Site icon Vistara News

Team India : ಟೀಮ್​ ಇಂಡಿಯಾ ಮಾಜಿ ಆಟಗಾರ ರಾಜಕೀಯಕ್ಕೆ ಪ್ರವೇಶ?

Ambati Rayudu

#image_title

ನವದೆಹಲಿ: ಭಾರತದ ಮಾಜಿ ಆಟಗಾರ ಮತ್ತು ಸಿಎಸ್​ಕೆಯಿಂದ ಇತ್ತೀಚೆಗೆ ನಿವೃತ್ತಿ ಪಡೆದ ಆಟಗಾರ ಅಂಬಾಟಿ ರಾಯುಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದ ಕೃಷ್ಣ ಅಥವಾ ಗುಂಟೂರು ಜಿಲ್ಲೆಗಳಿಂದ ಸ್ಪರ್ಧಿಸಲು ಚಿಂತಿಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. . ಐಪಿಎಲ್ 2023 ರ ಋತುವಿನ ನಂತರ ರಾಜಕೀಯಕ್ಕೆ ಪ್ರವೇಶಿಸುವ ಉದ್ದೇಶವನ್ನು ರಾಯುಡು ಈ ಹಿಂದೆ ಸ್ಪಷ್ಟಪಡಿಸಿದ್ದರು. ಈಗ, ಮಾಜಿ ಸಿಎಸ್​ಕೆ ಆಟಗಾರ ವೈಎಸ್ಆರ್​​ಕಾಂಗ್ರೆಸ್​ ಪಕ್ಷಕ್ಕೆ ಸೇರಲಿದ್ದಾರೆ. ಗುಂಟೂರಿನವರಾದ ರಾಯುಡು ಅವರು ಲೋಕಸಭಾ ಚುನಾವಣೆಯ ಬಗ್ಗೆ ಚರ್ಚಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ವೈಎಸ್ಆರ್​​ಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ರಾಯುಡು ಅವರನ್ನು ಕಣಕ್ಕಿಳಿಸಲು ರೆಡ್ಡಿ ಉತ್ಸುಕರಾಗಿದ್ದಾರೆ .ಆದರೆ ಅವರನ್ನು ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಸಿಎಂ ಜಗನ್ ರೆಡ್ಡಿ ಅವರು ರಾಯುಡು ಮತ್ತು ಇತರ ಎಲ್ಲಾ ಯುವಕರಿಗೆ ರಾಜಕೀಯಕ್ಕೆ ಪ್ರವೇಶಿಸಲು ಸ್ಫೂರ್ತಿ ನೀಡುತ್ತಿದ್ದಾರೆ ಎನ್ನಲಾಗಿದೆ.

ಸಿಎಂ ಜಗನ್ ಮೋಹನ್ ರೆಡ್ಡಿ ಅವರು ರಾಜಕೀಯಕ್ಕೆ ಪ್ರವೇಶಿಸುವ ಯುವಕರಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಅವರು ಒಂದು ವಿಷಯದ ಮೇಲೆ ಕೇಂದ್ರೀಕರಿಸುವ ಬದಲು ಸರ್ವತೋಮುಖ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ರಾಯುಡು ಹೇಳಿದ್ದಾರೆ.. ಜಗನ್ ಅವರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಸಿಎಸ್​​ಕೆ ಮಾಜಿ ಸ್ಟಾರ್​ ಹೇಳಿದ್ದಾರೆ.

ಇದನ್ನೂ ಓದಿ : Viral News: 2019ರ ವಿಶ್ವಕಪ್‌ ಘಟನೆ ನೆನೆದ ಅಂಬಾಟಿ ರಾಯುಡು

ಮೂಲಗಳ ಪ್ರಕಾರ, ರಾಯುಡು ವಿಧಾನಸಭಾ ಚುನಾವಣೆ ಕಣಕ್ಕೆ ಇಳಿಯಲು ಬಯಸಿದರೆ ಪೊನ್ನೂರ್ ಅಥವಾ ಗುಂಟೂರು ಪಶ್ಚಿಮ ಜಿಲ್ಲೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಕೆಲವು ಹಿರಿಯ ರಾಜಕಾರಣಿಗಳು ಮಚಲಿಪಟ್ಟಣಂ ಲೋಕಸಭಾ ಕ್ಷೇತ್ರವು ರಾಯುಡು ಅವರಿಗೆ ಚುನಾವಣೆ ನಡೆಸಲು ಉತ್ತಮ ಆಯ್ಕೆ ಎಂದು ಭಾವಿಸಿದ್ದಾರೆ.

ಐಪಿಎಲ್​​ನಿಂದ ನಿವೃತ್ತರಾದ ನಂತರ ರಾಯುಡು ಮೇಜರ್ ಲೀಗ್ ಕ್ರಿಕೆಟ್​​ನ ಉದ್ಘಾಟನಾ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸಲಿದ್ದು, ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್ ಮತ್ತು ಡೇವಿಡ್ ಮಿಲ್ಲರ್ ಟೆಕ್ಸಾಸ್​ ಸೂಪರ್​ ಕಿಂಗ್ಸ್ ತಂಡದ ಪರ ಆಡಲಿದ್ದಾರೆ. ಮೇಜರ್​ ಕ್ರಿಕೆಟ್​ ಲೀಗ್​​ನ ಮೊದಲ ಆವೃತ್ತಿಯು 2023 ರ ಜುಲೈ 13ರಿಂದ ಜುಲೈ 30ರವರೆಗೆ ಯುಎಸ್ಎನಲ್ಲಿ ನಡೆಯಲಿದೆ. 18 ದಿನಗಳಲ್ಲಿ 19 ಪಂದ್ಯಗಳು ನಡೆಯಲಿವೆ.

Exit mobile version