Site icon Vistara News

Brendon McCullum: ಬೆಟ್ಟಿಂಗ್​ ಸಂಸ್ಥೆಯ ರಾಯಭಾರಿ; ಸಂಕಷ್ಟಕ್ಕೆ ಸಿಲುಕಿದ ಬ್ರೆಂಡನ್‌ ಮೆಕಲಮ್‌

Ambassador of the betting organization; Brendon McCullum is in trouble

Ambassador of the betting organization; Brendon McCullum is in trouble

ಲಂಡನ್​: ಇಂಗ್ಲೆಂಡ್​ ಟೆಸ್ಟ್​ ತಂಡದ ಕೋಚ್​, ನ್ಯೂಜಿಲ್ಯಾಂಡ್ ತಂಡದ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌​ಗೆ(Brendon McCullum) ಸಂಕಷ್ಟವೊಂದು ಎದುರಾಗಿದೆ.​ ಬೆಟ್ಟಿಂಗ್​ ಸಂಸ್ಥೆಯೊಂದರ ರಾಯಭಾರಿಯಾಗುವ ಮೂಲಕ ಮೆಕಲಮ್ ವಿವಾದದಲ್ಲಿ ಸಿಲುಕಿದ್ದಾರೆ. ಇದೇ ವಿಚಾರವಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಇಸಿಬಿ ಈ ಕುರಿತು ಮೆಕಲಮ್ ಜತೆ ಮಾತುಕತೆ ನಡೆಸಲಿದೆ ಎನ್ನಲಾಗಿದೆ. ಮೆಕಲಮ್ ಬೆಟ್ಟಿಂಗ್ ಸಂಸ್ಥೆಯೊಂದಿಗೆ ಯಾವ ರೀತಿಯ ಸಂಬಂಧ ಹೊಂದಿದ್ದಾರೆ ಎಂಬ ಬಗ್ಗೆ ಕ್ರಿಕೆಟ್​ ಮಂಡಳಿ ಸ್ಪಷ್ಟೀಕರಣ ಕೇಳಲಿದೆ ಎಂದು ಲಂಡನ್​​ ಮಾಧ್ಯಮಗಳು ವರದಿಯಾಗಿದೆ.

ಬ್ರೆಂಡನ್ ಮೆಕಲಮ್ ಜನವರಿಯಲ್ಲಿ 22 ಬೆಟ್ಸ್​ಗೆ(22Bet’s) ರಾಯಭಾರಿಯಾಗಿ ಸೇರಿಕೊಂಡರು ಬಳಿಕ ಆನ್‌ಲೈನ್‌ನಲ್ಲಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿ ಪ್ರಾಬ್ಲಮ್​ ಗ್ಯಾಮ್ಲಿಂಗ್​ ಫೌಂಡೇಶನ್ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಗೆ ಪತ್ರ ಬರೆದಿದೆ.

ಇದೇ ವಿಚಾರವಾಗಿ ಮಾಹಿತಿ ನೀಡಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ಈ ವಿಷಯವನ್ನು ವಿಚಾರಣೆ ನಡೆಸುತ್ತಿದ್ದೇವೆ. ಮೆಕಲಮ್​ ಅವರು 22 ಬೆಟ್ ಜತೆಗೆ ಯಾವ ರೀಯಿಯ ಸಂಬಂಧ ಹೊಂದಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ನಾವು ಬೆಟ್ಟಿಂಗ್​ನ ವಿಚಾರದಲ್ಲಿ ಕಠಿಣ ಕಾನೂನು ಹೊಂದಿದ್ದೇವೆ. ಆ ಕಾನೂನುಗಳನ್ನು ಅನುಸರಿಸಿದ್ದಾರಾ ಎಂಬುದರ ಬಗ್ಗೆ ತನಿಖೆ ಮಾಡಬೇಕಿದೆ. ಸದ್ಯ ಮೆಕಲಮ್ ಅವರನ್ನು ವಿಚಾರಣೆ ನಡೆಸುತ್ತಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದೆ.

ಇದನ್ನೂ ಓದಿ IPL 2023: ಪಂದ್ಯ ಗೆದ್ದರೂ ಹಾರ್ದಿಕ್​ ಪಾಂಡ್ಯಗೆ ಬಿತ್ತು ದಂಡದ ಬರೆ

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ನಿಯಮದಂತೆ, ಯಾವುದೇ ರೀತಿಯ ಬೆಟ್ಟಿಂಗ್‌ಗೆ ವಿನಂತಿಸುವುದು ಅಥವಾ ಪ್ರೇರೇಪಿಸುವುದು ಶಿಕ್ಷಾರ್ಹ ಅಪರಾಧ. ಅಂತಹ ಅಪರಾಧ ಸಾಬೀತಾದಲ್ಲಿ ಕನಿಷ್ಠ ಒಂದು ವರ್ಷದ ಅವಧಿಗೆ ಮೆಕಲಮ್ ಅವರನ್ನು ಅನರ್ಹತೆಗೊಳಿಸುವ ಬಗ್ಗೆ ನಿಯಮದಲ್ಲಿ ಹೇಳಲಾಗಿದೆ. 22 ಬೆಟ್ ಇಂಡಿಯಾ ಮೆಕಲಮ್ ಅವರನ್ನು ಪ್ರಚಾರದ ರಾಯಭಾರಿ ಎಂದು ಹೇಳಿಕೊಂಡಿದೆ. ಮೆಕಲಮ್ ಕೂಡ ಜನವರಿಯಲ್ಲಿ ರಾಯಭಾರಿಯಾಗಿ ಸೇರಿದ ವಿಚಾರವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ಆದರೆ ಮತ್ತೆ ಕೆಲ ದಿನಗಳ ನಂತರ ಈ ಪೋಸ್ಟ್ ಡಿಲಿಟ್​ ಮಾಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ಪ್ರಕರಣ ಯಾವ ರೀತಿಯಲ್ಲಿ ಅಂತ್ಯ ಕಾಣಲಿದೆ ಎಂದು ಕಾದು ನೋಡಬೇಕಿದೆ.

Exit mobile version