ನವ ದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದಾಖಲೆಯ ಐದನೇ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದ ಶ್ರೀಲಂಕಾದ ಯುವ ಮತ್ತು ಪ್ರತಿಭಾವಂತ ವೇಗಿ ಮಥೀಶಾ ಪತಿರಾನಾ ಅವರು ಏಕದಿನ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಸಮಯದಲ್ಲಿ ಗಾಯಗೊಂಡಿದ್ದರು. ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಶ್ರೀಲಂಕಾ ಆಡಿದ ಹಿಂದಿನ ಎರಡು ಪಂದ್ಯಗಳನ್ನು (ICC World Cup 2023) ಅವರು ತಪ್ಪಿಸಿಕೊಂಡಿದ್ದರು. ಇದೀಗ ಅವರ ಗಾಯದ ಸಮಸ್ಯೆಯಿಂದ ಹೊರ ಬರದ ಕಾರಣ ಟೂರ್ನಿಯಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದಾರೆ.
ಪಥಿರಾನಾ ಬದಲಿಗೆ ಅನುಭವಿ ವೇಗಿ ದುಷ್ಮಂತ ಚಮೀರಾ ಅವರನ್ನು ತಂಡಕ್ಕೆ ಸೇರಿಸುವ ಆಯ್ಕೆಯನ್ನು ‘ಲಂಕಾ ಲಯನ್ಸ್’ ಹೊಂದಿತ್ತು. ಆದಾಗ್ಯೂ, ಅವರು 20 ವರ್ಷದ ಆಟಗಾರನ ಬದಲಿಯಾಗಿ ಅನುಭವಿ ಹಾಗೂ ಸ್ಟಾರ್ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರನ್ನು ತಂಡಕ್ಕೆ ಸೇರಿಸಲು ನಿರ್ಧರಿಸಲಾಗಿದೆ. ಮ್ಯಾಥ್ಯೂಸ್ ಮತ್ತು ಚಮೀರಾ ಶ್ರೀಲಂಕಾ ತಂಡದೊಂದಿಗೆ ಪ್ರಯಾಣ ಮೀಸಲು ಆಟಗಾರರಾಗಿ ಇದ್ದರು. ಅಕ್ಟೋಬರ್ 26ರ ಗುರುವಾರ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಲು ಕುಸಾಲ್ ಮೆಂಡಿಸ್ ಪಡೆ ಮೈದಾನಕ್ಕೆ ಕಾಲಿಟ್ಟಾಗ ಶ್ರೀಲಂಕಾದ ಮಾಜಿ ನಾಯಕ ಪ್ಲೇಯಿಂಗ್ ಇಲೆವೆನ್ನಲ್ಲಿ ತಕ್ಷಣದ ಸ್ಥಾನವನ್ನು ಪಡೆಯಬಹುದು.
ಶ್ರೀಲಂಕಾದ ವೀಕ್ಷಕವಿವರಣೆಗಾರ ರೋಶನ್ ಅಬೆಸಿಂಘೆ ಅವರು ಪಥಿರಾನಾ ಬದಲಿಗೆ ಮ್ಯಾಥ್ಯೂಸ್ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ -2023 ಗಾಗಿ ಶ್ರೀಲಂಕಾ ತಂಡದಲ್ಲಿ ಗಾಯಗೊಂಡ ಮಥೀಶಾ ಪಥಿರಾನಾ ಬದಲಿಗೆ ಏಂಜೆಲೊ ಮ್ಯಾಥ್ಯೂಸ್ ಸ್ಥಾನ ಪಡೆಯಲಿದ್ದಾರೆ ಎಂದು 60 ವರ್ಷದ ಮ್ಯಾಥ್ಯೂಸ್ ರೋಶನ್ ಬರೆದಿದ್ದಾರೆ.
ಅನುಭವದ ಅನುಕೂಲ
ಮ್ಯಾಥ್ಯೂಸ್ 2011, 2015 ಮತ್ತು 2019ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದರು. ಆದಾಗ್ಯೂ, ಪಂದ್ಯಾವಳಿಯ 2023 ರ ಆವೃತ್ತಿಗೆ ಅವರನ್ನು ಶ್ರೀಲಂಕಾ ತಂಡದಿಂದ ಕೈಬಿಡಲಾಯಿತು. ಮ್ಯಾಥ್ಯೂಸ್ ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ಏಳು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ರಾಷ್ಟ್ರೀಯ ತಂಡಕ್ಕಾಗಿ 221 ಏಕ ದಿನ ಪಂದ್ಯಗಳನ್ನು ಆಡಿದ ಒಟ್ಟಾರೆ ಅನುಭವವನ್ನು ಹೊಂದಿದ್ದಾರೆ.
ಈ ಸುದ್ದಿಗಳನ್ನೂ ಓದಿ
Team India : ಭಾರತ ತಂಡದ ಆಟಗಾರರ ಮೋಜು, ಮಸ್ತಿಗೆ ಬ್ಯಾನ್; ಎಲ್ಲರಿಗೂ ಖಡಕ್ ಎಚ್ಚರಿಕೆ
ICC World Cup 2023 : ಟಿಬೆಟಿಯನ್ ಧರ್ಮಗುರುವಿನ ಆಶೀರ್ವಾದ ಪಡೆದ ನ್ಯೂಜಿಲ್ಯಾಂಡ್ ಕ್ರಿಕೆಟಿಗರು
ICC World Cup 2023 : ಪಾಕ್ ವಿರುದ್ಧ ಅಫಘಾನಿಸ್ತಾನದ ಗೆಲುವಿನಲ್ಲಿ ಭಾರತದ ಮಾಜಿ ಕ್ರಿಕೆಟಿಗನ ಕೈವಾಡ
ಶ್ರೀಲಂಕಾದ ನಿಯಮಿತ ನಾಯಕ ದಸುನ್ ಶನಕಾ ಇತ್ತೀಚೆಗೆ ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಕುಸಾಲ್ ಮೆಂಡಿಸ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ವಿಕೆಟ್ ಕೀಪರ್-ಬ್ಯಾಟರ್ ಮೆಂಡಿಸ್ಗೆ ಆಟದ ಬಗ್ಗೆ ಮ್ಯಾಥ್ಯೂಸ್ ಹೊಂದಿರುವ ಉತ್ತಮ ಜ್ಞಾನ ಮತ್ತು ನಾಯಕತ್ವದ ಅನುಭವ ಪಡೆಯಲು ಸಾಧ್ಯವಿದೆ.
2011ರ ಆವೃತ್ತಿಯ ಬಳಿಕ ಮ್ಯಾಥ್ಯೂಸ್ ಆಡುತ್ತಿರುವ ನಾಲ್ಕನೇ ವಿಶ್ವಕಪ್ ಇದಾಗಿದೆ. 36ರ ಹರೆಯದ ಮ್ಯಾಥ್ಯೂಸ್ ಶ್ರೀಲಂಕಾ ಪರ 221 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಮೂರು ಶತಕಗಳು ಮತ್ತು 40 ಅರ್ಧಶತಕಗಳೊಂದಿಗೆ 5865 ರನ್ ಗಳಿಸಿದ್ದಾರೆ. ಈ ಸ್ವರೂಪದಲ್ಲಿ 120 ವಿಕೆಟ್ ಉರುಳಿಸಿದ್ದಾರೆ.
ನಾಯಕ ದಸುನ್ ಶನಕಾ ಗಾಯದಿಂದ ತವರಿಗೆ ಮರಳಿದ ನಂತರ ವಿಶ್ವಕಪ್ನಿಂದ ಹೊರಗುಳಿದ ಲಂಕಾದ ಎರಡನೇ ಆಟಗಾರ ಪಥಿರಾನಾ. ಶನಕಾ ಬದಲಿಗೆ ಚಮಿಕಾ ಕರುಣರತ್ನೆ ಅವರನ್ನು ಆಯ್ಕೆ ಮಾಡಲಾಗಿದೆ. ಶನಕಾ ಬದಲಿಗೆ ಕುಸಾಲ್ ಮೆಂಡಿಸ್ ಲಂಕಾ ನಾಯಕನಾಗಿ ಆಯ್ಕೆಯಾಗಿದ್ದಾರೆ.