Site icon Vistara News

Sania Mirza: ಅಂತಿಮ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಬಳಿಕ ಭಾವುಕರಾದ ಸಾನಿಯಾ ಮಿರ್ಜಾ

Rohan Bopanna and Sania Mirza

ಮೆಲ್ಬೋರ್ನ್​: ಆಸ್ಟ್ರೇಲಿಯಾ ಓಪನ್(Australian Open)​ ಟೆನಿಸ್​ ಟೂರ್ನಿಯ ಮಿಶ್ರ ಡಬಲ್ಸ್​ ಫೈನಲ್​ ಪಂದ್ಯದ ಸೋಲಿನ ಮೂಲಕ ಸಾನಿಯಾ ಮಿರ್ಜಾ(Rohan Bopanna and Sania Mirza) ತಮ್ಮ ಕೊನೆಯ ಗ್ರ್ಯಾನ್‌ಸ್ಲಾಮ್‌ ಟೂರ್ನಿಯನ್ನು ಕೊನೆಗೊಳಿಸಿದರು. ಇದೇ ವೇಳೆ ಅವರು ಭಾವುಕರಾಗಿ ಕಣ್ಣೀರು ಸುರಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶುಕ್ರವಾರ ನಡೆದ ಮಿಶ್ರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಸಾನಿಯಾ ಮಿರ್ಜಾ-ರೋಹನ್​ ಬೋಪಣ್ಣ ಜೋಡಿ ಬ್ರೆಜಿಲ್​ನ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಾಟೋಸ್(Luisa Stefani and Rafael Matos) ವಿರುದ್ಧ 6-7, 2-6 ಸೆಟ್ ಗಳಿಂದ ಸೋಲು ಕಂಡರು.

ಪಂದ್ಯದ ಬಳಿಕ ಮಾತನಾಡಿದ ಸಾನಿಯಾ, ನನ್ನ ವೃತ್ತಿಜೀವನವು ಮೆಲ್ಬೋರ್ನ್​ನಲ್ಲಿ 2005 ರಲ್ಲಿ ಪ್ರಾರಂಭವಾಯಿತು, 2005ರಲ್ಲಿ ನಾನು ಇಲ್ಲಿ ಸೆರೇನಾ ವಿಲಿಯಮ್ಸ್‌ ಅವರನ್ನು ಮೂರನೇ ಸುತ್ತಿನಲ್ಲಿ ಎದುರಿಸಿದ್ದೆ. ಆಗ ನನಗೆ 18 ವರ್ಷ. ಇದೀಗ 18 ವರ್ಷಗಳ ಹಿಂದಿನ ಆ ದಿನವನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ. ನನ್ನ ಮಗನ ಮುಂದೆ ನಾನು ಗ್ರ್ಯಾನ್‌ಸ್ಲಾಮ್‌ ಫೈನಲ್​ ಆಡುತ್ತೇನೆ ಎಂದು ಯಾವತ್ತು ಯೋಚಿಸಿರಲಿಲ್ಲ. ಇದು ಕೂಟ ಸಾಧ್ಯವಾಯಿತು ಎಂದು ಹೇಳಿ ಕಣ್ಣೀರು ಸುರಿಸಿದರು. ಇದೇ ವೇಳೆ ಅವರು ಇದು ಬೇಸರದ ಕಣ್ಣೀರಲ್ಲ ʻಆನಂದ ಭಾಷ್ಪʼ ಎಂದರು.

ಇದನ್ನೂ ಓದಿ Australian Open 2023: ಆಸ್ಟ್ರೇಲಿಯಾ ಓಪನ್​; ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ ರನ್ನರ್​ ಅಪ್

“ನಾನು ಇಲ್ಲಿಗೆ ಬಂದು ಸಾಕಷ್ಟು ಟೆನಿಸ್‌ ಆಡಿದ್ದೇನೆ. ಕೆಲವೊಂದು ಪ್ರಶಸ್ತಿ ಗೆದ್ದಿದ್ದಕ್ಕೆ ನನಗೆ ಖುಷಿ ಇದೆ. ರಾಡ್‌ ಲೆವರ್‌ ಅರೇನಾ ಎನ್ನುವುದು ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುತ್ತದೆ. ನನ್ನ ಗ್ರ್ಯಾನ್‌ಸ್ಲಾಮ್‌ ವೃತ್ತಿಜೀವನಕ್ಕೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಕ್ರೀಡಾಂಗಣವಿಲ್ಲ” ಎಂದು ಹೇಳುವ ಮೂಲಕ ಕೊನೆಯ ಬಾರಿಗೆ ಆಸ್ಟ್ರೇಲಿಯಾದ ಟೆನಿಸ್ ಅಭಿಮಾನಿಗಳಿ ಧನ್ಯವಾದ ಹೇಳಿದರು.

Exit mobile version