Site icon Vistara News

Team India : ಮಾಜಿ ವೇಗದ ಬೌಲರ್​ಗೆ​ ಭಾರತ ತಂಡದ ಆಯ್ಕೆ ಜವಾಬ್ದಾರಿ ವಹಿಸಲಿದೆಯಾ ಬಿಸಿಸಿಐ?

Ajit agarkar

ಬೆಂಗಳೂರು: ಕಳೆದ ಎರಡು ಅವಧಿಗಳಲ್ಲಿ ಭಾರತ ತಂಡದ (Team India) ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರರ ಹುದ್ದೆಗೆ ಹೆಸರುವಾಸಿ ಕ್ರಿಕೆಟರ್​ಗಳನ್ನು ನೇಮಕ ಮಾಡಲು ಬಿಸಿಸಿಐ ವಿಫಲವಾಗಿತ್ತು. ಆದರೆ ಈ ಸರ್ತಿ ಹಳೆ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತಿದೆ ಬಿಸಿಸಿಐ. ಅದರ ಪ್ರಕಾರ ಇತ್ತೀಚಿನ ಕೆಲವು ದಿನಗಳ ಹಿಂದೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರ ಹುದ್ದೆಗೆ ಅರ್ಜಿ ಕರೆದಿತ್ತು. ಅಂತೆಯೇ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅವರನ್ನು ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡಲು ಮುಂದಾಗಿದೆ ಎಂಬುದಾಗಿ ವರದಿಯಾಗಿದೆ.

ಭಾರತ ತಂಡದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಬಿಸಿಸಿಐ ಆಯ್ಕೆ ಸಮಿತಿಯ ಹೊಸ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಅಗರ್ಕರ್ ಕಳೆದ ಎರಡು ಬಾರಿ ಈ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದರು. ಆದಾಗ್ಯೂ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಬಿಸಿಸಿಐ ಅವರನ್ನೇ ನೇಮಕ ಮಾಡಲು ಮುಂದಾಗಿದೆ. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಸಿಬ್ಬಂದಿ ತಂಡದಲ್ಲಿದ್ದ ಅವರು ಮುಂದುವರಿಯು ಸಾಧ್ಯತೆಗಳು ಕಡಿಮೆ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ಮೇಲೆ ಮತ್ತೆ ಕಣ್ಣಿದ್ದರು ಅವರು. ಬಿಸಿಸಿಐ ಕೂಡ ಅವರೇ ನಮ್ಮ ನೆಚ್ಚಿನ ಆಯ್ಕೆ ಎಂಬ ಮನೋಸ್ಥಿತಿಯಲ್ಲಿದೆ. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಜುಲೈ 1 ರಂದು (ಶನಿವಾರ) ಸಂದರ್ಶನಗಳನ್ನು ಪ್ರಾರಂಭಿಸಲಿದೆ. ಬಂದಿರು ಅರ್ಜಿಯ ಪ್ರಕಾರ ಅಜಿತ್ ಅವರಿಗೆ ಹೆಚ್ಚಿನ ಅವಕಾಶಗಳಿವೆ.

26 ಟೆಸ್ಟ್, 191 ಏಕದಿನ ಮತ್ತು 4 ಟಿ 20 ಪಂದ್ಯಗಳನ್ನು ಆಡಿರುವ ಅವರು ಅತ್ಯಂತ ಅನುಭವಿ ಅಭ್ಯರ್ಥಿಯಾಗಿದ್ದಾರೆ ಅಜಿತ್ ಅಗರ್ಕರ್​. ಅಗರ್ಕರ್ ಅವರು 42 ಐಪಿಎಲ್ ಪಂದ್ಯಗಳನ್ನು ಕೂಡ ಆಡಿದ್ದಾರೆ.

ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ಉನ್ನತ ಮಟ್ಟದ ಟೀಮ್ ಮ್ಯಾನೇಜ್ಮೆಂಟ್​ಗೆ ಬೆಂಬಲವಾಗಿ ನಿಲ್ಲಬಲ್ಲ ಆಯ್ಕೆದಾರರನ್ನು ಆಯ್ಕೆ ಮಾಡುವ ಆದೇಶವನ್ನು ಸಿಎಸಿ ಹೊಂದಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಕ್ರೀಡಾ ವೆಬ್​ಸೈಟ್​ಗೆ ತಿಳಿಸಿದ್ದಾರೆ. ಯಾಕೆಂದರೆ ಅಗರ್ಕರ್ ಅವರನ್ನು ನೇಮಕ ಮಾಡಿದರೆ, ಪಶ್ಚಿಮ ವಲಯದಿಂದ ಇಬ್ಬರು ಆಯ್ಕೆದಾರರು ಸಮಿತಿಯಲ್ಲಿ ಸೇರಿದಂತಾಗುತ್ತದೆ. ಸಲೀಲ್ ಅಂಕೋಲಾ ಈ ವಲಯದ ಇನ್ನೊಬ್ಬರು. ಅದೂ ಅಲ್ಲದೆ ಅಜಿತ್ ಅಗರ್ಕರ್ ಅವರು ಶಿವ ಸುಂದರ್ ದಾಸ್ ಅವರಿಗಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವುದರಿಂದ ಮುಖ್ಯ ಆಯ್ಕೆಗಾರನ ಹುದ್ದೆ ಗ್ಯಾರಂಟಿ.

ಒಂದು ವೇಳೆ ಅಜಿತ್ ಅವರು ನೇಮಕಗೊಂಡರೂ ಅವರಿಗೆ ಸವಾಲು ಹೆಚ್ಚಿದೆ. ಮುಂದಿನ ಏಕ ದಿನ ವಿಶ್ವ ಕಪ್​ಗೆ ಭಾರತ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿ ಅವರ ಮೇಲಿದೆ. ಇಲ್ಲಿ ಸ್ವಲ್ಪ ಎಡವಟ್ಟು ಆದರೂ ಬೈಗುಳ ಗ್ಯಾರಂಟಿ.

ಆಸ್ಟ್ರೇಲಿಯಾ ವಿರುದ್ಧ ಸರಣಿ

2023 ರ ಏಕದಿನ ವಿಶ್ವಕಪ್ (World Cup 2023) ಟ್ರೋಫಿಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬಿಸಿಸಿಐ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅಂತೆಯೇ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಯೋಜಿಸಿದ್ದು ಅದರ ದಿನಾಂಕವನ್ನು ಖಚಿತಪಡಿಸಿದೆ. ಸೆಪ್ಟೆಂಬರ್ 17 ರಂದು ಕೊನೆಗೊಳ್ಳುವ ಏಷ್ಯಾ ಕಪ್ ನಂತರ 50 ಓವರ್​ಗಳು ಟೂರ್ನಿಯ ಬಳಿಕ ಈ ಸರಣಿ ನಡೆಯಲಿದೆ. ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಆಗಸ್ಟ್ ಅಂತ್ಯದ ವೇಳೆಗೆ ಮಾಧ್ಯಮ ಹಕ್ಕುಗಳನ್ನು ಅಂತಿಮಗೊಳಿಸುವುದಾಗಿ ಹೇಳಿದ್ದಾರೆ. ಅಗರ್ಕರ್ ಅವರು ಈ ಸರಣಿಗೂ ತಂಡವನ್ನು ಆಯ್ಕೆ ಮಾಡಬೇಕಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸರಣಿ ವೇಳೆಯೇ ಹೊಸ ನೇರ ಪ್ರಸಾರದ ಹಕ್ಕು ಕೂಡ ವಿತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಹೊರಬರಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಮಾಧ್ಯಮ ಹಕ್ಕುಗಳ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬುಧವಾರ ಹೇಳಿದ್ದಾರೆ.

ಸೆಪ್ಟೆಂಬರ್ 17 ರಂದು ಕೊನೆಗೊಳ್ಳಲಿರುವ ಏಷ್ಯಾ ಕಪ್ ನಂತರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ನಡೆಯಲಿದೆ. ವಿಶ್ವಕಪ್ ಅಭ್ಯಾಸ ಪಂದ್ಯಗಳಿಗೆ ಮುಂಚಿತವಾಗಿ ಮೂರು ಏಕದಿನ ಪಂದ್ಯಗಳನ್ನು ಆಡಲಾಗುವುದು. ವಿಶ್ವಕಪ್​​ಗೆ ಮುಂಚಿತವಾಗಿ ಪ್ಲೇಯಿಂಗ್ ಇಲೆವೆನ್ ಅನ್ನು ಉತ್ತಮಗೊಳಿಸುವ ಗುರಿ ಹೊಂದಿರುವ ಭಾರತಕ್ಕೆ ಈ ಪಂದ್ಯಗಳು ನಿರ್ಣಾಯಕವಾಗಿವೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ.

ಪಂದ್ಯಕ್ಕೆ ಮುಂಚಿತವಾಗಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಅದರಲ್ಲಿ ಟೀಮ್​ ಇಂಡಿಯಾವನ್ನು ರಚಿಸಲು ಅವಕಾಶ ಸಿಗುತ್ತದೆ, ಭಾರತದ ಪಿಚ್ಗಳು ವೇಗಿಗಳಿಗಿಂತ ಸ್ಪಿನ್ನರ್​​ಗಳಿಗೆ ಹೆಚ್ಚು ಸಹಾಯ ಮಾಡುತ್ತಿರುವುದರಿಂದ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಚಾಹಲ್ ಮತ್ತು ಕುಲದೀಪ್ ಯಾದವ್ ಅವರಂಥ ಬೌಲರ್​ಗಳಿಗೆ ಹೆಚ್ಚು ಅವಕಾಶ ಸಿಗಲಿದೆ.

Exit mobile version