ಮುಂಬಯಿ: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಕ್ರಿಕೆಟ್ನಿಂದ ಸ್ವಲ್ಪ ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರು ಮುಂಬರುವ ಏಕ ದಿನ ಕಪ್ ಗಾಗಿ ಲೀಸೆಸ್ಟರ್ ಶೈರ್ ತಂಡವನ್ನು ಸೇರಿಕೊಳ್ಳುತ್ತಿಲ್ಲ. ಅಜಿಂಕ್ಯ ರಹಾನೆ ಪೂರ್ವ ಯೋಜನೆಯಂತೆ ಜೂನ್ನಲ್ಲಿ ಲಿಸೆಸ್ಟರ್ ತಂಡ ಸೇರಬೇಕಿತ್ತು. ಆದರೆ ಅವರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಅಲ್ಲದೆ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಆಡಿದ್ದರು. ಹೀಗಾಗಿ ಇಂಗ್ಲೆಂಡ್ಗೆ ಹೋಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಅವರು ಸಂಪೂರ್ಣವಾಗಿ ಅದರಿಂದ ಮುಕ್ತಿ ಪಡೆದುಕೊಂಡಿದ್ದಾರೆ.
ಈ ಹಿಂದೆಯೇ ಭಾರತೀಯ ಆಟಗಾರ ತಂಡ ಸೇರಬೇಕಾಗಿತ್ತು. ಆದರೆ ಅವರಿಗೆ ರಾಷ್ಟ್ರಿಯ ತಂಡದ ಕೆಲಸವಿದ್ದ ಕಾರಣ ವೇಳಾಪಟ್ಟಿಗೆ ಪೂರಕವಾಗಿ ತಂಡ ಸೇರಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ35 ವರ್ಷದ ಆಟಗಾರ ಈಗ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಕ್ರಿಕೆಟ್ನಿಂದ ವಿರಾಮ ತೆಗೆದುಕೊಳ್ಳುವ ಬಯಸಿದ್ದಾರೆ ” ಎಂದು ಲೀಸೆಸ್ಟರ್ಶೈರ್ ಹೇಳಿಕೆ ನೀಡಿದೆ.
ಅಜಿಂಕ್ಯ ರಹಾನೆ ಬದಲಿಗೆ ಕೌಂಟಿ ಚಾಂಪಿಯನ್ಶಿಪ್ ಮತ್ತು ಟಿ 20 ಬ್ಲಾಸ್ಟ್ ಟೂರ್ನಿಗಾಗಿ ಲಿಸೆಸ್ಟರ್ಶೈರ್ ತಂಡವು ಪೀಟರ್ ಹ್ಯಾಂಡ್ಸ್ಕಾಂಡ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಇದನ್ನೂ ಓದಿ : ind vs wi : 2ನೇ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇರಲಿಲ್ಲ ಯಾಕೆ?
ಲೀಸೆಸ್ಟರ್ಶೈರ್ ಕ್ರಿಕೆಟ್ ನಿರ್ದೇಶಕ ಕ್ಲೌಡ್ ಹೆಂಡರ್ಸನ್ ಈ ಕುರಿತು ಮಾತನಾಡಿ, ಮೊದಲನೆಯದಾಗಿ, ಅಜಿಂಕ್ಯ ರಹಾನೆ ಅವರು ಇರುವ ಪರಿಸ್ಥಿತಿಯನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಅವರು ಇತ್ತೀಚಿನ ಕೆಲವು ತಿಂಗಳಲ್ಲಿ ಭಾರತದಲ್ಲಿ ಮತ್ತು ರಾಷ್ಟ್ರೀಯ ತಂಡದೊಂದಿಗೆ ಪ್ರಯಾಣಿಸುವ ಬಿಡುವಿಲ್ಲದ ವೇಳಾಪಟ್ಟಿ ಎದುರಿಸಿದ್ದರು. ಚೇತರಿಸಿಕೊಳ್ಳಲು ಮತ್ತು ಅವರ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುವ ಅವರ ಆಶಯಗಳನ್ನು ನಾವು ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.
ನಾವು ಅಜಿಂಕ್ಯ ರಹಾನೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಕ್ರಿಟ್ನಲ ಪರಿಸ್ಥಿತಿಗಳು ಹೇಗೆ ತ್ವರಿತವಾಗಿ ಬದಲಾಗಬಹುದು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಅವರು ನಮಗೆ ಮಾಹಿತಿ ನೀಡಿದ್ದ ತುಂಬಾ ಕೃತಜ್ಞರಾಗಿದ್ದೇವೆ. ಇನ್ನೂ ಲೀಸೆಸ್ಟರ್ಶೈಟ್ ಪರ ಆಡುವ ಭರವಸೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಪೀಟರ್ ಹ್ಯಾಂಡ್ಸ್ಕಾಂಬ್ ತಂಡದೊಂದಿಗೆ ಉಳಿದಿರುವುದಕ್ಕೆ ನಮಗೆ ಸಂತೋಷವಾಗಿದೆ. ನಾವು ಈ ರೀತಿಯ ಪರಿಸ್ಥಿತಿಗೆ ಸಿದ್ಧರಾಗಿದ್ದೆವು. ಅವರ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಜೊತೆಗೆ ಅವರು ಬಲವಾದ ನಾಯಕತ್ವದ ಶೈಲಿಯನ್ನು ಸಹ ಹೊಂದಿದ್ದಾರೆ. ಇದು ತಂಡದ ಡ್ರೆಸಿಂಗ್ ರೂಮ್ನಲ್ಲಿ ಸೇರುವ ಇತರ ಆಟಗಾರರಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.