ಡೇಗು(ದಕ್ಷಿಣ ಕೊರಿಯಾ): ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ (Airgun Championship) ಭಾರತದ ಮೆಹುಲಿ ಘೋಷ್ ಮತ್ತು ತಿಲೋತ್ತಮಾ ಸೇನ್ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಕೊರಿಯಾದ ಡೇಗುನಲ್ಲಿ ಶನಿವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದ ಫೈನಲ್‌ನಲ್ಲಿ ಮೆಹುಲಿ 16-12 ಅಂಕಗಳಿಂದ ಆತಿಥೇಯ ನಾಡಿನ ಕೊರಿಯಾದ ಚೊ ಯುನ್‌ಯಂಗ್ ಅವರನ್ನು ಪರಾಭವಗೊಳಿಸಿ ಚಿನ್ನಕ್ಕೆ ಮುತ್ತಿಕ್ಕಿದರು. ಕಜಕಿಸ್ತಾನದ ಲೇ ಅಲೆಕ್ಸಾಂಡ್ರಾ ಕಂಚಿನ ಪದಕ್ಕೆ ತೃಪ್ತಿಪಟ್ಟರು.
ಜೂನಿಯರ್ ವಿಭಾಗದಲ್ಲಿ ತಿಲೋತ್ತಮಾಗೆ ಚಿನ್ನ ನ್ಯಾನ್ಸಿಗೆ ಬೆಳ್ಳಿ
ಮಹಿಳೆಯರ 10 ಮೀ. ಏರ್ ರೈಫಲ್ ಜೂನಿಯರ್ ವಿಭಾಗದ ಫೈನಲ್‌ನಲ್ಲಿ ತಿಲೋತ್ತಮಾ ಸೇನ್ ಭಾರತದವರೇ ಆದ ನ್ಯಾನ್ಸಿ ವಿರುದ್ಧ 17-12ರಿಂದ ನ್ಯಾನ್ಸಿ ಅವರಿಗೆ ಸೋಲುಣಿಸಿ ಚಿನ್ನದ ಪದಕ ಗಳಿಸಿದರೆ ನ್ಯಾನ್ಸಿ ಬೆಳ್ಳಿ ಪದಕ ಜಯಿಸಿದರು. ಕಂಚಿನ ಪದಕ ಜಪಾನ್‌ನ ನೋಬಟಾ ಮಿಸಾಕಿ ಅವರ ಪಾಲಾಯಿತು.
ಇದನ್ನೂ ಓದಿ | IND VS ENG | ಭಾರತ ಸೋಲಿನ ಬಗೆಗಿನ ಪಾಕ್ ಪ್ರಧಾನಿಯ ಟ್ವೀಟ್ ನನಗೆ ತಿಳಿದಿಲ್ಲ; ಬಾಬರ್ ಅಜಂ