Site icon Vistara News

Amanda Wellington | ಮೆಹಂದಿ ಹಾಕಿ ಸಂಭ್ರಮಿಸಿದ ಆಸ್ಟ್ರೇಲಿಯಾ ಕ್ರಿಕೆಟ್​ ಆಟಗಾರ್ತಿ ಅಮಾಂಡ ವೆಲ್ಲಿಂಗ್ಟನ್​; ವಿಡಿಯೊ ವೈರಲ್​

Amanda Wellington

ಮುಂಬಯಿ: ಆಸ್ಟ್ರೇಲಿಯಾ ವನಿತಾ ತಂಡ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಸದ್ಯ ಭಾರತ ಪ್ರವಾಸದಲ್ಲಿದೆ. ಈಗಾಗಲೇ ಸರಣಿಯಲ್ಲಿ ಮೂರು ಪಂದ್ಯಗಳು ಮುಕ್ತಾಯ ಕಂಡಿದ್ದು ಆಸೀಸ್​ 2-1 ಮುನ್ನಡೆಯಲ್ಲಿದೆ. ನಾಲ್ಕನೇ ಪಂದ್ಯ ಇಂದು (ಶನಿವಾರ ಡಿ.17) ನಡೆಯಲಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಆಟಗಾರ್ತಿ ಅಮಾಂಡ ವೆಲ್ಲಿಂಗ್ಟನ್(Amanda Wellington)​ ಮೆಹಂದಿ ಹಾಕಿ ಸಂಭ್ರಮಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಯಾವದೇ ಹಬ್ಬ ಹರಿದಿನಗಳ ಆಚರಣೆಗಳಿರಲಿ ಎಲ್ಲ ಧರ್ಮಗಳಲ್ಲೂ ಮೆಹಂದಿ ಹಚ್ಚುವುದು ಕಂಡು ಬರುತ್ತದೆ. ಇದಕ್ಕೆ ಇಂತಹದ್ದೇ ಆದ ಸೀಮಿತ ಧರ್ಮದ ಚೌಕಟ್ಟಿಲ್ಲ. ಎಲ್ಲ ಧರ್ಮಿಯರು ಮೆಹಂದಿ ತೊಡುತ್ತಾರೆ. ಈ ಮೂಲಕ ತಮ್ಮ ಆಚರಣೆಗೆ ಇನ್ನಷ್ಟು ರಂಗು ಕಲ್ಪಿಸುತ್ತಾರೆ.

ಮೆಹಂದಿ ತೊಟ್ಟ ಬಳಿಕವಂತೂ ಕೆಲವರ ಸಂಭ್ರಮವನ್ನು ವರ್ಣಿಸಲು ಸಾಧ್ಯವಿಲ್ಲ. ಆಗಸದಲ್ಲಿ ಹಾರಾಡಿದ ಹಕ್ಕಿಯಂತೆ ಎಲ್ಲರ ಬಳಿಯೂ ತಾವು ಹಚ್ಚಿದ ಮೆಹಂದಿಯ ಅಭಿಪ್ರಾಯವನ್ನು ಕೇಳಬಯಸುತ್ತಾರೆ. ಇದೀಗ ಆಸ್ಟ್ರೇಲಿಯಾದ ಮಹಿಳಾ ತಂಡದ ಆಟಗಾರ್ತಿ ಅಮಾಂಡ ವೆಲ್ಲಿಂಗ್ಟನ್​ ಕೂಡ ಭಾರತದ ಪ್ರವಾಸದ ವೇಳೆ ಮುಂಬಯಿಯಲ್ಲಿ ತಮ್ಮ ಕೈಗಳಿಗೆ ಮೆಹಂದಿ ತೊಟ್ಟಿದ್ದಾರೆ.

ಅಮಾಂಡ ವೆಲ್ಲಿಂಗ್ಟನ್​ ತಮ್ಮ ಕೈಗಳಿಗೆ ಮೆಹಂದಿ ಹಚ್ಚಿದ ಬಳಿಕ ತಮ್ಮ ಫೋಟೊ ಮತ್ತು ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು. “ನನ್ನ ಈ ಸಂಭ್ರಮ ಉತ್ತುಂಗದ ಹಂತದಲ್ಲಿದೆ. ಈ ಸುಂದರ ಕ್ಷಣದಲ್ಲಿ ನಾನು ನಿಮಗೆ ಹೇಗೆ ತೋರುತ್ತಿದ್ದೇನೆ” ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ | INDW VS AUSW | ವನಿತಾ ಟಿ20 ; ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ, ಸರಣಿಯಲ್ಲಿ 2-1 ಹಿನ್ನಡೆ

Exit mobile version