Site icon Vistara News

R Ashwin | ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ ಆಲ್​ರೌಂಡರ್​ ಆರ್​. ಅಶ್ವಿನ್; ಏನಿದು ದಾಖಲೆ?

R Ashwin

ಬೆಂಗಳೂರು : ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡದ ಸೋಲು ತಪ್ಪಿಸಿದ್ದು. ಆಲ್​ರೌಂಡರ್​ ಆರ್ ಅಶ್ವಿನ್ ಅವರು. 145 ರನ್​ಗಳ ಗೆಲುವಿನ ಗುರಿಯೊಂದಿಗೆ ಆಡಿದ ಭಾರತ ತಂಡ 74 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡಾಗ ಭಾರತದ ಪಾಳೆಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಈ ವೇಳೆ ಬ್ಯಾಟ್​ ಮಾಡಲು ಇಳಿದ ಆರ್​. ಅಶ್ವಿನ್​ ಚಿತ್ರಣವನ್ನೇ ಬದಲಾಯಿಸಿದರು. ಶ್ರೇಯಸ್ ಅವರ ಜತೆ ಸೇರಿದ ಅವರು ಅಜೇಯ 42 ರನ್​ ಬಾರಿಸಿ ಗೆಲುವು ತಂದುಕೊಟ್ಟರು. ಈ ಮೂಲಕ ಅವರು ಪಂದ್ಯಶ್ರೇಷ್ಠ ಪುರಸ್ಕಾರವನ್ನು ತಮ್ಮದಾಗಿಸಿಕೊಂಡರು. ಈ ಗೆಲುವಿನ ರನ್​ ಜತೆಗೆ ಆರ್​. ಅಶ್ವಿನ್​ ಟೆಸ್ಟ್​ ಕ್ರಿಕೆಟ್​ ವೃತ್ತಿಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಆರ್​ ಅಶ್ವಿನ್​ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಮರಣೀಯ ಬ್ಯಾಟಿಂಗ್ ಮಾಡುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಒಟ್ಟು 3043 ರನ್ ಬಾರಿಸಿದ ಸಾಧನೆ ಮಾಡಿದರು. ಅವರ ಖಾತೆಯಲ್ಲಿ 449 ವಿಕೆಟ್​ಗಳು ಕೂಡ ಇವೆ. ಹೀಗಾಗಿ ಟೆಸ್ಟ್​ ಮಾದರಿಯಲ್ಲಿ 400ಕ್ಕಿಂತ ಅಧಿಕ ವಿಕೆಟ್​ ಹಾಗೂ 3000ಕ್ಕೂ ಹೆಚ್ಚು ರನ್​ ಬಾರಿಸಿದ ವಿಶ್ವದ ಆರನೇ ಆಟಗಾರ ಎಂಬ ಮೈಲುಗಲ್ಲು ಸೃಷ್ಟಿಸಿದರು.

ಆರ್​ ಅಶ್ವಿನ್ ಅವರು 88 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದು, ವಿಶ್ವ ಕ್ರಿಕೆಟ್​ನ ಅಮೂಲ್ಯ ಆಲ್​ರೌಂಡರ್​ ಎನಿಸಿಕೊಂಡರು. ಅಲ್ಲದೇ ಅವರಿನ್ನೂ ಕ್ರಿಕೆಟ್​ಗೆ ವಿದಾಯ ಹೇಳದ ಕಾರಣ ಇನ್ನಷ್ಟು ಸಾಧನೆ ಮಾಡಲು ಅವರಿಗೆ ಅವಕಾಶವಿದೆ.

400ಕ್ಕೂ ಅಧಿಕ ವಿಕೆಟ್​, 3000ಕ್ಕೂ ಹೆಚ್ಚು ಟೆಸ್ಟ್ ಬಾರಿಸಿದವರ ಪಟ್ಟಿ ಇಂತಿದೆ

ಆಟಗಾರಪಂದ್ಯರನ್​ವಿಕೆಟ್​
ಸರ್​ ರಿಚರ್ಡ್​ ಹ್ಯಾಡ್ಲಿ(ನ್ಯೂಜಿಲ್ಯಾಂಡ್​)863,121431
ಕಪಿಲ್​ ದೇವ್​ (ಭಾರತ)1315,248434
ಶೇನ್​ ವಾರ್ನ್​ (ಆಸ್ಟ್ರೇಲಿಯಾ)1453,154708
ಶಾನ್​ ಪೊಲಾಕ್​ (ದಕ್ಷಿಣ ಆಫ್ರಿಕಾ)1083,781421
ಸ್ಟುವರ್ಟ್​ ಬ್ರಾಡ್​ (ಇಂಗ್ಲೆಂಡ್​)1593,550566
ಆರ್​ ಅಶ್ವಿನ್​ (ಭಾರತ)883,043449

ಇದನ್ನೂ ಓದಿ | Team India | ಮಾಜಿ ಕೋಚ್ ರವಿ ಶಾಸ್ತ್ರಿಗೆ ಪ್ರತ್ಯುತ್ತರ ಕೊಟ್ಟ ಸ್ಪಿನ್ನರ್‌ ಆರ್ ಅಶ್ವಿನ್‌

Exit mobile version