Site icon Vistara News

ICC World Cup 2023 : ಅಹಮದಾಬಾದ್​ನಲ್ಲಿ ಹೋಟೆಲ್​ ರೂಮ್​ ಬೆಲೆ 1 ಲಕ್ಷಕ್ಕೆ ಏರಿಕೆ?

Narendra Modi staduim

ಅಹ್ಮದಾಬಾದ್: ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದ ಬಳಿಕ ಕ್ರಿಕೆಟ್ ಅಭಿಮಾನಿಗಳು ನವೆಂಬರ್ 19ರಂದು ಅಹ್ಮದಾಬಾದ್​ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023ರ (ICC World Cup 2023) ಫೈನಲ್ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅಹ್ಮದಾಬಾದ್​ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಫೈನಲ್​ನಲ್ಲಿ ಭಾರತವನ್ನು ಹುರಿದುಂಬಿಸಲು ಹೆಚ್ಚಿನ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಪ್ರಯಾಣಕ್ಕೆ ಯೋಜಿಸುತ್ತಿದ್ದಾರೆ. ಹೀಗಾಗಿ ಹೋಟೆಲ್ ದರಗಳು ಮತ್ತು ಪ್ರಯಾಣದ ಟಿಕೆಟ್​ ದರಗಳಲ್ಲಿ ಅಸಾಧಾರಣ ಏರಿಕೆಯಾಗಿದೆ.

ಫೈನಲ್​​ಗೆ ಕೆಲವೇ ದಿನಗಳು ಇರುವುದರಿಂದ, ಸಾಮಾನ್ಯ ಹೋಟೆಲ್​ ಕೊಣೆಗಳ ಬೆಲೆ ಸರಾಸರಿ ವೆಚ್ಚವು ಒಂದು ರಾತ್ರಿಗೆ ಸುಮಾರು 10,000 ರೂಪಾಯಿಯಾಗಿದೆ. ಅಹ್ಮದಾಬಾದ್​ನಲ್ಲಿ 4​ ಸ್ಟಾರ್ ಮತ್ತು ಫೈವ್​ಸ್ಟಾರ್​ ಹೋಟೆಲ್​ನಲ್ಲಿ ಒಂದು ರಾತ್ರಿ ಕಳೆಯಲು 1 ಲಕ್ಷ ರೂಪಾಯಿ ನಿಗದಿಯಾಗಿದೆ.

ಹಠಾತ್ ಏರಿಕೆ

ಪಂದ್ಯ ಘೋಷಣೆಯಾದಾಗಿನಿಂದ, ನಗರದಲ್ಲಿ ವಸತಿ ಸೌಕರ್ಯಗಳ ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಇದಲ್ಲದೆ, ವಿಶ್ವಕಪ್ ಫೈನಲ್ ದಿನಾಂಕಗಳಿಗೆ ಅಹಮದಾಬಾದ್​ಗೆ ಹೋಗುವ ವಿಮಾನ ಟಿಕೆಟ್​ಗಳ ಬೆಲೆಯೂ 100 ಪಟ್ಟು ಹೆಚ್ಚಾಗಿದೆ.

ಐಸಿಸಿ ವಿಶ್ವಕಪ್ 2023 ರ ಫೈನಲ್​​ನಲ್ಲಿ ಭಾರತವು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಮೊದಲೇ ಸುಮಾರು ಒಂದು ತಿಂಗಳ ಹಿಂದೆ ಈ ಪಂದ್ಯದಲ್ಲಿ ತಮ್ಮ ಟಿಕೆಟ್​ಗಳನ್ನು ಖಾತರಿಪಡಿಸಿಕೊಳ್ಳುವುದು ಭಾರತೀಯರಿಗೆ ಸವಾಲಿನ ಕೆಲಸವಾಯಿತು. ಭಾರತ ಪಾಕ್​ ಪಂದ್ಯ ನಡೆದ ಅಕ್ಟೋಬರ್​ನಲ್ಲಿ ಹೋಟೆಲ್​​ಗಳ ಬೆಲೆಯು ಒಂದು ರಾತ್ರಿಗೆ 24,000 ರೂ.ಗಳಿಂದ ರಾತ್ರಿಗೆ 2,15,000 ರೂ.ಗೆ ಏರಿಕೆಯಾಗಿತ್ತು.

ಒಂದು ರಾತ್ರಿಗೆ 10 ಸಾವಿರ

ಅಹಮದಾಬಾದ್​ನಲ್ಲಿ ಸಾಮಾನ್ಯ ಹೋಟೆಲ್ ಕೊಠಡಿಯನ್ನು ಕಾಯ್ದಿರಿಸಲು, ಒಬ್ಬ ವ್ಯಕ್ತಿಯು ಒಂದು ರಾತ್ರಿಗೆ ಸುಮಾರು 10,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಫೋರ್​ ಮತ್ತು 5 ಸ್ಟಾರ್ ಹೋಟೆಲ್​ಗೆ ಜನರು ನಗರದಲ್ಲಿ ಒಂದು ರಾತ್ರಿಗೆ 1 ಲಕ್ಷ ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ ಎಂದು ವರದಿ ಮಾಡಲಾಗಿದೆ.

ಇದನ್ನೂ ಓದಿ : MS Dhoni : ಅಜ್ಜಿ ಮನೆಗೆ ಹೋದ ಧೋನಿ ಸಿಕ್ಕಿತು ವಿಶೇಷ ಸ್ವಾಗತ, ಯಾವ ಊರು ಅದು?

ಅಹಮದಾಬಾದ್​ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಹೋಟೆಲ್​ಗಳಲ್ಲಿ ಬೆಲೆ ಏರಿಕೆ ಮತ್ತು ಬೆಲೆಗಳು ಕಂಡುಬಂದವು. ಆ ಸಮಯದಲ್ಲಿ, ಹೋಟೆಲ್​ಗಳು ಮತ್ತು ಟಿಕೆಟ್ ಬೆಲೆಗಳು ಗಮನಾರ್ಹವಾಗಿ ಏರಿತು. ಬುಕ್​ಮೈ ಶೋ, ಮೇಕ್ ಮೈಟ್ರಿಪ್ ಮತ್ತು ಅಗೋಡಾದಂತಹ ಹೋಟೆಲ್ ಬುಕಿಂಗ್ ಪ್ಲಾಟ್ ಫಾರ್ಮ್ ಗಳಲ್ಲಿ ಹೋಟೆಲ್ ದರದಲ್ಲಿ ಭಾರಿ ಹೆಚ್ಚಳ ಕಂಡುಬಂದಿವೆ ಎಂದು ವರದಿ ಹೇಳಿದೆ.

ಹಾಟ್​​ಸ್ಟಾರ್​ನಲ್ಲಿ ದಾಖಲೆ ಬರೆದ ಭಾರತ-ನ್ಯೂಜಿಲ್ಯಾಂಡ್​ ಸೆಮಿ ಪಂದ್ಯ

ಹಾಟ್​​ಸ್ಟಾರ್​ನಲ್ಲಿ ದಾಖಲೆ ಬರೆದ ಭಾರತ-ನ್ಯೂಜಿಲ್ಯಾಂಡ್​ ಸೆಮಿ ಪಂದ್ಯಮುಂಬಯಿ: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಬುಧವಾರ ನಡೆದ ವಿಶ್ವಕಪ್​ನ ಸೆಮಿಫೈನಲ್​ ಪಂದ್ಯ ಡಿಜಿಟಲ್​ ಲೋಕದಲ್ಲಿ ದಾಖಲೆಯೊಂದನ್ನು ಬರೆದಿದೆ. ಡಿಸ್ನಿ ಪ್ಲಸ್​ ಹಾಟ್​​ಸ್ಟಾರ್​ನಲ್ಲಿ(Disney+ Hotstar) ಈ ಪಂದ್ಯವನ್ನು ಏಕಕಾಲಕ್ಕೆ 5.5 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ.

ನ್ಯೂಜಿಲ್ಯಾಂಡ್​ ತಂಡದ​ ಬ್ಯಾಟಿಂಗ್​ ಸರದಿಯ ಮಧ್ಯಮ ಹಂತದಲ್ಲಿ ಈ ದಾಖಲೆ ನಿರ್ಮಾಣವಾಯಿತು. ಇದಕ್ಕೂ ಮುನ್ನ ಭಾರತದ ಅಂತಿಮ ಹಂತದ ಬ್ಯಾಟಿಂಗ್​ ಅವಧಿಯಲ್ಲಿ 5.1 ಮಂದಿ ವೀಕ್ಷಿಸಿದ್ದು ದಾಖಲೆ ಎನಿಸಿತ್ತು. ಬಳಿಕ ಪಂದ್ಯ ರೋಚಕವಾಗಿ ಸಾಗಿದ ಪರಿಣಾಮ ವೀಕ್ಷಕರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಾ ಸಾಗಿತು.

ಅಕ್ಟೋಬರ್​ 14ರಂದು ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಏಕಕಾಲಕ್ಕೆ 3.5 ಕೋಟಿ ಮಂದಿ ವೀಕ್ಷಿಸಿದ್ದರು. ಆದರೆ ಆ ಬಳಿಕ ನಡೆದ ನ್ಯೂಜಿಲ್ಯಾಂಡ್​ ನಡುವಣ ಲೀಗ್​ ಪಂದ್ಯ 4.3ಕೋಟಿ ವೀಕ್ಷಿಸಿ ದಾಖಲೆ ನಿಮಾರ್ಣವಾಗಿತ್ತು. ಆದರೆ ಇದೀಗ ಈ ದಾಖಲೆಯೂ ಪತನಗೊಂಡಿದೆ. ಫೈನಲ್​ ಪಂದ್ಯದ ವೀಕ್ಷಣೆ ಇನ್ನೂ ಹೆಚ್ಚು ಕೋಟಿ ವೀಕ್ಷಣೆ ಕಾಣುವ ನಿರೀಕ್ಷೆ ಇದೆ.

Exit mobile version