ಬೆಂಗಳೂರು: ಪ್ರವೀಣ್ ತಾಂಬೆ(Pravin Tambe) ಬಳಿಕ ಪುರುಷರ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ(CPL 2023) ಆಡಿದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಅಂಬಾಟಿ ರಾಯುಡು(Ambati Rayudu) ಮೂರೇ ಪಂದ್ಯಕ್ಕೆ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣ ನೀಡಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್(St. Kitts and Nevis Patriots) ನೊಂದಿಗೆ ರಾಯುಡು ತಮ್ಮ ಅವಧಿಯನ್ನು ಕೊನೆಗೊಳಿಸಿದ್ದಾರೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ(IPL 2023) ಚೆನ್ನೈ(CSK) ತಂಡದ ಪರ ಆಡಿದ್ದ ರಾಯುಡು. ಐಪಿಎಲ್ಗೆ ವಿದಾಯ ಹೇಳಿದ್ದರು. ಆ ಬಳಿಕ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ನಲ್ಲಿ ಆಡಲು ನಿರ್ಧರಿಸಿದ್ದರು. ಆದರೆ ಇದೀಗ ಈ ಟೂರ್ನಿಯಿಂದಲೂ ವೈಯಕ್ತಿಕ ಕಾರಣಗಳಿಂದ ಹೊರಬಂದಿದ್ದಾರೆ. ಕ್ರಿಕ್‌ಇನ್‌ಫೋ ವರದಿ ಪ್ರಕಾರ ರಾಯುಡು ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಜತೆಗಿನ ಒಪ್ಪಂದವನ್ನು ಕೊನೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸಕ್ತ ನಡೆಯುತ್ತಿರುವ ಈ ಲೀಗ್‌ನಲ್ಲಿ ಪೇಟ್ರಿಯಾಟ್ಸ್ ತಂಡದ ಪರವಾಗಿ ರಾಯುಡು ಮೂರು ಪಂದ್ಯಗಳನ್ನು ಆಡಿದ್ದರು. ಆದರೆ ಅವರ ಸಾಧನೆ ಮಾತ್ರ ಕೇವಲ 47 ರನ್. ಅವರ ರನ್ ಗಳಿಕೆ ಹೀಗಿದೆ. 0, 32 ಮತ್ತು 15.
ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ
ಅಂಬಾಟಿ ರಾಯುಡು ಅವರು ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಇದೆ. ಅವರಿಗೆ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸೇರುವ ಒಲವಿದೆ ಎಂದು ಈಗಾಗಲೇ ಹಲವು ವರದಿಗಳು ತಿಳಿಸಿದೆ. ರಾಜಕೀಯ ಎಂಟ್ರಿಯ ಬಗ್ಗೆ ಅಧಿಕೃತ ಹೇಳಿಕೆ ನೀಡದಿದ್ದರೂ ಕಳೆದ ವಾರ ಗುಂಟೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಇಲ್ಲಿನ ಸೇಂಟ್ ಕ್ಸೇವಿಯರ್ಸ್ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ದರು. ಇದು ಅವರ ರಾಜಕೀಯ ಎಂಟ್ರಿಯ ಬಗ್ಗೆ ಸುಳಿವು ನೀಡಿತ್ತು.
ಭಾರತ ಪರ 3 ಶತಕ
55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 47.05 ಸರಾಸರಿಯೊಂದಿಗೆ 1694 ರನ್‌ಗಳಿಸಿದ್ದರು. ರಾಯುಡು ಅವರಿಗೆ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿರಲಿಲ್ಲ. 2013 ರಲ್ಲಿ ಜಿಂಬಾಬ್ವೆ ಎದುರು ಪಾದಾರ್ಪಣ ಪಂದ್ಯವಾಡಿದ ರಾಯುಡು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ರಾಂಚಿಯಲ್ಲಿ ಆಡಿದ್ದರು.
ಇದನ್ನೂ ಓದಿ Ambati Rayudu: ಸರ್ಕಾರಿ ಶಾಲೆಯ ಅಭಿವೃದ್ಧಿಗೆ 5 ಲಕ್ಷ ದೇಣಿಗೆ ನೀಡಿದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ
ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದ ರಾಯುಡು
2019ರ ಏಕದಿನ ವಿಶ್ವ ಕಪ್ನಿಂದ ಕೈ ಬಿಟ್ಟ ಬೇಸರಕ್ಕೆ ಬಿಸಿಸಿಐ ವಿರುದ್ಧ ಕೆಂಡಕಾರಿದ್ದ ರಾಯುಡು, ತಕ್ಷಣ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಜತೆಗೆ ವಿಶ್ವಕಪ್ ಟೂರ್ನಿಯನ್ನು ತ್ರಿಡಿ ಗ್ಲಾಸ್ ಹಾಕಿಕೊಂಡು ವೀಕ್ಷಿಸುವುದಾಗಿ ವ್ಯಂಗ್ಯವಾಗಿ ಟ್ವೀಟ್ ಮಾಡಿ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅವರನ್ನು ಟೀಕಿಸಿದ್ದರು. ರಾಯುಡು ವಿಶ್ವಕಪ್ ಸಂಭಾವ್ಯ ತಂಡದಲ್ಲಿದ್ದರೂ ಅವರನ್ನು ಬಿಟ್ಟು ವಿಜಯ್ ಶಂಕರ್ಗೆ ಅವಕಾಶ ನೀಡಿದ ಬಗ್ಗೆ ರಾಯುಡು ಈ ಆಕ್ರೋಶ ವ್ಯಕ್ತಪಡಿಸಿದ್ದರು.