ ಎಡ ಮೊಣಕಾಲಿನ ನೋವಿನಿಂದಾಗಿ ರಚಿನ್ ರವೀಂದ್ರ ಈಡನ್ ಪಾರ್ಕ್​ನಲ್ಲಿ ಇಂದು ರಾತ್ರಿ ನಡೆಯಲಿರುವ 2 ನೇ ಕೆಎಫ್​ಸಿ ಟಿ 20 ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಹೇಳಿದ್ದಾರೆ.

ಮೂರನೇ ಟಿ 20 ಐಗೆ ಅವರ ಲಭ್ಯತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಮುಂದಿನ ದಿನಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುವುದು ಮತ್ತು ಮೇಲ್ವಿಚಾರಣೆ ಮಾಡಲಾಗುವುದು” ಎಂದು ಮಾಹಿತಿ ನೀಡಲಾಗಿದೆ.

ಇನ್ನು ಒಂದು ತಿಂಗಳಲ್ಲಿ ಐಪಿಎಲ್ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ಸ್​ಗೆ ಇದು ದೊಡ್ಡ ಹೊಡೆತವಾಗಲಿದೆ. ಹರಾಜಿನಲ್ಲಿನ ಸಿಎಸ್ಕೆ ಅವರನ್ನು 1.8 ಕೋಟಿ ರೂ.ಗೆ ಖರೀದಿಸಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ರಚಿನ್ ಆಟದ ಎರಡೂ ವಿಭಾಗಗಳಿಗೆ ಕೊಡುಗೆ ನೀಡಬಹುದು ಮತ್ತು ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ : IPL 2024 : ಆರ್​ಸಿಬಿ ತಂಡದ ವೇಳಾಪಟ್ಟಿ, ಪಂದ್ಯದ ವಿವರಗಳು ಇಲ್ಲಿವೆ

ರಚಿನ್​ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ 20 ಐ ನಲ್ಲಿ ಅರ್ಧಶತಕ ಗಳಿಸಿದ್ದಾರೆ. ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಪ್ರಭಾವಶಾಲಿ ಆಟವನ್ನು ನೀಡಿದ್ದರು. ತಮ್ಮ ಬೌಲಿಂಗ್​ ಕೌಶಲದ ಮೂಲಕ ಅವರು ಐಪಿಎಲ್​​ನಲ್ಲಿ ಚೆನ್ನೈನ ನಿಧಾನಗತಿಯ ಮತ್ತು ತಿರುಗುವ ಪಿಚ್​ನಲ್ಲಿ ಕೊಡುಗೆ ನೀಡುವ ನಿರೀಕ್ಷೆಯಿದೆ.

ದುಬೆ 8 ವಾರಗಳ ಕಾಲ ತಂಡದಿಂ ಹೊರಗುಳಿದಿದ್ದಾರೆ. ಐಪಿಎಲ್ 2024ರ ಕೆಲವು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಅವರ ಬದಲಿ ಆಟಗಾರನಾಗಿ ಸರ್ಫರಾಜ್ ಖಾನ್ ಅವರನ್ನು ಸಹಿ ಮಾಡಲು ಚಾಂಪಿಯನ್ ತಂಡ ಯೋಜನೆ ರೂಪಿಸುತ್ತಿದೆ. ಹಿಂದಿನ ಋತುವಿನಲ್ಲಿ ದುಬೆ 400 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಸಿಎಸ್ಕೆ ಪ್ರಶಸ್ತಿ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದ್ದರು.

Exit mobile version