ಬರ್ಮಿಂಗ್‌ಹ್ಯಾಮ್: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ(All England Badminton) ಭಾರತದ ಎಚ್.ಎಸ್. ಪ್ರಣಯ್(HS Prannoy) ಮತ್ತು ಲಕ್ಷ್ಯ ಸೇನ್(Lakshya Sen) ಗೆಲುವಿನ ಶುಭಾರಂಭ ಕಂಡಿದ್ದಾರೆ.
ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗ್ಸಲ್ ವಿಭಾಗದ ಪಂದ್ಯದಲ್ಲಿ ವಿಶ್ವದ ನಂ. 9ನೇ ಶ್ರೇಯಾಂಕದ ಪ್ರಣಯ್ ಅವರು ತೈವಾನ್‌ನ ಝು ವೀ ವಾಂಗ್ ಅವರನ್ನು 21-19, 22-20 ಅಂತರದಿಂದ ಸೋಲಿಸುವಲ್ಲಿ ಯಶಸ್ಸು ಸಾಧಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ ಈ ಕಾಳಗ 49 ನಿಮಿಷಗಳ ಕಾಲ ಸಾಗಿತು.
ಈ ಗೆಲುವಿನಿಂದಿಗೆ ಪ್ರಣಯ್ ಅವರು ಎದುರಾಳಿ ಝು ವೀ ವಾಂಗ್ ವಿರುದ್ಧ ಆಡಿದ 8 ಪಂದ್ಯಗಳಲ್ಲಿ 5-3ರ ಮುನ್ನಡೆ ಸಾಧಿಸಿದಂತಾಗಿದೆ.
All England Badminton: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್; ಸಿಂಧು, ಸೈನಾ ಕಣದಲ್ಲಿ
ದಿನದ ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಭರವಸೆಯ ಯುವ ಆಟಗಾರ ಲಕ್ಷ್ಯ ಸೇನ್ ಅವರು ಚೈನೀಸ್ ತೈಪೆಯ ಚೌ ಟೀನ್ ಚೆನ್ ಅವರನ್ನು 21-18, 21-19 ಅಂತರದಿಂದ ಮಣಿಸಿದರು. ಬುಧವಾರ(ಮಾರ್ಚ್ 15) ನಡೆಯುವ ಮಹಿಳಾ ಸಿಂಗಲ್ಸ್ ವಿಭಾಗದ ಹಣಾಹಣಿಯಲ್ಲಿ ಭಾರತದ ಪಿ.ವಿ ಸಿಂಧು(PV Sindhu) ಅವರು ಚೀನಾದ ಜಾಂಗ್ ಯಿ ಮನ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.