Site icon Vistara News

Ambati Rayudu: ಸರ್ಕಾರಿ ಶಾಲೆಯ ಅಭಿವೃದ್ಧಿಗೆ 5 ಲಕ್ಷ ದೇಣಿಗೆ ನೀಡಿದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ

ambati rayudu

ಹೈದರಾಬಾದ್: ಟೀಮ್​ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಅವರು ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಇದೆ. ಇದರ ಬೆನ್ನಲ್ಲೇ ಅವರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ದೇಣಿಗೆ (Donate) ನೀಡಿದ್ದಾರೆ. ರಾಯುಡು ಅವರ ಈ ಸಮಾಜ ಸೇವೆಗೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ (Chennai Super Kings) ಚಾಂಪಿಯನ್​ ಆಗುವುದಕ್ಕೂ​​ ಮುನ್ನವೇ ಅವರು ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು .55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 47.05 ಸರಾಸರಿಯೊಂದಿಗೆ 1694 ರನ್‌ಗಳಿಸಿದ್ದರು. ರಾಯುಡು ಅವರಿಗೆ ಟೆಸ್ಟ್‌ ತಂಡದಲ್ಲಿ ಆಡುವ ಅವಕಾಶ ಲಭ್ಯವಾಗಿರಲಿಲ್ಲ. 2013 ರಲ್ಲಿ ಜಿಂಬಾಬ್ವೆ ಎದುರು ಪಾದಾರ್ಪಣ ಪಂದ್ಯವಾಡಿದ ರಾಯುಡು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ರಾಂಚಿಯಲ್ಲಿ ಆಡಿದ್ದರು.

ರಾಯುಡು ಅವರು ಮುಟ್ಲೂರಿನ ಸೇಂಟ್ ಕ್ಸೇವಿಯರ್ಸ್ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ದಾರೆ. ಪ್ರಸ್ತುತ ಗುಂಟೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಅವರು ಈ ಚೆಕ್​ ವಿತರಿಸಿ ಸಂಪೂರ್ಣ ಶಾಲಾ ಕಟ್ಟಡ ಹಾಗೂ ಮೈದಾನವನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಶಾಲೆ ಅಭಿವೃದ್ದಿ ಹಣವನ್ನು ನೀಡಿದ ಬಳಿಕ ರಾಯುಡು ಶಾಲಾ ವಿದ್ಯಾರ್ಥಿಗಳೊಂದಿಗೆ (Students) ಊಟ ಸವಿದು ಸರಳತೆ ಮೆರೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರಾಯುಡು ಅವರ ಸೇವೆಯನ್ನು ಕೆಲವರು ಇದೊಂದು ರಾಜಕೀಯ ಪ್ರೇರಿತ ಎನ್ನುತ್ತಿದ್ದಾರೆ.

ಇದನ್ನೂ ಓದಿ Viral News: 2019ರ ವಿಶ್ವಕಪ್‌ ಘಟನೆ ನೆನೆದ ಅಂಬಾಟಿ ರಾಯುಡು

ರಾಯುಡು ತಮ್ಮ ರಾಜಕೀಯ ಸಂಬಂಧವನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಅವರ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್​​ ಸೇರಬಹುದು ಎಂಬ ಊಹಾಪೋಹಗಳನ್ನು ಹರಿದಾಡಿವೆ. ಏಪ್ರಿಲ್ 19ರಂದು, ಶ್ರೀಕಾಕುಳಂ ಜಿಲ್ಲೆಯ ನೌಪಾಡಾದಲ್ಲಿ ಮಾಡಿದ ಭಾಷಣಕ್ಕಾಗಿ ರಾಯುಡು ಆಂಧ್ರಪ್ರದೇಶದ ಮುಖ್ಯಮಂತ್ರಿಯನ್ನು ಟ್ವಿಟರ್​ನಲ್ಲ ಶ್ಲಾಘಿಸಿದ್ದರು. ನಮ್ಮ ಮುಖ್ಯಮಂತ್ರಿ @ysjagan ಅವರ ಅದ್ಭುತ ಭಾಷಣ. ರಾಜ್ಯದ ಪ್ರತಿಯೊಬ್ಬರಿಗೂ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇದೆ ಸರ್ ಎಂದು ಬರೆದುಕೊಂಡಿದ್ದರು.

Exit mobile version