ಹೈದರಾಬಾದ್: ಎಲ್ಲ ಸ್ವರೂಪದ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ಭಾರತ(Team Inida) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(chennai super kings) ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಅವರು ಮತ್ತೆ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಕೆರಿಬಿಯನ್ ಪ್ರೀಮಿಯರ್ ಲೀಗ್(CPL 2023) ಆಡಲು ನಿರ್ಧರಿಸಿದ್ದಾರೆ. ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪೇಟ್ರಿಯಸ್(St Kitts & Nevis Patriots) ಪರ ಕಣಕ್ಕಿಳಿಯಲಿದ್ದಾರೆ. ಈ ಟೂರ್ನಿ ಆಗಸ್ಟ್ 16 ರಿಂದ ಆರಂಭವಾಗಲಿದೆ.
ಎರಡನೇ ಭಾರತೀಯ
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ(Caribbean Premier League) ಆಡುತ್ತಿರುವ ಎರಡನೇ ಭಾರತೀಯ ಎಂಬ ಹಿರಿಮೆಗೆ ಅಂಬಾಟಿ ರಾಯುಡು ಪಾತ್ರರಾಗಿದ್ದಾರೆ. ಈ ಹಿಂದೆ ಪ್ರವೀಣ್ ತಾಂಬೆ ಅವರು ಈ ಟೂರ್ನಿಯಲ್ಲಿ ಆಡಿದ್ದರು. ಪ್ರಸಕ್ತ ವರ್ಷದಲ್ಲಿ ನಡೆದ 16ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ತಂಡದ ಪರ ಆಡಿದ ರಾಯುಡು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಭಾರತ ತಂಡಕ್ಕೆ ಈ ಹಿಂದೆಯೇ ವಿದಾಯ ಹೇಳಿದ್ದರು.
ಬಿಸಿಸಿಐ ನಿಯಮದಿಂದ ಪಾರು
ಐಪಿಎಲ್ ನಿವೃತ್ತಿ ಬಳಿಕ ಆರಂಭದಲ್ಲಿ ಅಂಬಾಟಿ ರಾಯುಡು ಅವರು ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡಲು ನಿರ್ಧರಿಸಿದ್ದರು. ಆದರೆ ನಿವೃತ್ತಿ ಘೋಷಿಸಿದ ತಕ್ಷಣ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಆಡಬಾರದೆಂಬ ಬಿಸಿಸಿಐ ಕೂಲಿಂಗ್ ಆಫ್ ಪೀರಿಯಡ್ ನಿಯಮದಿಂದಾಗಿ ಈ ಟೂರ್ನಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ರಾಯುಡುಗೆ ಬಿಸಿಸಿಐ ರಿಲೀಫ್ ನೀಡಿದೆ. ಹೀಗಾಗಿ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ Ambati Rayudu: ಸರ್ಕಾರಿ ಶಾಲೆಯ ಅಭಿವೃದ್ಧಿಗೆ 5 ಲಕ್ಷ ದೇಣಿಗೆ ನೀಡಿದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ
ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ
ಅಂಬಾಟಿ ರಾಯುಡು ಅವರು ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಇದೆ. ಅವರಿಗೆ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸೇರುವ ಒಲವಿದೆ ಎಂದು ಈಗಾಗಲೇ ಹಲವು ವರದಿಗಳು ತಿಳಿಸಿದೆ. ರಾಜಕೀಯ ಎಂಟ್ರಿಯ ಬಗ್ಗೆ ಅಧಿಕೃತ ಹೇಳಿಕೆ ನೀಡದಿದ್ದರೂ ಕಳೆದ ವಾರ ಗುಂಟೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಇಲ್ಲಿನ ಸೇಂಟ್ ಕ್ಸೇವಿಯರ್ಸ್ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ದರು. ಇದು ಅವರ ರಾಜಕೀಯ ಎಂಟ್ರಿಯ ಬಗ್ಗೆ ಸುಳಿವು ನೀಡಿತ್ತು.
ಭಾರತ ಪರ ಮೂರು ಶತಕ
55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 47.05 ಸರಾಸರಿಯೊಂದಿಗೆ 1694 ರನ್‌ಗಳಿಸಿದ್ದರು. ರಾಯುಡು ಅವರಿಗೆ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿರಲಿಲ್ಲ. 2013 ರಲ್ಲಿ ಜಿಂಬಾಬ್ವೆ ಎದುರು ಪಾದಾರ್ಪಣ ಪಂದ್ಯವಾಡಿದ ರಾಯುಡು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ರಾಂಚಿಯಲ್ಲಿ ಆಡಿದ್ದರು.