Site icon Vistara News

Alyssa Healy : ಆಸ್ಟ್ರೇಲಿಯಾದ ವೇಗದ ಬೌಲರ್​ ಸ್ಟಾರ್ಕ್​ ಪತ್ನಿಗೆ ಸಾಕು ನಾಯಿ ಕಚ್ಚಿ ಗಂಭೀರ ಗಾಯ

Alyssa Healy

ಬೆಂಗಳೂರು: ಆಸ್ಟ್ರೇಲಿಯಾ ತಂಡದ ವೇಗದ ಬೌಲರ್​ ಮಿಚೆಲ್​ ಸ್ಟಾರ್ಕ್​ ಅವರ ಪತ್ನಿ ಹಾಗೂ ಮಹಿಳಾ ಕ್ರಿಕೆಟರ್ ಅಲಿಸ್ಸಾ ಹೀಲಿ ಅವರ ಕೈಗೆ ನಾಯಿ ಕಚ್ಚಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಾಹಿತಿಯನ್ನು ಅವರು ಸ್ಪಷ್ಟಪಡಿಸಿದ್ದಅರೆ. ಶನಿವಾರ ರಾತ್ರಿ ಬಲ ತೋರುಬೆರಳಿಗೆ ತಮ್ಮ ಸಾಕು ನಾಯಿ ಕಚ್ಚಿದೆ ಎಂದು ಹೇಳಿದ್ದಾರೆ. ಘಟನೆ ಬಳಿಕ ನಂತರ ಅವರು ತಮ್ಮ ವೃತ್ತಿಜೀವನದ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಚೇತರಿಕೆಯ ಭರವಸೆಯೂ ಕೊಟ್ಟಿದ್ದಾರೆ.

ಹೀಲಿ ತನ್ನ ಎರಡು ಸ್ಟಾಫರ್ಡ್ಶೈರ್ ಬುಲ್ ಟೆರಿಯರ್ ನಾಯಿಮರಿಗಳಾದ ಮಿಸ್ಟಿ ಮಿಲ್ಲಿಯನ್ನು ಜಗಳವಾಡುತ್ತಿರುವಾಗ ಬೇರ್ಪಡಿಸಲು ಪ್ರಯತ್ನಿಸುತ್ತಿದ್ದಾಗ ಅದರಲ್ಲೊಂದು ಅವರಿಗೆ ಕಚ್ಚಿದೆ. ಹೀಗಾಗಿ ಅವರು ಸರ್ಜರಿಗೆ ಒಳಗಾಗಬೇಕಾಯಿತು. ಹೀಗಾಗಿ ಅವರು ಮಹಿಳೆಯರ ಬಿಗ್​ಬ್ಯಾಷ್​ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಪರವಾಗಿ ಮತ್ತು ಆಸ್ಟ್ರೇಲಿಯಾದ ಪರ ಡಿಸೆಂಬರ್​ನ್ಲಿ ಭಾರತ ಪ್ರವಾಸದ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ.

ಅವರು ಭಾನುವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಗುರುವಾರ ವೈದ್ಯರೊಂದಿಗೆ ಮತ್ತೊಂದು ಬೇಟಿಯ ನಂತರ ಚೇತರಿಕೆಯ ಸಮಯದ ಸ್ಪಷ್ಟ ಸೂಚನೆಯನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

“ನನ್ನ ಬಳಿ ಎರಡು ನಾಯಿಗಳಿವೆ, ಅವು ಒರಟಾಗಿವೆ ಮತ್ತು ಜಗಳವಾಡುತ್ತವೆ. ಒಂದೊಕ್ಕಿಂತ ಒಂದು ಜೋರಾಗಿದೆ. ದುರದೃಷ್ಟವಶಾತ್ ಕೆಟ್ಟ ಸಮಯದಲ್ಲಿ ನನ್ನ ಕೈಯನ್ನು ತಪ್ಪು ಸ್ಥಳದಲ್ಲಿ ಇಟ್ಟಿದ್ದೆ . ನನ್ನ ಬಲ ತೋರುಬೆರಳಿಗೆ ಅದರಲ್ಲೊಂದು ಕಚ್ಚಿತು. ಇದು ತುಂಬಾ ಭಯಾನಕವಾಗಿತ್ತು ಆದರೆ, ಸಕಾರಾತ್ಮಕ ಅಂಶವೆಂದರೆ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಎಲ್ಲವೂ ಚೆನ್ನಾಗಿ ನಡೆಯಿತು,” ಎಂದು ಹೀಲಿ ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಪ್ರಕಾರ, ನಾಯಿ ಕಡಿತದಿಂಧ ಮೂಳೆ ಅಥವಾ ಸ್ನಾಯುವಿನ ಯಾವುದೇ ಭಾಗಕ್ಕೆ ಹಾನಿ ಸಂಭವಿಸಿಲ್ಲ. ಇದು ಆರಂಭದಲ್ಲಿ ಆತಂಕಕ್ಕೆ ದೂಡಿತ್ತು.

ಈ ಸುದ್ದಿಯನ್ನೂ ಓದಿ: Team India : ಇನ್ನೆರಡು ದಿನ ಧರ್ಮಶಾಲಾದಲ್ಲಿ ಉಳಿಯುವುದಾಗಿ ಹೇಳಿದ ಟೀಮ್ ಇಂಡಿಯಾ

ಸುಳ್ಳು ಹೇಳುವುದಿಲ್ಲ, ನಾನು ಆರಂಭದಲ್ಲಿ ನನ್ನ ಬೆರಳನ್ನು ಹೊರತೆಗೆದಾಗ, ನಾನು ಎಲ್ಲವನ್ನೂ ಕಳೆದುಕೊಂಡೆ ಎಂದು ಭಾವಿಸಿದೆ. ಆದರೆ ಈಗ ಎಲ್ಲವೂ ಸುಗಮವಾಗಿ ಸಾಗಿದೆ. ನಾಣು ನಾನು ಅಗತ್ಯವಿರುವ ರೀತಿಯಲ್ಲಿ ಬ್ಯಾಟ್ ಅನ್ನು ಹಿಡಿಯಲು ಮತ್ತು ಚೆಂಡನ್ನು ಹಿಡಿಯಬಹುದೇ ಎಂದು ಇನ್ನೂ ಗೊತ್ತಿಲಲ. ಆದರೆ ಎಲ್ಲಾ ವರದಿಗಳ ಪ್ರಕಾರ ಎಲ್ಲವೂ ತುಂಬಾ ಸಕಾರಾತ್ಮಕವಾಗಿದೆ” ಎಂದು ಹೀಲಿ ಹೇಳಿದ್ದಾರೆ.

ಹೀಲಿ ಚೇತರಿಸಿಕೊಳ್ಳುವ ಸಮಯವನ್ನು ಅವಲಂಬಿಸಿ, ಡಿಸೆಂಬರ್​​ನಲ್ಲಿ ನಡೆಯಲಿರುವ ಬಹು ಸ್ವರೂಪದ ಭಾರತ ಪ್ರವಾಸದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಆಸ್ಟ್ರೇಲಿಯಾದ ತಂಡಕ್ಕೆ ಹೊಸ ನಾಯಕಿಯನ್ನು ಹುಡುಕಬೇಕಾಗುತ್ತದೆ. ಮೆಗ್ ಲ್ಯಾನಿಂಗ್ ಪ್ರವಾಸಕ್ಕೆ ಲಭ್ಯತೆಯನ್ನು ಇನ್ನೂ ದೃಢಪಡಿಸಿಲ್ಲ.

Exit mobile version