Site icon Vistara News

Ind vs Pak : ಪಾಕ್​ ತಂಡದ ಆಟಗಾರರಿಗೆ ಅದ್ಧೂರಿ ಆತಿಥ್ಯ; ಬಿಸಿಸಿಐ ವಿರುದ್ಧ ದೇಶಪ್ರೇಮಿಗಳು ಗರಂ

BCCI 1

ಅಹಮದಾಬಾದ್​: ಭಾರತ ಮತ್ತು ಪಾಕಿಸ್ತಾನಗಳ ನಡುವಿ ಗಡಿಯಾಚೆಗಿನ ಉದ್ವಿಗ್ನತೆಯ ನಡುವೆ ಇತ್ತಂಡಗಳ ನಡುವೆ ಕ್ರಿಕೆಟ್​ ಆಡಿಸುವುದಕ್ಕೆ ದೇಶ ಪ್ರೇಮಿಗಳ ಭಾರಿ ವಿರೋಧ ವ್ಯಕ್ತಗೊಂಡಿದೆ. ಅವರು ಪಾಕ್ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಇದೇ ವೇಳೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಾಕಾ ಅಶ್ರಫ್ ಸೇರಿದಂತೆ ಅತಿಥಿಗಳಿಗೆ ಬಿಸಿಸಿಐ ಭರ್ಜರಿ ಆತಿಥ್ಯ ನೀಡಿದೆ. ಅವರಿಗೆ ವಿಶೇಷ ಔತಣಕೂಟವನ್ನೂ ಆಯೋಜಿಸಿದೆ. ಇದು ದೇಶಾಭಿಮಾನಿಗಳನ್ನು ಇನ್ನೂ ಕೆರಳಿಸಿದೆ.

ಝಾಕಾ ಅಶ್ರಫ್ ಅವರ ಗೌರವಾರ್ಥ ಬಿಸಿಸಿಐ ಔತಣಕೂಟವನ್ನು ಆಯೋಜಿಸಲಿದ್ದು, ಇದರಲ್ಲಿ ಎಲ್ಲಾ ಬಿಸಿಸಿಐ ಅಧಿಕಾರಿಗಳು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ” ಎಂದು ಪಿಸಿಬಿ ತನ್ನ ಟ್ವಿಟರ್ ಹ್ಯಾಂಡಲ್​ ಮೂಲಕ ಹೇಳಿಕೊಂಡಿದೆ. ಈ ಬಗ್ಗೆ ಅಪ್ಪಟ ದೇಶ ​ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೆಗಾ ಪಂದ್ಯಕ್ಕೆ ಮುಂಚಿತವಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ, ಭಾರತ ಮತ್ತು ಪಾಕ್ ನಡುವಿನ ಬಹಿಷ್ಕಾರವು ಟ್ರೆಂಡಿಂಗ್ ಆಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಝಕಾ ಅಶ್ರಫ್ ಅವರಿಗೆ ಭಾರತ ಮತ್ತು ಬಿಸಿಸಿಐ ಆತಿಥ್ಯ ನೀಡಿರುವುದಕ್ಕೆ ಕೆಲವು ಅಭಿಮಾನಿಗಳು ಅಸಮಾಧಾನಗೊಂಡು ಬಗೆಬಗೆಯ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹೈದರಾಬಾದ್​​ನಲ್ಲಿ ಉತ್ಸಾಹಭರಿತ ಸ್ವಾಗತ ಮತ್ತು ಉತ್ತಮ ಆತಿಥ್ಯವನ್ನು ಪಡೆದಿರುವ ಬಗ್ಗೆಯೂ ಕೆಲವರ ಆಕ್ಷೇಪ ವ್ಯಕ್ತಪಡಿಸಿದ್ದರು. ಎರಡೂ ದೇಶಗಳ ನಡುವೆ ಮಿಲಿಟರಿ ಘರ್ಷಣೆ ನಡೆಯುವ ವೇಳೆ ಅವರಿಗೆ ಅದ್ಧೂರಿ ಆಹ್ವಾನ ಕೊಟ್ಟಿರುವುದು ಸರಿಯಲ್ಲ ಎಂದಿದ್ದರು. ಇದೀಗ ಭಾರತ ಮತ್ತು ಪಾಕ್ ಪಂದ್ಯದ ಮೊದಲು ಅಹಮದಾಬಾದ್ನಲ್ಲಿ ವಿಶೇಷ ಸಮಾರಂಭ ನಡೆಯಲಿದೆ. ವಿಶೇಷ ಕಾರ್ಯಕ್ರಮಕ್ಕೂ ಅಭಿಮಾನಿಗಳು ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : Ind vs pak : ಡೆಂಗ್ಯೂ ದೂರ; ಗಿಲ್​ ಮುಖದಲ್ಲಿ ನಗು, ಟೀಮ್ ಇಂಡಿಯಾಗೂ ಸಂತಸ

ವಾಸ್ತವವಾಗಿ, ಭಾರತ ಮತ್ತು ಪಾಕ್ ಪಂದ್ಯಕ್ಕೆ ಎನ್ಎಸ್ಜಿ ಕಮಾಂಡೋಗಳಿಂದ ಭದ್ರತೆ ಸಿಗಲಿದೆ. 26/11 ದಾಳಿಯ ಸಮಯದಲ್ಲಿ ಭಯೋತ್ಪಾದಕರ ವಿರುದ್ಧ ರಕ್ಷಿಸಿದ ಅದೇ ಸಶಸ್ತ್ರ ಘಟಕ ಇದು.

ಶನಿವಾರ ನಡೆಯುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ವಿಶ್ವಕಪ್​ ಪಂದ್ಯಕ್ಕೆ ಉಭಯ ತಂಡಗಳು ಈಗಾಗಲೇ ಅಹಮದಾಬಾದ್(Ahmedabad)​ ತಲುಪಿದ್ದು ಅಭ್ಯಾಸವನ್ನು ಆರಂಭಿಸಿವೆ. ಆದರೆ ಮೈದಾನ ಸುತ್ತಲೂ ಭದ್ರತಾ ಪಡೆಗಳು 24×7 ಕಟ್ಟೆಚ್ಚರ ವಹಿಸಿದ್ದಾರೆ. ಗುರುವಾರ ಪಾಕ್​ ತಂಡದ ಆಟಗಾರರು ಭಾರಿ ಬಿಗಿ ಭದ್ರತೆಯಲ್ಲೇ ಅಭ್ಯಾಸವನ್ನು ನಡೆಸಿದ್ದಾರೆ.

ಬಾಂಬ್​ ದಾಳಿಯ ಬೆದರಿಕೆ​

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂ(narendra modi stadium) ಮೇಲೆ ದಾಳಿ ನಡೆಸುವುದಾಗಿ ಈಗಾಗಲೇ ಕೆಲವು ಅನಾಮಿಕ ಕರೆಗಳು ಕೂಡ ಬಂದಿವೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬೆದರಿಕೆ ಹಾಕಿದ್ದ ಎನ್ನಲಾಗಿರುವ ವ್ಯಕ್ತಿಯನ್ನು ಅಹಮದಾಬಾದ್​ನ ಅಪರಾಧ ಪತ್ತೆ ದಳ ಬಂಧಿಸಿದೆ. ಈತ ತನ್ನ ಮೊಬೈಲ್‌ನಿಂದ ಬೆದರಿಕೆ ಇ-ಮೇಲ್‌ ಕಳುಹಿಸಿದ್ದ. ಆದರೆ ಈ ವ್ಯಕ್ತಿ ಯಾವುದೇ ಅಪರಾಧ ಹಿನ್ನೆಲೆಯನ್ನು ಹೊಂದಿಲ್ಲ. ಈತ ಮೂಲತಃ ಮಧ್ಯಪ್ರದೇಶದನಾಗಿದ್ದು ಗುಜರಾತ್‌ನ ರಾಜ್‌ಕೋಟ್‌ ಹೊರವಲಯದಲ್ಲಿ ವಾಸಿಸುತ್ತಿದ್ದ. ಸದ್ಯಕ್ಕೆ ಈತ ಪೊಲೀಸ್​ ಕಸ್ಟಡಿಯಲ್ಲಿದ್ದಾನೆ.

ಬಾಂಬ್​ ದಾಳಿಯ ಬೆದರಿಕೆಯಿಂದ ಹೆಚ್ಚುವರಿ ಪೊಲೀಸ್​ ಮತ್ತು ಆರ್ಮಿ ಪಡೆಯನ್ನು ಮೈದಾನ ಸುತ್ತಲೂ ನಿಯೋಗ ಮಾಡಲಾಗಿದೆ. ಮೈದಾನದ 100 ಮೀ. ಆವರಣದಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗಿದೆ. ಪಂದ್ಯ ನಡೆಯುವ ದಿನ ಸ್ಟೇಡಿಯಂ ಹೌಸ್​ಫುಲ್​ ಆಗುವುದು ಖಚಿತವಾಗಿದೆ. ಒಂದೇ ಕಡೆ ಲಕ್ಷಾಂತರ ಜನರು ಸೇರುವ ಜಾಗದಲ್ಲಿ ಅನಾಹುತವಾದರೆ ಭಾರಿ ಎಡವಟ್ಟು ಸಂಭವಿಸುತ್ತದೆ. ಹೀಗಾಗಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.

Exit mobile version