ಕೊಯಮತ್ತೂರು : ಪಶ್ಚಿಮ ವಲಯ ತಂಡದ ನಾಯಕ ಅಜಿಂಕ್ಯ ರಹಾನೆ, ಎದುರಾಳಿ ತಂಡದ ಆಟಗಾರನನ್ನು ಸತತವಾಗಿ ನಿಂದಿಸಿದ ತನ್ನ ತಂಡದ ಆಟಗಾರನನ್ನೇ ಮೈದಾನದಿಂದ ಹೊರಕ್ಕೆ ದಬ್ಬಿದ ಪ್ರಸಂಗ ನಡೆದಿದೆ. ದುಲೀಪ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ರಹಾನೆ ನಡೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತಗೊಂಡಿವೆ.
ಪಂದ್ಯದ ಕೊನೇ ದಿನವಾದ ಭಾನುವಾರ ಈ ಪ್ರಸಂಗ ನಡೆದಿದ್ದು, ಮುಂಬಯಿಯ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್, ಕೀಟಲೆ ಮಾಡಿ ಹೊರಕ್ಕೆ ದಬ್ಬಿಸಿಕೊಂಡ ಆಟಗಾರ. ದಕ್ಷಿಣ ವಲಯ ತಂಡದ ಆಟಗಾರ ರವಿ ತೇಜಾ ಅವರನ್ನು ಯಶಸ್ವಿ ಜೈಸ್ವಾಲ್ ಸತತವಾಗಿ ಸ್ಲೆಡ್ಜಿಂಗ್ ಮಾಡಿದ್ದರು. ಈ ಬಗ್ಗೆ ರವಿತೇಜಾ ಅಂಪೈರ್‌ಗೆ ದೂರು ನೀಡಿದ್ದರು. ತಕ್ಷಣ ರಹಾನೆ ಅವರು ಜೈಸ್ವಾಲ್ ಬಳಿ ತೆರಳಿ ನಿಂದನೆ ಮುಂದುವರಿಸದಂತೆ ಸೂಚನೆ ಕೊಟ್ಟರು. ಅಂಪೈರ್ ಕೂಡ ಮೂರು ಬಾರಿ ಎಚ್ಚರಿಕೆ ಕೊಟ್ಟಿದ್ದರು. ಆದಾಗ್ಯೂ ಜೈಸ್ವಾಲ್ ಕೆಣಕುವುದನ್ನು ಮುಂದುವರಿಸಿದ್ದರು. ತಕ್ಷಣ ಸ್ಥಳಕ್ಕೆ ಬಂದ ರಹಾನೆ, ಯಶಸ್ವಿ ಜೈಸ್ವಾಲ್ ಅವರನ್ನು ಸ್ಥಳದಿಂದ ಮೈದಾನದಿಂದ ಹೊರಕ್ಕೆ ಕಳುಹಿಸಿದರು.
ಪಂದ್ಯದಲ್ಲಿ ಪಶ್ಚಿಮ ವಲಯ ತಂಡ ೨೯೪ ರನ್‌ಗಳ ಬೃಹತ್ ಅಂತರದ ಜಯದೊಂದಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಯಶಸ್ವಿ ಜೈಸ್ವಾಲ್ (೨೬೫) ದ್ವಿಶತಕ ಬಾರಿಸುವ ಮೂಲಕ ತಂಡದ ಗೆಲವಿನ ರೂವಾರಿ ಎನಿಸಿಕೋಂಡರು.
ಇದನ್ನೂ ಓದಿ | Duleep Trophy | ದಕ್ಷಿಣ ವಲಯಕ್ಕೆ294 ರನ್ ಸೋಲು, ರಹಾನೆ ನೇತೃತ್ವದ ಪಶ್ಚಿಮ ವಲಯ ತಂಡ ಚಾಂಪಿಯನ್