Site icon Vistara News

Akash Deep : ಮಗನ ಕ್ರಿಕೆಟ್ ಪಯಣದ ತಾಪತ್ರಯಗಳನ್ನು ವಿವರಿಸಿದ ಆಕಾಶ್​ ದೀಪ್​ ತಾಯಿ

Akash deep

ನವದೆಹಲಿ: ಭರವಸೆಯ ಕ್ರಿಕೆಟಿಗ ಆಕಾಶ್ ದೀಪ್ (Akash Deep) ಅವರ ತಾಯಿ ಲಾದುಮಾ ದೇವಿ ತಮ್ಮ ಮಗನ ಕ್ರಿಕೆಟ್ ಪ್ರಯಾಣದಲ್ಲಿ ತಮ್ಮನ್ನು ‘ಅಪರಾಧದಲ್ಲಿ ಪಾಲುದಾರ’ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ ತನ್ನ ಮಗ ಸರ್ಕಾರಿ ನೌಕರನಾಗಬೇಕೆಂಬ ಆಕಾಶ್​ ಅಪ್ಪನ ಬಯಕೆಯ ಹೊರತಾಗಿಯೂ ಲಾದುಮಾ ಅವರು ಮಗನ ಕ್ರಿಕೆಟ್ ಮೇಲಿನ ಕ್ರಿಕೆಟ್​ಗೆ ಪ್ರೋತ್ಸಾಹ ನೀಡಿದ್ದರು. ಹೀಗಾಗಿ ಅದನ್ನು ಅಪರಾಧ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಲಾದುಮಾ ದೇವಿ ಮಗನ ಕ್ರೀಡೆಯ ಅನ್ವೇಷಣೆಗೆ ಅನುಕೂಲ ಮಾಡಿಕೊಟ್ಟಿದ್ದರು. ಅಪ್ಪನಿಗೆ ಗೊತ್ತಿಲ್ಲದ ಹಾಗೆ ರಹಸ್ಯವಾಗಿ ಆಡಲು ಅವಕಾಶ ಮಾಡಿಕೊಟ್ಟಳು. ರಾಂಚಿ ಟೆಸ್ಟ್​​ನ ಆರಂಭಿಕ ದಿನದಂದು ಮೂರು ವಿಕೆಟ್​ಗಳನ್ನು ಪಡೆಯುವ ಮೂಲಕ ಆಕಾಶ್ ಅವರ ಕನಸು ಹೊಸ ಎತ್ತರಕ್ಕೆ ಏರಿದೆ. ಭಾರತದ ತರಬೇತುದಾರ ರಾಹುಲ್ ದ್ರಾವಿಡ್ ಅವರು ಅವರಿಗೆ ಟೆಸ್ಟ್​​ ಕ್ಯಾಪ್​ ನೀಡಿದ್ದರು. ಈ ವೇಳೆ ತಾಯಿ ಲಾದುಮಾ ಖುಷಿಯೊಂದಿಗೆ ಮಗನ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ.

“ಆಕಾಶ್​​ ತಂದೆ ಯಾವಾಗಲೂ ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಕ್ರಿಕೆಟ್ ಆಕಾಶ್​ನ ಉತ್ಸಾಹವಾಗಿತ್ತು. ಅದಕ್ಕೆ ಪ್ರೋತ್ಸಾಹ ನೀಡಿ ನಾನು ಅಪರಾಧದಲ್ಲಿ ಆತನ ಪಾಲುದಾರನಾಗಿದ್ದೆ. ನಾನು ಅವನನ್ನು ಕ್ರಿಕೆಟ್ ಆಡಲು ರಹಸ್ಯವಾಗಿ ಕಳುಹಿಸುತ್ತಿದ್ದೆ. ಅವನ ಕನಸನ್ನು ಮುಂದುವರಿಸಲು ಸಹಾಯ ಮಾಡಿದ್ದೆ. ಆ ಸಮಯದಲ್ಲಿ, ನಿಮ್ಮ ಮಗ ಕ್ರಿಕೆಟ್ ಆಡುತ್ತಿದ್ದಾನೆ ಎಂದು ಯಾರಾದರೂ ಹೇಳಿದರೆ ಪತಿ, ಅವನು ಹಾಳಾಗಿದ್ದಾನೆ ಮತ್ತು ರಾಕ್ಷಸನಾಗುತ್ತಾನೆ ಎಂದು ಹೇಳುತ್ತಿದ್ದರು. ಆದರೆ ನಮಗೆ ಆಕಾಶ್​​ ಮೇಲೆ ನಂಬಿಕೆ ಇತ್ತು. ಇದೀಗ ನನ್ನ ಪತಿ ಹಾಗೂ ಇನ್ನೊಬ್ಬ ಮಗನನ್ನು ಕಳೆದುಕೊಂಡಿದ್ದೇನೆ. ಈಗ ಆಕಾಶ್​ಗೆ ಕ್ರಿಕೆಟ್​ ಕೈ ಹಿಡಿದಿದೆ ಎಂದು ಹೇಳಿದ್ದಾರೆ.

ಆಕಾಶ್​ ಅವರ ತಂದೆ ಮತ್ತು ಸಹೋದರ ಇಂದು ಜೀವಂತವಾಗಿದ್ದರೆ, ಅವರು ಸಂತೋಷದಿಂದ ತುಂಬಿ ತುಳುಕುತ್ತಿದ್ದರು: ಲಾದುಮಾ ದೇವಿ

ತಂದೆಗೆ ಅರ್ಪಣೆ

ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದ ಚೊಚ್ಚಲ ಪಂದ್ಯವನ್ನು ಆಕಾಶ್ ತಮ್ಮ ದಿವಂಗತ ತಂದೆಗೆ ಅರ್ಪಿಸಿದ್ದಾರೆ. ಟೆಸ್ಟ್ ಕ್ರಿಕೆಟ್​ಗೆ ತಮ್ಮ ಪ್ರವೇಶವನ್ನು ತೀವ್ರ ಭಾವನಾತ್ಮಕ ಕ್ಷಣ ಎಂದು ವೇಗಿ ಬಣ್ಣಿಸಿದ್ದಾರೆ. ತನ್ನ ತಂದೆ ಮತ್ತು ಸಹೋದರನನ್ನು ಕಳೆದುಕೊಂಡ ನಂತರ ತನ್ನ ಜೀವನ ಕಷ್ಟಕರವಾಯಿತು. ಅಂತಿಮವಾಗಿ ಕ್ರಿಕೆಟ್ ಅನ್ನು ತನ್ನ ಮಾರ್ಗವಾಗಿ ಆಯ್ಕೆ ಮಾಡಿಕೊಂಡೆ ಎಂದು ಅವರು ಬಹಿರಂಗಪಡಿಸಿದರು.

ಇದನ್ನೂ ಓದಿ : WPL 2023 : ಡಬ್ಲ್ಯುಪಿಎಲ್​ನಂತೆ ಐಪಿಎಲ್​ನಲ್ಲೂ ವೈಡ್​ ಬಾಲ್, ನೋ ಬಾಲ್​​ ಪರೀಕ್ಷೆಗೆ ಡಿಆರ್​ಎಸ್​ ಬಳಕೆ?

ಆಕಾಶ್​ನ ತಂದೆ ಮತ್ತು ಸಹೋದರ ಇಂದು ಜೀವಂತವಾಗಿದ್ದರೆ, ಅವರು ಸಂತೋಷದಿಂದ ಸಂಭ್ರಮಿಸುತ್ತಿದ್ದರು. ಇದು ಜೀವನದ ಅತ್ಯಂತ ಸ್ಮರಣೀಯ ದಿನ ಮತ್ತು ನಾವು ಮಾತ್ರ ಅದನ್ನು ನೋಡುವ ಅದೃಷ್ಟವಂತರು. ನಾನು ಈ ಭೂಮಿಯ ಮೇಲಿನ ಹೆಮ್ಮೆಯ ತಾಯಿ ಎಂದು ಲಾದುಮಾ ದೇವಿ ಹೇಳಿದ್ದಾರೆ.

Exit mobile version