Site icon Vistara News

ICC World Cup 2023 : ಸಮಾರೋಪಕ್ಕೆ ಅಹಮದಾಬಾದ್ ಸಜ್ಜು, ಏರ್ ಶೋ ಫಿಕ್ಸ್​?

World Cup staduim

ಅಹಮದಾಬಾದ್​: ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಸಮಾರೋಪ ಸಮಾರಂಭದ ಬಗ್ಗೆ ಬಿಸಿಸಿಐ ಮತ್ತು ಐಸಿಸಿ ಮೌನ ವಹಿಸಿವೆ. ಆದರೆ 2023 ರ ವಿಶ್ವಕಪ್ ಮುಕ್ತಾಯ ಸಮಾರಂಭಕ್ಕಾಗಿ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಸೋಷಿಯಲ್ ಮೀಡಿಯಾ ಬಝ್ ಮತ್ತು ವೀಡಿಯೊಗಳ ಪ್ರಕಾರ, ಬಾಲಿವುಡ್ ತಾರೆಯರು ಭಾಗವಹಿಸಲಿದ್ದು, ಭಾರತೀಯ ವಾಯುಪಡೆಯ (ಐಎಎಫ್) ಸೂರ್ಯ ಕಿರಣ್ ತಂಡವು ಪಂದ್ಯಕ್ಕೆ ಮುಂಚಿತವಾಗಿ ಸ್ಥಳದಲ್ಲಿ ಏರ್ ಶೋ ನಡೆಸಲು ಸಜ್ಜಾಗಿದೆ.

ನವೆಂಬರ್ 19 ರಂದು ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು 10 ನಿಮಿಷಗಳ ಏರ್ ಶೋ ನಡೆಸಲಿದೆ ಎಂದು ಗುಜರಾತ್​​ನ ರಕ್ಷಣಾ ಪಿಆರ್​ಒ ಗುರುವಾರ ಪ್ರಕಟಿಸಿದ್ದಾರೆ. ಏರ್ ಶೋನ ಪೂರ್ವಾಭ್ಯಾಸ ಶುಕ್ರವಾರ ಮತ್ತು ಶನಿವಾರ ನಡೆಯಲಿದೆ ಎಂದು ಪಿಆ್ಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ನೃತ್ಯ ಗುಂಪುಗಳು ಭಾನುವಾರ ಒಂದು ರೀತಿಯ ಸಮಾರಂಭಕ್ಕಾಗಿ ಕ್ರೀಡಾಂಗಣದ ಆವರಣದಲ್ಲಿ ಪೂರ್ವಾಭ್ಯಾಸ ನಡೆಸುತ್ತಿವೆ. ಸೆಮಿಫೈನಲ್​​ನಲ್ಲಿ ನ್ಯೂಜಿಲೆಂಡ್ ತಂಡವನ್ನು 70 ರನ್​ಗಳಿಂದ ಸೋಲಿಸಿದ ಭಾರತ ಫೈನಲ್​ಗೇರಿದೆ. ಇದೇ ವೇಳೆ ಎರಡನೇ ಸೆಮಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ.

ವಿಶ್ವಕಪ್ 2023 ಸಮಾರೋಪ ಸಮಾರಂಭ ನಡೆಯಲಿದೆಯೇ?

ಅಹ್ಮದಾಬಾದ್​ನಲ್ಲಿ ಕ್ರಿಕೆಟ್ ವಿಶ್ವಕಪ್​ನ ಉದ್ಘಾಟನಾ ಸಮಾರಂಭವೂ ಇರಲಿಲ್ಲ. ಬದಲಿಗೆ, ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೊದಲು ಮತ್ತು ಪಂದ್ಯದ ಮಧ್ಯದಲ್ಲಿ ಪ್ರದರ್ಶನ ನಡೆಯಿತು. ವಿಶ್ವಕಪ್ 2023 ರ ಸಮಾರೋಪ ಸಮಾರಂಭದ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ. ಆದರೆ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಲಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ, ಎರಡು ಜೆಟ್​ಗಳು ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ಹಾರುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಇದು ವಿಶ್ವಕಪ್ ಫೈನಲ್ ಗೆ ಏರ್ ಶೋನ ಸೂಚನೆಯಾಗಿದೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 70 ರನ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಆಡಿರುವ 10 ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಭಾರತ ಟೂರ್ನಿಯಲ್ಲಿ ಅಜೇಯವಾಗಿದೆ. ಈಗ, ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ಅವರಿಗೆ ಇನ್ನೂ ಒಂದು ಜಯದ ಅಗತ್ಯವಿದೆ.

ಫೈನಲ್ ಮ್ಯಾಚ್ ನೋಡಲು ಮೋದಿ ಬರ್ತಾರಾ?

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19ರಂದು ನಡೆಯಲಿರುವ ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗುವ ನಿರೀಕ್ಷೆಯಿದೆ. ಐಸಿಸಿ ವಿಶ್ವಕಪ್ 2023 ರ ಫೈನಲ್ ಪಂದ್ಯಕ್ಕೆ ಪ್ರಧಾನಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದ್ದು, ರೋಚಕ ಪಂದ್ಯವನ್ನು ಪಂದ್ಯವನ್ನು ವೀಕ್ಷಿಸಲು 1.30 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ. ಈ ವೇಳೆ ಹಲವಾರು ಗಣ್ಯರು ಮೈದಾನಕ್ಕೆ ದಾಪುಗಾಲು ಇಡಲಿದ್ದಾರೆ. ಇವರೆಲ್ಲರ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಎನಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ICC World Cup 2023 : ದಕ್ಷಿಣ ಆಫ್ರಿಕಾ ಔಟ್​; ಭಾರತ- ಆಸ್ಟ್ರೇಲಿಯಾ ಫೈನಲ್ ಫೈಟ್​

ಪ್ರಧಾನಿ ಮೋದಿ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದು, ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದ ನಂತರ ಮೆನ್ ಇನ್ ಬ್ಲೂ ತಂಡವನ್ನು ಅಭಿನಂದಿಸಿದ್ದರು. “ಇಂದಿನ ಸೆಮಿಫೈನಲ್ ಪಂದ್ಯವು ವೈಯಕ್ತಿಕ ಪ್ರದರ್ಶನದಿಂದಾಗಿ ಇನ್ನಷ್ಟು ವಿಶೇಷವಾಗಿದೆ. ಶಮಿಗೆ ಧನ್ಯವಾದಗಳು. ಈ ಪಂದ್ಯದ ಮೂಲಕ ಕ್ರಿಕೆಟ್ ಪ್ರೇಮಿಗಳು ಮುಂದಿನ ಪೀಳಿಗೆಗೂ ಈ ಆವೃತ್ತಿಯನ್ನು ಸ್ಮರಿಸಿಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದ್ದರು.

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ವೀಕ್ಷಿಸಿದ್ದರು. ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಇಬ್ಬರೂ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಎರಡೂ ತಂಡಗಳ ಆಟಗಾರರನ್ನು ಭೇಟಿಯಾಗಿದ್ದರು.

Exit mobile version