Site icon Vistara News

Andre Russell: ಈಡನ್ ಗಾರ್ಡನ್ಸ್​ನಲ್ಲಿ ಸಿಕ್ಸರ್​ಗಳ ಮಳೆ ಸುರಿಸಿದ ಆ್ಯಂಡ್ರೆ ರಸೆಲ್

Kolkata Knight Riders vs Sunrisers Hyderabad

ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ ಐಪಿಎಲ್​ನ(IPL 2024) 3ನೇ ಪಂದ್ಯದಲ್ಲಿ ವಿಂಡೀಸ್​ ದೈತ್ಯ ಆ್ಯಂಡ್ರೆ ರಸೆಲ್(Andre Russell)​ ಅವರು ಪ್ರಚಂಡ ಬ್ಯಾಟಿಂಗ್​ ಮೂಲಕ ಸಿಕ್ಸರ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇವರ ಈ ಅಬ್ಬರದ ಬ್ಯಾಟಿಂಗ್​ನಿಂದ ಕೆಕೆಆರ್​ 200ರ ಗಡಿ ದಾಟಿದೆ.

ಕೆಕೆಆರ್ ತಂಡ 119 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ವೇಳೆ ಕ್ರೀಸ್​ಗಿಳಿದ ಆ್ಯಂಡ್ರೆ ರಸೆಲ್ ಸನ್​ರೈಸರ್ಸ್​ ಹೈದರಾಬಾದ್​ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನ ಬಂದಂತೆ ಕಾಡಿದರು. ಅದುವರೆಗೂ ಉತ್ತಮ ಸ್ಪೆಲ್​ ನಡೆಸಿದ್ದ ಬೌಲರ್​ಗಳು ರಸೆಲ್​ ಬ್ಯಾಟಿಂಗ್​ ಮುಂದೆ ಸರಿಯಾಗಿ ಚಚ್ಚಿಸಿಕೊಂಡರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಬಾರಿಸಿದ ರಸೆಲ್​ ನೆರೆದಿದ್ದ ಅಭಿಮಾನಿಗಳನ್ನು ಸಂಪೂರ್ಣವಾಗಿ ರಂಜಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇವರ ಈ ಬ್ಯಾಟಿಂಗ್​ ಕಂಡು ನೆಟ್ಟಿಗರು ‘ಫುಲ್​ ಪೈಸಾ ವಸೂಲ್’ ಎಂದು ಕಮೆಂಟ್​ ಮಾಡಿದ್ದಾರೆ.

ಮಯಾಂಕ್ ಮಾರ್ಖಂಡೆ ಅವರ ಒಂದೇ ಓವರ್​ನಲ್ಲಿ ಮೂರು ಸಿಕ್ಸರ್​ ಬಾರಿಸಿ ಮಿಂಚಿದರು. ಒಟ್ಟಾರೆ ಪಂದ್ಯದಲ್ಲಿ ಬರೋಬ್ಬರಿ 7 ಸಿಕ್ಸರ್​ ಸಿಡಿಸಿದರು. ಜತೆಗೆ ಮೂರು ಬೌಂಡರಿ ಕೂಡ ಬಾರಿಸಿ ಅಜೇಯ 64 ರನ್ ಗಳಸಿದರು. ಇವರ ಪ್ರದರ್ಶನಕ್ಕೆ ಫ್ರಾಂಚೈಸಿಯ ಒಡೆಯ ಶಾರುಖ್ ಖಾನ್ ಕೂಡ ಗ್ಯಾಲರಿಂದ ತಲೆಬಾಗಿ ನಮಿಸಿದರು. ಇವರಿಗೆ ಸಿಕ್ಸರ್​ ಕಿಂಗ್​ ಖ್ಯಾತಿಯ ರಿಂಕು ಸಿಂಗ್​ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿ 15 ಎಸೆತಗಳಲ್ಲಿ 23 ರನ್ ಬಾರಿಸಿದರು.

ಇದನ್ನೂ ಓದಿ IPL 2024: ಸೋಲಿನ ಬೆನ್ನಲ್ಲೇ ಡೆಲ್ಲಿಗೆ ಮತ್ತೊಂದು ಶಾಕ್; ಗಾಯಾಳು ​ಇಶಾಂತ್ ಮುಂದಿನ ಪಂದ್ಯಗಳಿಗೆ ಅನುಮಾನ!

ಆರಂಭಿಕ ಆಟಗಾರ ಫಿಲ್​ ಸಾಲ್ಟ್​ ಕೂಡ ಬಿರುಸಿನ ಬ್ಯಾಟಿಂಗ್​ ನಡೆಸಿ ಅರ್ಧಶತಕ ಬಾರಿಸಿದರು. ತಲಾ 3 ಸಿಕ್ಸರ್​ ಮತ್ತು ಬೌಂಡರಿ ನೆರವಿನಿಂದ 54 ರನ್​ ಹೊಡೆದರು. ಈ ಮೂವರು ಆಟಗಾರರ ಬ್ಯಾಟಿಂಗ್​ ನೆರವಿನಿಂದ ಕೆಕೆಆರ್​ ಏಳು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.


ಉಭಯ ತಂಡಗಳ ಆಡುವ ಬಳಗ


ಕೆಕೆಆರ್​: ಫಿಲಿಪ್ ಸಾಲ್ಟ್ (ವಿಕೆಟ್​ ಕೀಪರ್​), ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಹೈದರಾಬಾದ್​: ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್.

Exit mobile version