Site icon Vistara News

ಪ್ರಜ್ಞಾನಂದ ತಂದೆ-ತಾಯಿಗೆ ಎಕ್ಸ್‌ಯುವಿ 400 ಇವಿ ಗಿಫ್ಟ್​ ನೀಡಿದ ಆನಂದ ಮಹೀಂದ್ರಾ

Praggnanandhaa and his mother

ಮುಂಬಯಿ: ಆನಂದ ಮಹೀಂದ್ರಾ(Anand Mahindra) ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಗುರಿಸಿ ಏನಾದರೂ ವಿಷೇಶ ಉಡುಗೊರೆಯನ್ನು ನೀಡುತ್ತಲೇ ಇರುತ್ತಾರೆ. ಈ ಮೂಲಕ ದೇಶದ ಕ್ರೀಡಾಪಟುಗಳಲ್ಲಿ ಮತ್ತಷ್ಟು ಸಾಧನೆ ಆತ್ಮವಿಶ್ವಾಸ ತುಂಬುವಂತೆ ಮಾಡುತ್ತಾರೆ. ಕಳೆದ ವಾರ ವಿಶ್ವಕಪ್​ ಚೆಸ್ಟ್(FIDE Chess World Cup) ಫೈನಲ್​ ಪಂದ್ಯವನ್ನಾಡಿದ ಆರ್ ಪ್ರಜ್ಞಾನಂದ(R Praggnanandhaa) ಅವರ ತಂದೆ ರಮೇಶ್‌ ಬಾಬು(Rameshbabu) ಮತ್ತು ತಾಯಿ ನಾಗಲಕ್ಷ್ಮೀ(Nagalakshmi) ಅವರಿಗೆ ಮಹೀಂದ್ರಾ ಎಕ್ಸ್‌ಯುವಿ 400 ಇವಿ(XUV4OO EV ) ಕಾರ್​ ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ.

ವಿಶ್ವಕಪ್​ನಲ್ಲಿ ರನ್ನರ್​ ಅಪ್​ ಆದ ಆರ್ ಪ್ರಜ್ಞಾನಂದ ಅವರಿಗೆ ಥಾರ್​ ಉಡುಗೊರೆಯಾಗಿ ನೀಡುವಂತೆ ಅನೇಕರು ಟ್ವಿಟರ್​ನಲ್ಲಿ ಆನಂದ ಮಹೀಂದ್ರಾ ಬಳಿ ಮನವಿ ಮಾಡಿದ್ದರು. ಈ ಟ್ವಿಟ್​ ಒಂದಕ್ಕೆ ರೀಪ್ಲೆ ಕೊಟ್ಟ ಆನಂದ ಮಹೀಂದ್ರಾ ಅವರು ಪ್ರಜ್ಞಾನಂದ ಸಾಧನೆಗೆ ಬೆನ್ನೆಲುಬಾಗಿ ನಿಂತ ಅವರ ತಂದೆ ಮತ್ತು ತಾಯಿಗೆ ಎಲೆಕ್ಟ್ರಿಕಲ್​ ಎಕ್ಸ್‌ಯುವಿ 400 ಕಾರ್​ ನೀಡುವುದಾಗಿ ತಿಳಿಸಿದ್ದಾರೆ.

“ನಾವು ಎಕ್ಸ್‌ಯುವಿ 400 ಇವಿ ಕಾರನ್ನು ಪ್ರಜ್ಞಾನಂದ ಅವರ ತಾಯಿ ನಾಗಲಕ್ಷ್ಮೀ ಹಾಗೂ ಅವರ ತಂದೆ ರಮೇಶ್‌ ಬಾಬು ಅವರಿಗೆ ನೀಡಲಿದ್ದೇವೆ. ಅವರು ತಮ್ಮ ಮಗನ ಸಾಧನೆಗೆ ಸಹಕರಿಸಿದ್ದಾರೆ. ಅಲ್ಲದೆ ಅವನ ಬೆಂಬಕ್ಕೆ ನಿಂತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಹೀಗಾಗಿ ಅವರು ಕೂಡ ನಮ್ಮ ಕೃತಜ್ಞತೆಗೆ ಅರ್ಹರು” ಎಂದು ಆನಂದ ಮಹೀಂದ್ರಾ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ Chess World Cup : ಅಮ್ಮನೊಂದಿಗಿನ ಮುದ್ದಾದ ಚಿತ್ರವನ್ನು ಹಂಚಿಕೊಂಡ ಚೆಸ್ ತಾರೆ ಪ್ರಜ್ಞಾನಂದ

ಸದಾ ಜತೆಗಿರುವ ತಾಯಿ-ಮಗ

18 ವರ್ಷದ ಚೆಸ್​ ಆಟಗಾರ ಯಾವಾಗಲೂ ತನ್ನ ತಾಯಿ ನಾಗಲಕ್ಷ್ಮಿ ಅವರ ಜತೆಗೆ ಇರುವ ಪ್ರತಿಭೆ. ತಾಯಿಯೂ ಪ್ರತಿ ಕ್ಷಣವೂ ಮಗನ ಜತೆಗೆ ಇರುತ್ತಾರೆ. ಈ ಮೂಲಕ ಅವರು ಪುತ್ರನ ಯಶಸ್ಸಿನ ಬಲವಾದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ. ಅವರ ತಾಯಿ ನಾಗಲಕ್ಷ್ಮಿ ಅವರು ಚೆಸ್ ವಿಶ್ವಕಪ್ ಫೈನಲ್ ಸಮಯದಲ್ಲಿ ಪೂರ್ತಿಯಾಗಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು. ಈ ಸಂದರ್ಭದ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. 

ತಾಯಿಯ ಬಗ್ಗೆ ಮೆಚ್ಚುಗೆಯ ಮಾತು

“ಫಿಡೆ ವಿಶ್ವಕಪ್ 2023 ರಲ್ಲಿ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಮತ್ತು 2024 ರ ಕ್ಯಾಂಡಿಡೇಟ್ಸ್ ಈವೆಂಟ್​​ಗೆ ಅರ್ಹತೆ ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ! ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ಪ್ರಾರ್ಥನೆಗಳನ್ನು ಸ್ವೀಕರಿಸಲು ಕೃತಜ್ಞರಾಗಿರುತ್ತೇನೆ! ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು, ನನ್ನ ಸದಾ ಬೆಂಬಲ, ಸಂತೋಷ ಮತ್ತು ಹೆಮ್ಮೆಯ ಅಮ್ಮ” ಎಂದು ಪ್ರಜ್ಞಾನಂದ ಬರೆದುಕೊಂಡಿದ್ದಾರೆ.

ದ್ವಿತೀಯ ಸ್ಥಾನಕ್ಕೆ ತೃಪ್ತಿ

ಗುರುವಾರ ನಡೆದಿದ್ದ ಫೈನಲ್​ ಪಂದ್ಯದ ಟೈ ಬ್ರೇಕರ್​ನ ಮೊದಲ ಸೆಟ್​ನಲ್ಲಿ ಪ್ರಜ್ಞಾನಂದ ಹಿನ್ನಡೆ ಅನುಭವಿಸಿ, ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದ್ದರೂ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್‌ ಕಾರ್ಲ್‌ಸನ್‌ ಗೆದ್ದು ವಿಶ್ವ ಕಿರೀಟ ತಮ್ಮದಾಗಿಸಿಕೊಂಡರು. ಪ್ರಜ್ಞಾನಂದ ಅವರು ವಿಶ್ವನಾಥನ್‌ ಆನಂದ್‌ ಬಳಿಕ ಚೆಸ್‌ ವಿಶ್ವಕಪ್‌ನಲ್ಲಿ ಫೈನಲ್​ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. 2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಭಾರತಕ್ಕೆ ವಿಶ್ವಕಪ್​ ಗೆದ್ದಿದ್ದರು. ಆದರೆ ಪ್ರಜ್ಞಾನಂದ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

Exit mobile version