Site icon Vistara News

IND vs SA | ಗ್ರೀನ್‌ಫೀಲ್ಡ್‌ ಸ್ಟೇಡಿಯಮ್‌ ಪಕ್ಕದಲ್ಲಿ ಕೊಹ್ಲಿಯ ಬೃಹತ್ ಕಟೌಟ್ ನೆಟ್ಟವರು ಯಾರು?

virat kohli

ತಿರುವನಂತಪುರಂ : ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ೨೦ ಸರಣಿಯ ಮೊದಲ ಪಂದ್ಯ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಬುಧವಾರ ನಡೆಯಲಿದೆ. ೨೦೧೯ರ ಬಳಿಕ ಕೇರಳದ ಸ್ಟೇಡಿಯಮ್‌ ಒಂದರಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ. ಹೀಗಾಗಿ ಕೇರಳದ ಅಭಿಮಾನಿಗಳಿಗೆ ಈ ಪಂದ್ಯದ ಮೇಲೆ ವಿಶೇಷ ಅಭಿಮಾನ.

ಪ್ರಸ್ತುತ ಭಾರತ ತಂಡದಲ್ಲಿ ಅವಕಾಶ ಪಡೆಯಬಲ್ಲ ಕೇರಳದ ಏಕೈಕ ಆಟಗಾರ ಸಂಜು ಸ್ಯಾಮ್ಸನ್‌. ಆದರೆ ಪೈಪೋಟಿಯ ನಡುವೆ ಅವರಿಗೆ ಟೀಮ್‌ ಇಂಡಿಯಾದಲ್ಲಿ ಅವಕಾ ಸಿಗುತ್ತಿಲ್ಲ. ಹೀಗಾಗಿ ಟೀಮ್‌ ಇಂಡಿಯಾ ಸೋಮವಾರ ತಿರುವನಂತಪುರಕ್ಕೆ ಹೋದ ತಕ್ಷಣ ಅಲ್ಲಿನ ಅಭಿಮಾನಿಗಳು ಸಂಜು ಅವರಿಗೆ ಚಾನ್ಸ್ ಕೊಡಬೇಕು ಎಂದು ಬಿಸಿಸಿಐ ವಿರುದ್ಧ ಪ್ರತಿಭಟನೆ ನಡೆಸಿತ್ತು. ಹೀಗಾಗಿ ಕೇರಳಲ್ಲಿ ಸಂಜು ಅವರಿಗೆ ಮಾತ್ರ ಅಭಿಮಾನಿಗಳು ಇದ್ದಾರೆ ಎಂಬುದು ಸಾಕಷ್ಟು ಮಂದಿಯ ತಿಳಿವಳಿಕೆ. ಆದರೆ, ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ಅಷ್ಟೇ ಸಂಖ್ಯೆಯ ಅಭಿಮಾನಿಗಳಿದ್ದಾರೆ ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ.

ಪಂದ್ಯ ನಡೆಯಲಿರುವ ತಿರುವನಂತಪುರದ ಗ್ರೀನ್‌ಫೀಲ್ಡ್‌ ಸ್ಟೇಡಿಯಮ್‌ ಪಕ್ಕದಲ್ಲಿ ವಿರಾಟ್‌ ಕೊಹ್ಲಿ ಬೃಹತ್‌ ಗಾತ್ರದ ಕಟೌಟ್‌ ಹಾಕಲಾಗಿದೆ. ಇದು ಕೊಹ್ಲಿ ಫ್ಯಾನ್‌ಗಳದ್ದೇ ಕೆಲಸ ಎಂಬುದಲ್ಲಿ ಅನುಮಾನ ಇಲ್ಲ. ಆಲ್‌ ಕೇರಳ ವಿರಾಟ್‌ ಕೊಹ್ಲಿ ಫ್ಯಾನ್ಸ್‌ ಎಂಬ ಸಂಘಟನೆ ಈ ಕಟೌಟ್‌ ನಿಲ್ಲಿಸಿದೆ. ಈ ಮೂಲಕ ಭಾರತ ತಂಡದ ರನ್‌ ಮೆಷಿನ್‌ಗೆ ಗೌರವ ಸಲ್ಲಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಕೇರಳದಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ. ಅಂತೆಯೆ ಬ್ಯಾಟಿಂಗ್‌ಗೆ ಪೂರಕವಾಗಿರುವ ಗ್ರೀನ್‌ ಫೀಲ್ಡ್‌ ಸ್ಟೇಡಿಯಮ್‌ನಲ್ಲಿ ಗೆದ್ದು ಬೀಗುವುದು ರೋಹಿತ್‌ ಶರ್ಮ ಬಳಗದ ಗುರಿ

ಇದನ್ನೂ ಓದಿ | Team India | ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಅನುಕೂಲವಾಗಬಲ್ಲ 3 ಸಂಗತಿಗಳು ಇಲ್ಲಿವೆ

Exit mobile version