ಸಿಡ್ನಿ: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್(mitchell starc) ಅವರ ಪತ್ನಿ ಅಲಿಸ್ಸಾ ಹೀಲಿ(Alyssa Healy) ಅವರನ್ನು ನೇಮಕ ಮಾಡಲಾಗಿದೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ಅವರು ಇನ್ನು ತಂಡ ಮುನ್ನಡೆಸಲಿದ್ದಾರೆ. ಭಾರತ ಪ್ರವಾಸ ಅವರಿಗೆ ಮೊದಲ ಸವಾಲಾಗಿದೆ.
ಈ ಹಿಂದೆ ನಾಯಕಿಯಾಗಿದ್ದ ಮೆಗ್ ಲ್ಯಾನಿಂಗ್(Meg Lanning) ಅವರು ಒಂದು ತಿಂಗಳ ಹಿಂದೆ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಲ್ಯಾನಿಂಗ್ ಅವರು ಕಳೆದ ಒಂದು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಇದ್ದಾಗ ಹಂಗಾಮಿಯಾಗಿ ಹೀಲಿ ತಂಡದ ನಾಯಕತ್ವ ವಹಿಸುತ್ತಿದ್ದರು. ಇದೀಗ ಅವರು ಅಧಿಕೃತ ಪೂರ್ಣ ಪ್ರಮಾಣದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆಲ್ ರೌಂಡರ್ ತಹಿಲಾ ಮೆಕ್ ಗ್ರಾತ್ ಅವರು ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯಾ ತಂಡದ ಪರ ಕಳೆದ 14 ವರ್ಷಗಳಿಂದ ಆಡುತ್ತಿರುವ ಅಲಿಸ್ಸಾ ಹೀಲಿ ಅವರು ಇದುವರೆಗೆ 7 ಟೆಸ್ಟ್, 101 ಏಕದಿನ ಮತ್ತು 147 ಟಿ20 ಪಂದ್ಯಗಳನ್ನಾಡಿದ್ದಾರೆ. ಒಟ್ಟು ಆರು ಶತಕಗಳು ಮತ್ತು 32 ಅರ್ಧ ಶತಕಗಳನ್ನು ಅವರು ಬಾರಿಸಿದ್ದಾರೆ. ಕೀಪರ್ ಆಗಿರುವ ಅವರು ವಿಕೆಟ್ ಹಿಂದೆಯೂ ಹಲವು ದಾಖಲೆಗಳನ್ನು ಬರೆದಿದ್ದಾರೆ. ಏಕದಿನ ಮಾದರಿಯಲ್ಲಿ 2761 ರನ್, ಟಿ20ಯಲ್ಲಿ 2621 ರನ್ ಬಾರಿಸಿದ್ದಾರೆ. ಅಜೇಯ 148 ರನ್ ಟಿ20ಯಲ್ಲಿ ಬಾರಿಸಿದ್ದ ಅವರ ವೈಯಕ್ತಿ ಮೊತ್ತವಾಗಿದೆ.
ಭಾರತದಲ್ಲಿ ನಡೆಯಲಿರುವ ಸರಣಿಯಲ್ಲಿ ಪೂರ್ಣ ಸಾರಥ್ಯದಲ್ಲಿ ಹೀಲಿ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲಿಗೆ ಏಕೈಕ ಟೆಸ್ಟ್ ಪಂದ್ಯದ ಮೂಲಕ ಸರಣಿ ಆರಂಭವಾಗಲಿದೆ. ಬಳಿಕ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳು ನಡೆಯಲಿದೆ. ಎಲ್ಲ ಪಂದ್ಯಗಳು ಮುಂಬೈಯ ವಾಂಖೆಡೆ ಮತ್ತು ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
New @AusWomenCricket skipper Alyssa Healy says part of her role is giving the next generation the freedom to lead and encouraging them to do so.https://t.co/VEqk01pPMI
— cricket.com.au (@cricketcomau) December 9, 2023
ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ
ಅಲಿಸ್ಸಾ ಹೀಲಿ(ನಾಯಕಿ), ತಹಿಲಾ ಮೆಕ್ಗ್ರಾತ್(ಉಪನಾಯಕಿ), ಡಾರ್ಸಿ ಬ್ರೌನ್, ಲಾರೆನ್ ಚೀಟಲ್ (ಟೆಸ್ಟ್ ಮಾತ್ರ), ಹೀದರ್ ಗ್ರಹಾಂ, ಆಶ್ಲೇ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್ (ಟಿ20 ಮಾತ್ರ), ಜೆಸ್ ಜೊನಾಸೆನ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ಬೆತ್ ಮೂನಿ, ಎಲ್ಲಿಸ್ಸಾ ಪೆರಿ, ಮೇಗನ್ ಶಾಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್.
ಇದನ್ನೂ ಓದಿ ENGW vs INDW: ವ್ಯಾಟ್-ಬ್ರಂಟ್ ಬ್ಯಾಟಿಂಗ್ ಆರ್ಭಟಕ್ಕೆ ಮಣಿದ ಭಾರತ ಮಹಿಳಾ ತಂಡ
ಭಾರತ ಟೆಸ್ಟ್ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್‌ಕೀಪರ್), ರಿಚಾ ಘೋಷ್ (ವಿಕೆಟ್‌ಕೀಪರ್), ಸ್ನೇಹ ರಾಣಾ, ಶುಭಾ ಸತೀಶ್, ಹರ್ಲೀನ್ ಡಿಯೋಲ್, ಸೈಕಾ ಸಿಂಗ್, ಟಿಟಾಸ್ ಸಾಧು, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್. ಟಿ20 ಮ್ತು ಏಕದಿನ ಸರಣಿಗೆ ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ.
ಸರಣಿಯ ವೇಳಾಪಟ್ಟಿ
ಡಿಸೆಂಬರ್ 21 ರಿಂದ 24: ಟೆಸ್ಟ್ ಪಂದ್ಯ, ವಾಂಖೆಡೆ ಸ್ಟೇಡಿಯಂ, ಮುಂಬಯಿ
ಡಿಸೆಂಬರ್ 28: ಮೊದಲನೇ ಏಕದಿನ ಪಂದ್ಯ, ವಾಂಖೆಡೆ ಸ್ಟೇಡಿಯಂ, ಮುಂಬಯಿ
ಡಿಸೆಂಬರ್ 30: ಎರಡನೇ ಏಕದಿನ ಪಂದ್ಯ, ವಾಂಖೆಡೆ ಸ್ಟೇಡಿಯಂ, ಮುಂಬಯಿ
ಜನವರಿ 2: ಮೂರನೇ ಏಕದಿನ ಪಂದ್ಯ, ವಾಂಖೆಡೆ ಸ್ಟೇಡಿಯಂ, ಮುಂಬಯಿ
ಜನವರಿ 5: ಮೊದಲನೇ ಟಿ20ಪಂದ್ಯ, ಡಿವೈ ಪಾಟೀಲ್ ಸ್ಟೇಡಿಯಂ, ಮುಂಬಯಿ
ಜನವರಿ 7: ಎರಡನೇ ಟಿ20ಪಂದ್ಯ, ಡಿವೈ ಪಾಟೀಲ್ ಸ್ಟೇಡಿಯಂ, ಮುಂಬಯಿ
ಜನವರಿ 9: ಮೂರನೇ ಟಿ20ಪಂದ್ಯ, ಡಿವೈ ಪಾಟೀಲ್ ಸ್ಟೇಡಿಯಂ, ಮುಂಬಯಿ