ಬೆಂಗಳೂರು : ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆದ ಐಪಿಎಲ್ (IPL 2023) ಮಿನಿ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಸನ್ರೈಸರ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಕಾವ್ಯಾ ಮಾರನ್ ಮಾಲೀಕತ್ವದ ಆ ತಂಡ ಮಯಾಂಕ್ಗಾಗಿ 8.25 ಕೋಟಿ ರೂಪಾಯಿ ಪಾವತಿ ಮಾಡಿದೆ. ಈ ಬಗ್ಗೆ ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ಮಯಾಂಕ್ಗೆ ಎಸ್ಆರ್ಎಚ್ ತಂಡದಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ ಎಂದು ಹೇಳಿದ್ದಾರೆ.
ಮಯಾಂಕ್ ಅಗರ್ವಾಲ್ ಅವರು ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ನಾಯಕರಾಗಿದ್ದರು. ವೈಯಕ್ತಿಕವಾಗಿ ಅವರು 12 ಪಂದ್ಯಗಳಲ್ಲಿ 196 ರನ್ ಬಾರಿಸಿದ್ದರು. ಇದು ಅವರ ಕಳಪೆ ಪ್ರದರ್ಶನವೂ ಹೌದು. ಅಲ್ಲದೆ, ಅವರ ಮುಂದಾಳತ್ವದ ಪಂಜಾಬ್ ಕಿಂಗ್ಸ್ ತಂಡ ಒಟ್ಟು 14 ಪಂದ್ಯಗಳಲ್ಲಿ ಏಳರಲ್ಲಿ ಮಾತ್ರ ಜಯ ಸಾಧಿಸಿ ಅಂತಿಮ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹಾಲಿ ಆವೃತ್ತಿಯಲ್ಲಿ ಅವರನ್ನು ಬಿಡುಗಡೆ ಮಾಡಿತ್ತು. iಇದೀಗ ಎಸ್ಆರ್ಎಚ್ ತಂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅನಿಲ್ ಕುಂಬ್ಳೆ ಅವರು ಪಂಜಾಬ್ ಕಿಂಗ್ಸ್ನ ಕೋಚ್ ಆಗಿದ್ದರು. ಫ್ರಾಂಚೈಸಿ ಅವರ ಗುತ್ತಿಗೆಯನ್ನೂ ವಿಸ್ತರಣೆ ಮಾಡಿಲ್ಲ.
ಐಪಿಎಲ್ ಹರಾಜಿನ ಕುರಿತು ಮಾತನಾಡಿದ ಕುಂಬ್ಳೆ “ಎಸ್ಆರ್ಎಚ್ ತಂಡದ ವಾತಾವರಣ ಉತ್ತಮವಾಗಿದೆ. ಹೀಗಾಗಿ ಅವರು ಪಂಜಾಬ್ ತಂಡದಿಂದ ಹೊರಕ್ಕೆ ಬಂದು ಈ ತಂಡ ಸೇರಿಕೊಂಡಿರುವುದು ಒಳ್ಳೆಯದಾಯಿತು. ಈ ಬದಲಾವಣೆ ಅವರಿಗೆ ಅನುಕೂಲ ಮಾಡಿಕೊಡಲಿದೆ,” ಎಂದು ಅವರು ಹೇಳಿದ್ದಾರೆ.
ಎಸ್ಆರ್ಎಚ್ ತಂಡ ಸೇರಿಕೊಂಡ ಬಳಿಕ ಮಾತನಾಡಿದ ಮಯಾಂಕ್ ”ಎಸ್ಆರ್ಎಚ್ ತಂಡದ ಭಾಗವಾಗಲು ನನಗೆ ಖುಷಿಯಾಗುತ್ತಿದೆ. ಮುತ್ತಯ್ಯ ಮುಳೀಧರನ್ ಹಾಗೂ ಬ್ರಿಯಾನ್ ಲಾರಾ ಅವರ ಜತೆಗಿರುವ ಕಾರಣ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ, ” ಎಂಬುದಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಕುಂಬ್ಳೆ ”ಮುತ್ತಯ್ಯ ಮುರಳೀಧರನ್ ಅವರ ಮಯಾಂಕ್ಗೆ ನೆರವಾಗುವರೇ ಎಂಬುದು ಗೊತ್ತಿಲ್ಲ. ಆದರೆ, ಬ್ರಿಯಾನ್ ಲಾರಾ ಅವರಿಂದ ನೆರವಾಗಲಿದೆ,” ಎಂದು ಹೇಳಿದ್ದಾರೆ.
113 ಐಪಿಎಲ್ ಪಂದ್ಯಗಳಲ್ಲಿ, ಮಯಾಂಕ್ ಅಗರ್ವಾಲ್ 134.51 ಸ್ಟ್ರೈಕ್ ರೇಟ್‌ನಲ್ಲಿ ಒಂದು ಶತಕ ಮತ್ತು 12 ಅರ್ಧ ಶತಕಗಳೊಂದಿಗೆ 2331 ರನ್ ಗಳಿಸಿದ್ದಾರೆ.
ಇದನ್ನೂ ಓದಿ | IPL 2023 | ಸನ್ರೈಸರ್ಸ್ಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕತ್ವ ಸಾಧ್ಯತೆ; ಇರ್ಫಾನ್ ಪಠಾಣ್ ವಿಶ್ವಾಸ